Thursday, 17 May 2018

ಕಾವ್ಯಮನೆ ನಿರ್ದೇಶಕ ಚಾಂದರವರ ಪದ್ಯ..

ಮೋರಿ ಅಲೆ

ದನದ ಉಚ್ಚೆಯಲಿ ದಾರಿ ಮಾಡಿ,
ಕೆಚ್ಚಲಲಿ ಕಿರೀಟ ತೊಟ್ಟು,
ಬಾಯಿಯಲ್ಲ ಬಚ್ಚಲು ಮಾಡಿ
ಬಾಯ್ಬಡುಕೊಂಡು ಬಂತು ನೋಡಿ
ಚರಕ ಹಿಡ್ದನ್ ನರಕ ತೋರ್ಸಿ,
ಹೊಲ್ಸು ಬಾಯಲ್ ರಾಮನ್ ಕರ್ಸಿ
ಗೋಡ್ಸೆಗೆಲ್ಲ ಗುಡಿಯ ಕಟ್ಟಿ
ಕಂಡವರಿಗೆಲ್ಲ ಗೋರಿ ಕಟ್ಟ್ಸಿ
ಹೆಜ್ಜೆ ಇಟ್ಟಲೆಲ್ಲಾ ರಕ್ತದ ದಾರಿ
ನಮ್ಮೂರಿಗೂ ಬಂತೂ ನೋಡ್ರೋ ಮೋರಿ!

ಗೋಧ್ರಾ ಗಿದ್ರಾ ಮರತೇ ಇಲ್ಲ
ಸುಟ್ಕೊಂಡವರು ಬದ್ಕೇ ಇಲ್ಲ
ಆದ್ರೂ ಇವನೇ ರಾಜ ಅಂತೆ
ಕುರುಡರ್ ಊರಾಗ್ ಒಂದೇ ಲಾಟಿ ಅಂತೆ
ಖಾಕಿ ಚಡ್ಡಿ ಹುಡ್ಗ ಇವನು,  ಹೆಡ್ರೂ ಇದ್ರೂ ಬ್ರಹ್ಮಚಾರಿ!
ಮೊನ್ನೆ ಗಾಂಧಿ ಕಣ್ಣು ಕಿತ್ತಿ ಸ್ವಚ್ಚ ಭಾರತ್ ಮಾಡದವನಂತೆ!
ಅನ್ನಗಿನ್ನ ತಿನ್ನಕ್ಕಿಲ್ಲ ಅಣಬೆ ಅಂದೆ ಪ್ರಾಣ ಅಂತೆ!
ದನದ ಬಾಡು ಮುಟ್ಟೆ ಇಲ್ಲ ಕೊಟ್ಟರೇ ಬ್ಯಾಡ ಅನ್ನಲ್ಲವಂತೆ !

ದೇಶ ಆಳಾಕೆ ಬಂದ್ವನಂತೆ ವಿಶ್ವಗುರು ಆಗೌನಂಥೆ!
ಹೆಂಡ್ರು ಮಕ್ಳು ಇಲ್ದೇ ಇದ್ರೂ ಆಸ್ತಿಯಂತೂ ಭಾರಿಯಂತೆ!
ಬೇಂದ್ರೆ ಗಿಂದ್ರೆ ಅಂತನಂತೆ ಕವಿತೆಗಿವಿಗೆ ಹಾಡ್ತಾನಂತೆ
ಬಾಯಿ ಬಿಟ್ರೇ ಬಚ್ಚಲ್ ವಾಸನೆ ಡೆಟಾಯಿಲ್ ಪೆನಾಯಿಲ್ ಕೊಡಬೇಕಂತೆ !

ಭಾರತದಾಗೆ ಇವನ್ ಭಕ್ತರೂ ಭಾರಿ ಆವರೇ,
ಎದೆಯ ಸೀಳಿ ಇವ್ನ್ ಫೋಟೋ ತೋರ್ಸಾರಂತೆ!
ರಾಮ ಬಿಟ್ರೇ ನೆಟ್ಸೂ ಇವನೇ,
ಸೀತೆಯಂತೂ ಲೆಕ್ಕಕ್ಕಿಲ್ಲ
ಕಲಿಯುಗ್ದ್  ಕಾಮಧೇನು ಲೋಕ ಉದ್ದಾರ ಮಾಡ್ತಾನಂತೆ !
ಜೈಲೂರಪ್ಪ ಇವನ ಭಕ್ತ , ಮನೆಲಿ ಇವನ್ದೇ ಫೋಟೋ ಅಂತೆ
ಅವನ ಅಂಗಾಲೂ  ನೆಕ್ಕೋದರಲ್ಲಿ ನಾಯಿಗಿಂತ ಇವನೇ ಮೇಲಂತೆ !

ಈ ಮುದುಕನ ಬಾಯಲಿ ಹಲ್ಲೇ ಇಲ್ಲ ಆದ್ರೂ ರಾಜ್ಯ ಆಳ್ತಾನಂತೆ
103 ಕೆ ನಿಂತ್ತೆ ಬಿಟ್ಟಿದೆ, ಆದರೂ ಗದ್ದಿಗೆ ಅವನ್ದೇ ಅಂತೆ !
ಕಮಲ ಬಿಟ್ಟು  ಹೋಗಿದ್ದನಂತೆ ಒಡೆದ ತೆಂಗಿನ ಕಾಯಿ ಆಗಿದ್ನಂತೆ!
ಜೈಲಿಗೂ ಇವನ್ಗೂ ಭಾರಿ ಸದರಾ
ಆಗಾಗಾ ಹೋಗಿ ಬಂದು ಮಾಡ್ತಾನಂತೆ !

ಆಣೆ ಇಡಾಕೆ ಎಲ್ರೂ ಸತ್ರೂ
ರೈತರ್ರೂ ಇನ್ನೂ ಬದ್ಕೇ ಐವರೇ
ಅವರ ಮೇಲೂ ಆಣೆ ಮಡಗಿ ಐತು, ಮೈತ್ರಿ ಗಿತ್ರಿ ಒಪ್ಪಕ್ಕಿಲ್ಲ
ತನ್ನೇ ಮಾರ್ಕೊಂಡವನಂತೆ  ತಿರ್ಪೆವಾಲಾ!
ಗದ್ದಿಗೆಗೆ ಈಗ ನಾಯಿ ಬಂತು
ಊರು ಕೇರಿ ಎಲ್ಲ  ದನದ ಉಚ್ಚೇ ವಾಸನೆ
ಅದೇ ಬಾಯಲಿ ಒದರತಾ ಐತೇ ಒಂದೇ ಸಮನೆ
ಭಾರತ ಮಾತಕೀ ಅಂತೆ ಜೈ ಭಾರತ ಮಾತಾಕೀ ಜೈ.........ಅಂತೆ

                   #  ಕವಿಚಂದ್ರ

Saturday, 18 November 2017

ಸಾವು

ದ ಡೆತ್ ಆಫ್ ಇವಾನ್ ಇಲಿಚ್ (ಸಾವು) - ಲಿಯೋ ಟಾಲ್ ಸ್ಟಾಯ್.
ಅನು :- ಓ ಎಲ್ ನಾಗಭೂಷಣ ಸ್ವಾಮಿ.

ಈ ದೀರ್ಘ ಕಥೆಯ ಪ್ರತಿ ಪುಟದಲ್ಲಿಯು, ನಿಜವಾದ ಬದುಕೆಂದರೆ ಯಾವುದು ? ಅದು ಹೇಗೆ  ? ಮನುಷ್ಯ ಬದುಕಿನ ಸತ್ಯಗಳನ್ನು  ಒಪ್ಪಿಕೊಳ್ಳದೆ, ತನ್ನ  ಅಭಿಪ್ರಾಯಗಳನ್ನು  ಯಾಕೆ ಸಮರ್ಥಿಸಿಕೊಳ್ಳುತ್ತಲೆ ಸಾಗುತ್ತಾನೆ ? ಎನ್ನುವುದನ್ನು ಎದುರುಗೊಳ್ಳುತ್ತಲೆ ನಾವು ಅದನ್ನು ಕಂಡುಕೊಳ್ಳಲು ಯೋಚಿಸಬಹುದಾದ ದಾರಿಗಳಿವೆ.  ಸಾವಿನ ತೀರಾ ಹತ್ತಿರವಿರುವ ರೋಗಸ್ಥ ಮನುಷ್ಯನೊಬ್ಬನ ನರಳುವಿಕೆಯ ಕಥೆ ಇದು. ಅವನು ನಾ ಸಮುದ್ರದಾಳದಲ್ಲಿಯಾಗಲಿ ಅಥವಾ ಭೂಮಿಯ ಗರ್ಭದಲ್ಲಾಗಲಿ ಇಷ್ಟು  ಒಂಟಿತನ ಅನುಭವಿಸಲು ಸಾಧ್ಯವೆ ಇಲ್ಲ ಎನ್ನುತ್ತಾನೆ.

ಇವಾನ್ ಇಲಿಚ್ ಸಮಾಜದ ಕಣ್ಣಿಗೆ  ಒಬ್ಬ ಪರಿಪೂರ್ಣ ಮನುಷ್ಯ. ಮನೆ, ಹೆಂಡತಿ, ಮಕ್ಕಳು,  ಉದ್ಯೋಗ  ಎಲ್ಲವೂ ಉಂಟು ಆದರೆ ಅವನ ಕ್ರಮಬದ್ಧವಾದ ಬದುಕು ಅವನಿಗೆ ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ಉಲ್ಟಾ ಹೊಡೆಯುತ್ತದೆ. ಸಂಸಾರದ ಭಿನ್ನಾಭಿಪ್ರಾಯಗಳು, ಮಗಳ ಒಣ ತಿರುಗಾಟ , ಹೆಂಡತಿಯ ಯಾಂತ್ರಿಕತೆ ಇವೆಲ್ಲ ಅವನನ್ನು ಕೊನೆಗಳಿಗೆಯಲ್ಲಿ ಹೇಸಿಗೆ ತರಿಸುತ್ತವೆ.

"ಟಾಲಸ್ಟಾಯನ ಈ ಕಥೆ ಸಾವನ್ನು ಕುರಿತು ನಾನು ಓದಿರುವ ಗ್ರೇಟೆಸ್ಟ್ ಕಥೆ" ಎಂದು ಹೇಳುವ ಓ ಎಲ್ ಎನ್ ಅವರು ತುಂಬಾ ಅಚ್ಚುಕಟ್ಟಾದ ಅನುವಾದ ಮಾಡಿದ್ದಾರೆ.  ಕಥೆಯ ಒಂದು ಗೆರೆಯು ಸರಿಯದಂತೆ.

ಕನ್ನಡದ ಸಾಹಿತ್ಯದಲ್ಲಿಯು ಸಾವಿನ ವಿಷಯ ವಸ್ತು  ಇಟ್ಟುಕೊಂಡು ಹಲವು ಬರಹಗಳು ಬಂದಿವೆ. ಆದರೆ ನನ್ನ ಮಟ್ಟಿಗಂತೂ ಇಷ್ಟು  ಅಚ್ಚುಕಟ್ಟಾಗಿರುವ ಕಥೆ ಇನ್ನೊಂದಿಲ್ಲ.  ಇಲಿಚನಲ್ಲಿರುವ " ಸಾವು ಎಂಬ ಒಂದು ಪ್ರಜ್ಞೆಯಲ್ಲಿ " ಏನೆಲ್ಲಾ ಬಿಚ್ಚಿಕೊಳ್ಳುತ್ತ ಹೋಗುತ್ತಾನಲ್ಲ, ಅವನ ಬಾಲ್ಯ,  ಬದುಕಿನ  ಅತ್ಯುತ್ತಮ ಸಂಗತಿಗಳು ಇವೆಲ್ಲವನ್ನೂ ಉಸಿರಿನಂತೆ ಒಳಗೆಳೆದುಕೊಳ್ಳುತಿರುವಾಗ , ಅವನು ಬದುಕಬೇಕಾಗಿದ್ದು ಹೀಗಲ್ಲ ಎನಿಸುತ್ತಿರುತ್ತದೆ. ಆದರೆ ಬದಲಾವಣೆಗೆ ಹೊರಳಬೇಕಂದರು ಕಪ್ಪು ಚೀಲದಲ್ಲಿ ಬಂಧಿಯಾಗಿ ಬರೀ ಕೊರಳಿನಿಂದ ಮಾತಾಡುವ ಸ್ಥಿತಿಯಲ್ಲಿರುತ್ತಾನೆ.

ನನಗೆ ಪೀಟರನ ವರ್ತನೆ ತುಂಬಾ ಕಾಡಿತು. ಸಾಮಾನ್ಯವಾಗಿ ನಾವು ದೂರದವರ ಸಾವನ್ನು ಗಂಭೀರವಾಗಿ ಪರಿಗಣಿಸುವುದೆಯಿಲ್ಲ ಅದು ಪರಿಗಣಿಸಬೇಕೆ ? ಏನೋ ಗೊತ್ತಿಲ್ಲ  ಅದೊಂದು ನಮ್ಮೊಳಗಿನ ವಿಷಯ. ಕುವೆಂಪು ಸಹ ಹೇಳುವುದು ಇದನ್ನೆ ತೀರಾ ಹತ್ತಿರದವರ ಸಾವು ಮಾತ್ರ ಹೃದಯ ಅಲುಗಾಡಿಸುತ್ತದೆಯಂದು. ಪೀಟರ್ ಇಲಿಚನ ಹೆಣ ನೋಡಿ ಹೇಳಿಕೊಳ್ಳುತ್ತಾನೆ, " ಸತ್ತವನು   ನಾನಲ್ಲವಲ್ಲ !". ಹೌದು ಪ್ರತಿಯೊಬ್ಬ ಮನುಷ್ಯ ಹೀಗೆ ಹೇಳಿಕೊಳ್ಳುತ್ತಲೆ ಇರುತ್ತಾನೆ.

" ಕಾಯಿಲೆ ಮತ್ತು ಆರೋಗ್ಯ ಮಾತ್ರ  ಅವನ ಆಸಕ್ತಿಯ ವಿಷಯಗಳಾದವು"- ನಾವೆಲ್ಲ  ಆರಾಮಾಗಿ ಇದ್ದಾಗ ಯಾವುದರ ಬಗ್ಗೆಯು ಯೋಚಿಸುವುದೆಯಿಲ್ಲ. ನಮ್ಮ ಮನೆಯ ಅಜ್ಜಿಗೆ ನೋಡಿದಾಗಲೆಲ್ಲ ವಯಸ್ಸಾಯ್ತಲ್ಲ ನರಳ್ತಾರೆ ಅನಸುತ್ತೆ. ಆದರೆ ನಮಗೆ ಆ ನರಳಾಟ ಆದರೆ ನಮ್ಮ ಯೋಚನೆಯ ಲಹರಿಯೆ ಬದಲಾಗುತ್ತದೆ. ಇಲ್ಲಿಯು ಸಹ ಇಲಿಚ 45 ವಯಸ್ಸಿಗೆ ಸತ್ತವನು ಅವನದೆನು ಸಾಯುವ ವಯಸ್ಸಲ್ಲ.

"ಶುದ್ಧ ಮನಸ್ಸನ್ನು ಕಳೆದುಕೊಂಡಿರುವ ಹದಿಹರೆಯದ ಹುಡುಗರ ಕಣ್ಣಿನಂತೆ ಆ ಹುಡುಗನ ಕಣ್ಣು ನೀರು ತುಂಬಿದವು" -  ತನ್ನ  ಸ್ಥಿತಿ ಕಂಡು ಅಳುವ ಮಗನ ಬಗ್ಗೆ  ಈ ರೀತಿ ಹೇಳುತಿದ್ದಾನೆ.
" ಮನುಷ್ಯನ ಸ್ವಭಾವಗಳ ಬಗ್ಗೆ  ಅವನು ಒಪ್ಪಿಕೊಳ್ಳಬೇಕಾದ ಸತ್ಯಗಳ ಬಗ್ಗೆ ಈ ಕಥೆಯಲ್ಲಿ ಟಾಲಾಸ್ಟಾಯಿ ಮಾತಾಡುತ್ತಿದಾರೆ" . ನಾವೆಷ್ಟೆ ಜನರ ಸಾವು ನೋಡಿದಾಗಲೂ, ನಾನು ಭಿನ್ನ  ಅದು ಹೇಗೆ ನನ್ನ ಸಾವಾಗುತ್ತದೆ ನಾನು ಅನಂತ ಎಂಬ ಉಡಾಫೆ ಇದ್ದೆ ಇರುತ್ತೆ,  ಮನುಷ್ಯ ತನ್ನ ಬದುಕುವ ರೀತಿಗೆ ಸಮರ್ಥನೆಗಳನ್ನು ಇಲಿಚನಂತೆ ಕೊಟ್ಟುಕೊಳ್ಳುತ್ತಲೆ ಹೋಗುತ್ತಾನೆ. ಆದರೆ ಬದುಕಿನ ಸತ್ಯಗಳು ಒಪ್ಪಿಕೊಂಡಷ್ಟು ನಮ್ಮ ಬದುಕು ಸುಂದರ...

# ಕಪಿಲ .ಪಿ ಹುಮನಾಬಾದೆ
18/11/2017.

Tuesday, 14 November 2017

ಹುಲಿಯ ಪದ್ಯಗಳು # ಜೋಗಿಬೆಟ್ಟು, ಚಾಂದ್.

ಹುಲಿ

ಹುಲಿಯೊಂದು ನಿನ್ನೆ
ಬಲಿಯಾಗಿದೆ
ಬಳಿ ಸುಳಿದಾಡುವ
ಕೆಲವು ಪುಕ್ಕಲರು ಹೇಳುತ್ತಿದ್ದರು,
" ಹುಲಿ ಇನ್ನೂ ಉಸಿರಾಡುತ್ತಿದೆ "

ಜೀವವಿದ್ದಾಗ ಹತ್ತಿರವೆಲ್ಲೂ
ಸುಳಿಯದಿದ್ದ ಕ್ರಿಮಿ, ಕೀಟಗಳಿಗೆಲ್ಲಾ
ಅಹಂಕಾರ!
ಗುಂಯ್ಗು‌ಡುತ್ತ ಮುತ್ತಿಕ್ಕಿದೆ
ಹುಲಿಯ ಕಳೇಬರದ ಮೇಲೆ
ನಾಯಿಯೂ ಎಳೆಯುತ್ತಿದೆ,
ನರಿಯೂ ಮೆರೆಯುತ್ತಿದೆ!

ಒಂದಿಬ್ಬರು ಹುಲಿಯ
ಎದೆಗೆ ಮೆಟ್ಟಿ ನಿಂತು
ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ,
" ಅವರೇ ಬೇಟೆಯಾಡಿದಷ್ಟು ಕ್ರೂರ ಠೀವಿ!"

" ಹುಲಿ ತ್ರಾಣವಿಲ್ಲದೆ ಸತ್ತದ್ದು,
ಮುಪ್ಪೇರಿ ಬೇಟೆ ಸಿಗದೆ ಹೋಗಿದ್ದು"
ಮೂದಲಿಸುವಿಕೆ, ತಾತ್ಸಾರ ತಾರಕಕ್ಕೆ!
ಕೊಲ್ಲುವಾಗ ಅವರು ಬೀಸಿದ ಬಲೆ,
ಚಿಮ್ಮಿದ ಗುಂಡು, ಮೋಸದ ಅಕ್ರಮಣ
ಎಲ್ಲವೂ ನ್ಯಾಯ ಸಮ್ಮತ ?..

ಮುನವ್ವರ್, ಜೋಗಿಬೆಟ್ಟು.

2.
ನನಗೆ ಗೊತ್ತು, ನಿಮಗೆ ಟಿಪ್ಪುವಿನ ಚೂಪಾದ ಮೀಸೆಯ ಕಂಡರೆ, ಅವನ ಖಡ್ಗವ ಕಂಡಷ್ಟೇ ಭಯವೆಂದು,
ಏಕೆಂದರೆ, ಹುಲಿಯ ಎದುರು ನಿಲ್ಲಲಾಗದ ವೀರತ್ವದವರು ನೀವು!!
ಅಷ್ಟಕ್ಕೂ, ಹುಲಿಯನ್ನು ಕೊಲ್ಲಲು ದನದ ಕಥೆ ಹೇಳಿದವರಲ್ಲವೇ ನೀವು!

                       
                            .  . #ಕವಿಚಂದ್ರ

Sunday, 12 November 2017

ನೇತ್ರಾವತಿಯವರ ಕವನ

ಜೋಳಿಗೆ

ಜೋಳಿಗೆ ತುಂಬ
ದಟ್ಟ ಕಾರ್ಮೋಡಗಳು
ಬಟ್ಟಲಲ್ಲೇ ಕಡಲನ್ನೇ
ಸೆರೆಹಿಡಿದ ಒಡೆಯ

ಪೌರ್ಣಿಮೆಗೂ ಈಗ
ಜೋಳಿಗೆಯಾಸೆ
ಮೊರೆತವೀಗ ಮೌನ..

ಪ್ರಶಾಂತ ಸಾಗರ ಪೂರ
ಅಸಹನೆಯ ಹಿಟ್ಲರ್ಗಳ
ಬಿಟ್ಟುಹೋದ
ದಿಗಂತದ ಮಾಲೀಕ..

ಆಸರೆಯ ಕೈಗಳಿಗೀಗ
ಹೆಗಲಿಗೆ ಬಂದದ್ದು ಹುನ್ನಾರವಿಲ್ಲದ
ಮಂದಮಾರುತ
ಜ್ವಾಲೆ ಕಿಡಿಗಳು ಆಗಸಕ್ಕೇರಿ
ಚುಕ್ಕೆಯಾಗಿ ಹಗಲಲ್ಲೇ ಕಂಗೊಳಿಸುವಂತೆ

ಲೋಲಕ ತೂಕದ
ತರಹೇವಾರಿ ಕಲ್ಗಳಿಗೆ
ತೆರೆ ನೃತ್ಯಗಾರ್ತಿಯ ನೃತ್ಯ
ನೋಡುವ ತವಕದೇ
ಒಂದರ ಮೇಲೊಂದು
ತಣ್ಣನೆ ಸ್ಪರ್ಧೆ..

ಬಳುಕುವ ಅಲೆಗಳಿಗೀಗ
ಮಾಂತ್ರಿಕನಾದ ಸ್ತಬ್ದನ ವಶ
ಸ್ಮೃತಿಗೀಗ ಭೂತದಕ್ಕರೆ
ಉಸುಕು ಕೆಳಮಾಳಿಗೆಯಲಿ
ಆರಾಮ ಚೇರಲ್ಲಿ ಕಪ್ಪೆಚಿಪ್ಪಿನೆಣಿಕೆ

# ನೇತ್ರಾವತಿ

Saturday, 14 October 2017

ಡಾನ್ ಕ್ವಿಕ್ಸಾಟನ ಸಾಹಸಗಳು - ಮಿಗುವೆಲ್ ಸರ್ವಾಂಟಿಸ್.
ಅನು: ಕೆ.ವಿ.ತಿರುಮಲೇಶ್.

ಇದರ ಹೆಸರು ನೋಡಿದ ಕೂಡಲೆ ಇದೊಂದು ರೋಚಕ ಪುಸ್ತಕವೆಂದೂಹಿಸಿದರೆ ಅದು ನಮ್ಮದೆ ತಪ್ಪು.  ಇದೊಂದು ಹಾಸ್ಯ ಪ್ರಧಾನ ಕಾದಂಬರಿ. ಇದರ ಲೇಖಕ ಜೈಲಿನಲ್ಲಿದ್ದಾಗ ಬರೆದದ್ದು. ಕಂಬಾರರು ಒಂದು ಕಡೆ ಲೇಖಕನೊಬ್ಬನಿಗೆ ಆತ್ಮಕಥೆ ಬರೆಯುವ ಜರೂರತ್ತು  ಇರುವುದಿಲ್ಲ ಅವನ ಸಾಹಿತ್ಯವೆ ಅವನ ಕಥೆಯಾಗಿರುತ್ತದೆ ಎಂದು ಹೇಳಿದ ನೆನಪು. ಮಿಗುವೆಲನ ತಂದೆ ಶಸ್ತ್ರಚಿಕಿತ್ಸಕ. ಈ ವೃತ್ತಿಗೆ ಇಗಿರುವಷ್ಟು ವ್ಯಾಲಿವ್ ಆಗಿರಲಿಲ್ಲ.  ಊರಿಂದ ಊರಿಗೆ ಅಲಿಯಬೇಕಾಗಿತ್ತು. ಕ್ಷೌರಿಕರೆ ಕೆಲವು ಸಲ ಸಣ್ಣ ಪುಟ್ಟ ಶಸ್ತ್ರಚಿಕಿತ್ಸಗಳು ಮಾಡುತ್ತಿದರಂತೆ. ತಂದೆಯ ಅಲೆದಾಟ ಮಿಗುವೆಲಗೆ ಹೊಸ ಲೋಕ ಪರಿಚಯಿಸಿತು. "ಡಾನ್ ಕ್ವಿಕ್ಸಾಟನ ಪಾತ್ರರಚನೆಯಲ್ಲಿ ಅವನು ಸ್ವಲ್ಪಮಟ್ಟಿಗೆ ತನ್ನದೇ ಈ ಗೀಳನ್ನು ಗೇಲಿ ಮಾಡಿದ್ದಿರಲೂಬಹುದು ! ಎಂದು ತಿರುಮಲೇಶರು ಹೇಳುತ್ತಾರೆ. ಮಿಗುವೆಲ್ ಯುದ್ಧದಲ್ಲಿಯು ಭಾಗವಹಿಸಿದವನು ಅವನ ಹಿನ್ನಲೆ ನೋಡಿದರೆ ಈ ಕಾದಂಬರಿ ಅರ್ಥ ಮಾಡಿಕೊಳ್ಳಲು ಸಹಾಯಕವಾಗುತ್ತದೆ. ಮಿಗುವೆಲನಿಗೆ ಇದೊಂದೆ ಪುಸ್ತಕದಿಂದ ಇಂಗ್ಲೆಂಡನಲ್ಲಿ ಶೇಕಸ್ಪಿಯರನಷ್ಟೇ ಲೋಕಪ್ರಸಿದ್ಧಿ ಮತ್ತು ಮಹತ್ವ ಪಡೆದನಂತೆ.

ಇದೊಂದು ಅಮಿತ ಸಾಹಸ ಕೃತಿಗಳು ಓದಿದವನೊಬ್ಬ ಕಾಲಾಂತರದಲ್ಲಿ ಮತಿಭ್ರಮಣೆಗೊಳಗಾದ ಕಥೆ. ಪುಸ್ತಕಗಳನ್ನು ಕೊಳ್ಳುವುದಕ್ಕಾಗಿ ತನ್ನ ಜಮೀನಿನ ಬಹುಭಾಗವನ್ನೆ ಮಾರುತ್ತಾನೆ .ಹೊಟ್ಟೆ ಹುಣ್ಣಾಗುವಷ್ಟು ನಗಿಸುವ ಮತ್ತು ಬದುಕಿನ ಇತರ ಸಂಗತಿಗಳು  ಪರಿಚಯಿಸುವ ಕೃತಿ ಇದು. ತಾನು ಓದಿದ ಸರದಾರರಂತೆ ಆಗಬೇಕೆಂದು ಕ್ವಿಕ್ಸಾಟನ  ಬಡ ಬಂಟ ಸಾಂಕೋ ಜೊತೆ ಮತ್ತು ತನ್ನ ಕತ್ತೆ ಏರಿ ಹಾದಿಯಿಲ್ಲದ ನೆಲಕ್ಕೆ ನಡೆಯುತ್ತಾನೆ. ತನ್ನೆದುರು ಕುರಿಗಳ ಹಿಂಡು ಬರುತ್ತಿದ್ದರು ಅದೊಂದು ಯಾವುದೋ ದೊಡ್ಡ ಸೈನ್ಯವೆಂದು ತಿಳಿದು ಅನೇಕ ಕುರಿಗಳ ಸತ್ತು ಹೊಡೆಯುತ್ತಾನೆ. ಛತ್ರವು ಸಹ ದುರ್ಗವೆಂದೆ ಭಾವಿಸುತ್ತಾನೆ. ಡಲ್ಸೀನಿಯಾ ಡೆಲ್ ಟೊಬೋಸೋ ಎನ್ನುವುದು ಅವನ ಕಲ್ಪಿತ ದೇವ ಪ್ರೇಯಸಿ ಇವಳಿಗವ ಮಾಡುವ ಪ್ರಾರ್ಥನೆಗಳು ಅಯ್ಯೋ  ಎನಿಸುತ್ತವೆ ಜೊತೆಗೆ ನಗು ಕೂಡ.

ಇವನ ಮನೆಯವರು ಇವನ ಸಂಗ್ರಹದ ಪುಸ್ತಕಗಳೆಲ್ಲ ಸುಡುತ್ತಾರೆ. ಕೊನೆಗೆ ಅದು ಹೇಗೊ ಅವನೂರಿನ ಕ್ಷೌರಿಕ ಮತ್ತು ಪುರೋಹಿತ ಕಳೆದ ಕ್ವಿಕ್ಸಾಟನಗೆ ವಾಪಸ್ ತಂದು ಮನೆಗೆ ಮುಟ್ಟಿಸುತ್ತಾರೆ. ಇದೊಂದು ಬರೀ ಕಥೆಯಲ್ಲ ಸೂಕ್ಷ್ಮವಾಗಿ ನೋಡಿದರೆ ಬದುಕಿದೆ. ಇವನೊಂದಿಗೆ ಹೋದ ಬಂಟ ಮರಳಿ ಬಂದಾಗ ಅವನ ಹೆಂಡತಿ ನನಗೆ ಲಂಗ ತಂದಿಯಾ ? ಮಕ್ಕಳಿಗೆ ಉಡಲು ಬಟ್ಟೆ ? ಎಂದು ಕೇಳುತ್ತಾಳೆ.  ಈ ಎಲ್ಲಾ ಪ್ರಶ್ನೆಗಳು ಧೂಳಂತೆ ಪುಡಿ ಮಾಡಿ ಬಂಟ ಸಾಂಕೋ ಹೇಳುತ್ತಾನೆ ಮುಂದೊಂದು ದಿನ ನೀ ದೊರೆಸಾನಿ ಆಗುತಿ ಎನ್ನುತ್ತಾನೆ ನನ್ನಗನಿಸುವುದೆನೆಂದರೆ ಒಬ್ಬ ಸಾಮಾನ್ಯ ಮನುಷ್ಯನೊಳಗಿನ ಅಪರಿಮಿತ ಕನಸುಗಳು ಗುಳ್ಳೆ ಒಡೆದು ಹೋರಬಂದಾಗ ಅವು ನಿಲ್ಲಲಾರವು. ಆ  ಕಾಲದ ಜಿತ ಪದ್ದತಿ, ಘೋರ ಶಿಕ್ಷೆಗಳು, ಮೇಲ್ವರ್ಗ, ದಾರಿಹೋಕರು, ಪಾದ್ರಿ ಎಲ್ಲರನ್ನೂ ಎಲ್ಲರನ್ನೂ ಕ್ವಿಕ್ಸಾಟ ಭೇಟಿಯಾಗುತ್ತಾನೆ ಸಾಮಾನ್ಯ ಮನುಷ್ಯನಂತೆ ಅಲ್ಲ ವೀರ ಸರದಾರನಂತೆ.

ಕೊನೆಗೆ ಬಂಟ ಸಾಂಕೋ ಹೇಳುತ್ತಾನೆ :-
" ಕೆಲವೊಂದು ಸಾಹಸಗಳು ನಾವು ಬಯಸುವಷ್ಟು ಇಷ್ಟವಾಗುವಂಥವು ಅಲ್ಲ ಎನ್ನುವುದೇನೋ ನಿಜ. ಯಾಕಂದರೆ ನೂರರಲ್ಲಿ ತೊಂಬತ್ತೊಂಬತ್ತರಷ್ಟು ದುರದೃಷ್ಟಕರವಾಗಿರುತ್ತವೆ  ಆದರೂ ಸಾಹಸದ ನಿರೀಕ್ಷೆ ಸಂತೋಷವನ್ನೆ ನೀಡುತ್ತದೆ.

ತಿರುಮಲೇಶರವರ ಕಾವ್ಯಾತ್ಮಕ ಅನುವಾದ ಇಷ್ಟವಾಗುವಂತಹದು. ಬಟ ಸಾಂಕೋ ಕಥಾನಾಯಕನಿಗಿಂತ ಕಾಡುತ್ತಾನೆ.

# ಕಪಿಲ ಪಿ ಹುಮನಾಬಾದೆ.
15/10/2017.

Saturday, 30 September 2017

ಜಂಬಣ್ಣ ಅಮರಚಿಂತರ ಕಾದಂಬರಿ

ತೆರೆದ -ಮನ ( ಪುಸ್ತಕಭಿಪ್ರಾಯ)
ಬೂಟುಗಾಲಿನ ಸದ್ದು ( ಕಾದಂಬರಿ) - ಜಂಬಣ್ಣ ಅಮರಚಿಂತ.

ಯಾವುದೇ ಸೃಜನಶೀಲ ಬರವಣಿಗೆಯು ಓದುಗನಿಗೆ "ಅನುಭವಿಸುವಿಕೆಯನ್ನು" ಹುಟ್ಟಿಸುವಂತಿರಬೇಕು. ಒಂದು ಫಿಲ್ ಕೊಡಬೇಕು ಆ ಸ್ಪರ್ಶ ಓದುಗನೆದೆ ಸವರುತ್ತಲೆ ಇರಬೇಕು. ಆ ರೀತಿಯ ಕೃತಿಗಳು ಉತ್ತಮವಾಗುತ್ತವೆ. ಕಥೆ ಬರೆಯುವುದೆಂದರೆ ಬರೀ ಕಥೆ ಇಡುವುದಲ್ಲ. ಅದು ಓದುಗನ ಮನಸ್ಸೊಳಗೆ ಇನೆನೋ ಆಗಬೇಕಾದದ್ದು ಅದು ಇನೆನೋ ಆಗಬೇಕೆನ್ನುವುದು ಹೇಳಲಾರದಂತಹದಾಗಿರುತ್ತದೆ ಅದು ಅನುಭವಿಸಬೇಕಷ್ಟೆ. ಹೀಗಂದ ಮಾತ್ರಕ್ಕೆ ಕುತೂಹಲ ಹುಟ್ಟಿಸುವ ಅಥವಾ ಪತ್ತೇದಾರಿ ಕಥೆಗಳಂತಲ್ಲ. ತೇಜಸ್ವಿಯವರ ಲಿಂಗ ಬಂದ ಕಥೆಯೆ ಗಮನಿಸಿ ಅಥವಾ ಇನ್ಯಾವುದೇ ದೊಡ್ಡ ಲೇಖಕನ ಬರಹ ಗಮನಿಸಿದಾಗ ಅದರೊಳಗೆ ಓದುಗನಿಗೆ ಒಂದು ರೀತಿಯ ಅನುಭವಿಸಿಕೆ ಉಂಟು ಮಾಡುವ ಗುಣವಿರುತ್ತದೆ.

ಇಷ್ಟೆಲ್ಲ ಯಾಕೆ ಹೇಳಿದೆನೆಂದರೆ ,ಜಂಬಣ್ಣ ಅಮರಚಿಂತರ ಕುರುವಯ್ಯ ಮತ್ತು ಅಕುಂಶದೊಡ್ಡಿ ಕಾದಂಬರಿಗಿರುವ ಒಂದು ರೀತಿಯ ದಟ್ಟತನದ ಕಥಾಹಂದರ ಬೂಟುಗಾಲಿನ ಸದ್ದಿಗಿಲ್ಲ. "ಚದುರುರಿದ ಕಥೆಯಿದೆ". ಇದರಾಚೆಗೂ ಇದು ತನ್ನದೇ ವಿಶೇಷತೆ ಮತ್ತು ಮಹತ್ವ ಹೊಂದಿದೆ. ಹೈದರಾಬಾದ ಕರ್ನಾಟಕದಲ್ಲಿ  ರಜಾಕರರು ಮಾಡಿರುವ ಅನಾಚಾರಗಳು, ದಾಳಿ, ಹಿಂಸೆಯನ್ನು ಈ ಕೃತಿ ಬಿಚ್ಚಿಡುತ್ತದೆ.

" ಈ ಪ್ರಾಂತ್ಯದ ಒಟ್ಟು ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಗ್ರಹಿಸುವ ಕಥನ ಬಂದಿಲ್ಲ. ಬರುವ ಅಗತ್ಯವಿದೆ. ಬೂಟುಗಾಲಿನ ಸದ್ದು ಒಂದು ಪ್ರಯತ್ನವಷ್ಟೆ. ಇದು ಬರೆಯುವವರಿಗೆ ಪ್ರೇರಣೆ ನೀಡಲೆಂದು ಆಶಿಸುತ್ತೇನೆ"- ಮುನ್ನುಡಿ ಬರೆಯುತ್ತ ನುಗಡೋಣಿಯವರು ಆಡಿರುವ ಮಾತುಗಳಲ್ಲಿ ನನಗೆ " ಅಗತ್ಯವಿದೆ " ಎನ್ನುವ ಪದವೆ ಎದ್ದು ಕಾಡುತ್ತಿದೆ.

ಶಾಂತರಸದ ಬಡೇಸಾಬನ ಪುರಾಣದಂತಹ ಕಥೆ ತೀರಾ ರಜಾಕರ ಆಳ್ವಿಕೆ ನೆಪವಾಗಿಟ್ಟುಕೊಂಡು ಬಂದ ಕಥೆ. ರಜಾಕರರ ಹುಟ್ಟುವಿಕೆ ಮತ್ತು ನಿರ್ಗಮನದ ಮಧ್ಯೆ ಇರುವ ಕಥನವದು. ಲಂಕೇಶರವರ ದಾಳಿ ಕಥೆ ಸಂಕೀರ್ಣವಾಗಿದ್ದು. ಹತ್ತು ಹಲವು ಅಂಶಗಳು ಹೇಳುತ್ತದೆ. ಪ್ರೇಮ, ಕಾಮ, ದಾಳಿಯ ದಾಹ, ಸಂಶಯ, ಒಗ್ಗಟ್ಟು  ಎಲ್ಲವೂ ಬಿಚ್ಚಿಡುತ್ತದೆ.
ಈ ಸಾಲಿಗೆ ಬೂಟುಗಾಲಿನ ಸದ್ದು ಸಹ ಸೇರಬಹುದಷ್ಟೆ. ಇದರ ಮಧ್ಯೆಯು ಸಂತನ ಸವಾರಿ, ಮಡಿಬಟ್ಟೆ, ಕಚೇರಿಯಲ್ಲಿ ಕತ್ತೆಗಳು ಈ ಕಥಾಭಾಗಗಳು ತಮ್ಮದೆ ಅಸ್ಮಿತೆ ಹೊಂದಿವೆ. ಒಂದು ಸಾಮಾನ್ಯ ಅಗಸನ ಕುಟುಂಬದ ಮೂಲಕ ಒಟ್ಟು ಚಿತ್ರಣ ನೋಡಲು ಹೋಗಿ ಇನೆನೋ ಆಗಿದೆ. ಅದಕ್ಕೆ ಲೇಖಕನ ಬದುಕಿನ ವೈಯಕ್ತಿಕ ಕಾರಣಗಳು ಸಹ ಇವೆ.

ಮರೀಜ್ ಭಿ ತುಮ್ಹೀ ಹೋ
ಹಕೀಮ್ ಭಿ ತುಮ್ಹಿ ಹೋ
ನಸ್ ಕೋ ಪಕಡು ಲೊ, ಔರಜಾನೋ
ತುಮ್ಹೆ ಬೀಮಾರಿ ಕ್ಯಾ ಹೈ
ಇಸ್ ಬಿಮಾರಿ ಕಾ ದವಾಭಿ ತಮ್ಹಿ ಹೋ
ಔರ್ ದುವಾಭಿ ತುಮ್ಹೀ ಹೋ.
(ಪುಟ ನಂ-27.)
ಸಂತನ ಸವಾರಿಯಲ್ಲಿ ಮಾಸುಂಅಜ್ಜ ಆಡುವ ಮಾತುಗಳಿವು ಇದು ಊರವರಿಗೆ ಒಗ್ಗಟ್ಟಾಗಿಸಲು ಸೂಫಿಶರಣರ ಮಹತ್ವ ಸಾರುತ್ತದೆ.

"ಹಗಲು ಕಪ್ಪನೆ ಬುರಖಾ ಧರಿಸಿದಂತೆ ಕಾಣುತ್ತಿತ್ತು. ಕಾರ್ಮೋಡಗಳು ಮದವೇರಿದ ಅನೆಯಂತೆ ಮುಗಿಲು ತುಂಬಾ ಓಡಾಡುತ್ತಾ ಡಿಕ್ಕಿ ಹೊಡೆಯುತ್ತಾ ಗುಡುಗುತ್ತಿದ್ದವು. ಚಕಚಕನೆ ಮಿಂಚು, ಖಡಲ್ ದಡಲ್ ಎಂದು ಸಿಡಿಲು ಜೊತೆಗೂಡಿ ಗುಡುಗು ಅರ್ಭಟಿಸುತ್ತಿತ್ತು" ರೂಪಕತ್ಮಕವಾಗಿ ರಜಾಕರರ ದಾಳಿಯ ಮುನ್ಸೂಚನೆಯನ್ನು ಬರೆಯುತ್ತಾರೆ.

ಒಟ್ಟಾರೆ ಕಾದಂಬರಿ ಕೋಮು ಸೌಹಾರ್ದತೆ ಬಗ್ಗೆ ಹೇಳುತ್ತದೆ. ರಜಾಕರರ ನಂತರ ಹಿಂದೂಗಳ ಆಕ್ರೋಶಕ್ಕೆ ಸತ್ತ ಮುಸ್ಲಿಂರೆಷ್ಟೋ ? . ಇಲ್ಲಿ  ಮದರಸಾಬು ಎನ್ನುವ ಮುಸ್ಲಿಂ ವ್ಯಕ್ತಿ ಹಿಂದೂಗಳಿಗೆ ಸಹಾಯ ಮಾಡಿದ್ದರ ಬಗ್ಗೆ ಸಹ ಇದೆ. ಇವೆಲ್ಲ ಅಂಶಗಳು ಗಮನಿಸಿದಾಗ ಕೆಲವೆ ಕೆಲವು ಮುಸ್ಲಿಂರು ರಜಾಕರಾಗಿದ್ದು ಇವರೆ ಇದೆಲ್ಲ ಅನಾಚಾರ ಮಾಡಿದರು. ಒಟ್ಟಾರೆಯಾಗಿ  ಒಂದು ಕೋಮುವನ್ನು ದ್ವೇಷಿಸುವುದು ಮೂರ್ತನವಾಗಿದೆ ಎನ್ನುವುದೆ ಕಾದಂಬರಿ ಧ್ವನಿಸುತ್ತದೆ. ರಜಾಕರರ ವಿರುದ್ಧ ಕೆಳವರ್ಗದವರಿಗೆ ಹೋರಾಡಲು ಹಚ್ಚಿ ತಾವು ಭಧ್ರವಾಗಿದು ಮುಂದೆ ರಾಜಕೀಯದಲ್ಲಿ ಸಹ ಪ್ರವೇಶ ಪಡೆದ ಮೇಲ್ವರ್ಗದವರ ಕುತಂತ್ರ ಬಿಚ್ಚಿಡುವ ಕಥೆ ಸಹ ಇದಾಗಿದೆ. ಅನೇಕ ಮಾನವೀಯ ಮೌಲ್ಯಗಳಿಟ್ಟುಕೊಂಡಿರುವ ಇದು ಕಲಾತ್ಮಕತೆಯ ಹೆಣಿಗೆಯಲ್ಲಿ ಅಲ್ಪಸ್ವಲ್ಪ ಸೋತಿದರು ಕನಿಷ್ಠ ನಾಲ್ಕೈದು ಕಥಾಭಾಗ ಓದಲಿಕ್ಕಾದರೂ ಓದಲೆಬೇಕಾದ ಪುಸ್ತಕ ಇದು...

# ಕಪಿಲ್ ಪಿ .ಹುಮನಾಬಾದೆ.
30/9/2017.

Thursday, 28 September 2017

ಪಲ್ಲವ ಪ್ರಕಾಶನ ಪುಸ್ತಕಗಳು

"ಪುಸ್ತಕ ಮನೆ" ( ಆನ್ಲೈನ್ ಪುಸ್ತಕ ಮಾರಾಟ) - . ನಿಮಗೆ ಪೊಸ್ಟ್ ಮುಖಾಂತರ ಪುಸ್ತಕ ಕಳುಹಿಸುತ್ತೆವೆ.

ಪಲ್ಲವ ಪ್ರಕಾಶನ: -

1. ಬಾಳ ಕೌದಿ ( ಅಂಕಣ ಬರಹ) - ಕೆ ನೀಲಾ.

2. ಇಂತಿ ನಮಸ್ಕಾರಗಳು - ನಟರಾಜ್ ಹುಳಿಯಾರ್ .

3. ತಾಯಿಕಾಡು ಸಿ.ಕೆ ಜಾನು ಅಷಮಗ್ರ ಆತ್ಮಕಥೆ - ಬಿ. ಸುಜ್ಞಾನಮೂರ್ತಿ.

4.ಭೌದ್ಧ ಮಹಾ ಮಹಿಳೆಯರು - ಡಾ. ವೆಂಕಟಯ್ಯ ಅಪ್ಪಗೆರೆ

5.ನೆತ್ತಿ ಮೇಗಳ ನೀರು ( ಕವನ ಸಂಕಲನ) -ಡಾ ನಾಗಣ್ಣ ಕಿಲಾರಿ.

6. ನಾದಗಳು ನುಡಿಯಾಗಲೇ - ವಿಕ್ರಮ ವಿಸಾಜಿ ( ಚಂದ್ರಶೇಖರ ಕಂಬಾರರ ಕಾವ್ಯದ ಕುರಿತು)

7. ನನ್ನೊಳಗಿನ ನಿನ್ನ ನಡಿಗೆ - ನೇರೊಡನ ಪದ್ಯಗಳನುವಾದ :- ಜ ನಾ ತೇಜಶ್ರೀ.

8. ಅನುಭಾವಿಗಳ ಕ್ರಾಂತಿ  - ಜೆ.ಪಿ. ಶೌತನ್.

9. ಬೆಂಚಿಲ್ ರಸ್ತೆಯ ಕವಿತೆಗಳು - ಆನಂದ ಝಂಜರವಾಡ.

ಹನುಮಂತ ಹಾಲಿಗೇರಿಯವರ ಪುಸ್ತಕಗಳು..

1. ಮಠದ ಹೋರಿ ( ಕಥಾಸಂಕಲನ) - ಹನುಮಂತ ಹಾಲಿಗೇರಿ. - 180 ರೂಪಾಯಿ.

2. ಗೆಂಡೆದೇವ್ರು - ಕಥಾಸಂಕಲನ,  ಹನುಮಂತ ಹಾಲಿಗೇರಿ,  100 ರೂಪಾಯಿ.

3. ಕೆಂಗುಲಾಬಿ  (ಕಾದಂಬರಿ) - ಹನುಮಂತ ಹಾಲಿಗೇರಿ. 110 ರೂಪಾಯಿ.

4. ಊರು ಸುಟ್ಟರೂ ಹನುಮಪ್ಪ ಹೊರಗೆ ( ನಾಟಕ) - ಹನುಮಂತ ಹಾಲಿಗೇರಿ.  75 ರೂಪಾಯಿ.

6. ಅಲೆ ತಾಕಿದರೆ ದಡ - ವಾಸುದೇವ್ ನಾಡಿಗ್  (ಕವನ ಸಂಕಲನ) - 90 ರೂಪಾಯಿ.

7. ತಮಂಧದ ಕೇಡು - ಅಮರೇಶ ನುಗಡೋಣಿ,  150 ರೂಪಾಯಿ.

8. ಆರಿಫ್ ರಾಜಾರವರ ಎರಡು ಕವನ ಸಂಕಲನಗಳು 200 ರೂಪಾಯಿ

9 ಗಾಂಧಿ ಬಂದ ( ಕಾದಂಬರಿ) - ಎಚ್ ನಾಗವೇಣಿ,  240 ರೂಪಾಯಿ

ಆಡು ಕಾಯುವ ಹುಡುಗನ ದಿನಚರಿ - ಟಿ ಎಸ್ ಗೊರವ. 100 ರೂಪಾಯಿ

ರೊಟ್ಟಿ ಮುಟಗಿ - ಟಿ ಎಸ್ ಗೊರವ.70 ರೂಪಾಯಿ

ಪಲ್ಲವ ಪ್ರಕಾಶನದ ಪುಸ್ತಕಗಳ ಪಟ್ಟಿ

1, ಜಂಗಮ ಫಕೀರನ ಜೋಳಿಗೆ ( ಕವನ ಸಂಕಲನ) ಆರಿಫ್ ರಾಜಾ

2 ಬೆಂಕಿಗೆ ತೊಡಿಸಿದ ಬಟ್ಟೆ ( ಕವನ ಸಂಕಲನ ) ಆರಿಫ್ ರಾಜಾ

3 ಬನದ ಹುಣ್ಣಿಮೆ ( ಕಥಾ ಸಂಕಲನ )
ಅಬ್ಬಾಸ್ ಮೇಲಿನಮನಿ

4 ಭಾವಭಿತ್ತಿಯ ಚಿತ್ರಗಳು ( ಕಥಾ ಸಂಕಲನ) ಟಿ ಕೆ ತ್ಯಾಗರಾಜ

5 ಹೊಕ್ಕಳ ಋತುಗಾನ (ಕವನ ಸಂಕಲನ )
ಎಸ್ ಜಿ ಸಿದ್ದರಾಮಯ್ಯ

6 ಇಂತಿ ನಮಸ್ಕಾರಗಳು - ಪಿ ಲಂಕೇಶ್ ಕುರಿತು ಲೇಖಕ ನಟರಾಜ್ ಹುಳಿಯಾರ

7 ಕುದುರಿ ಮಾಸ್ತರ - ಟಿ ಎಸ್ ಗೊರವರ ( ಕಥಾಸಂಕಲನ )

8 ಅಸಮಗ್ರ - ರಾಜೇಂದ್ರ ಚೆನ್ನಿ

9 ನನ್ನಿಷ್ಟ , ರಾಮ್ ಗೋಪಾಲ್ ವರ್ಮಾ ಸಿನಿಮಾಯಾನ

10 ಆಡು ಕಾಯೋ ಹುಡುಗನ ದಿನಚರಿ - ಟಿ ಎಸ್ ಗೊರವರ ( ಅನುಭವ ಕಥನ) ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೃತಿ

ಈ ಪುಸ್ತಕಗಳಲ್ಲದೆ ಹೆಚ್ಚಿನ ಪುಸ್ತಕಗಳ ಮಾಹಿತಿಗೆ

ಪಲ್ಲವ ಪ್ರಕಾಶನ

11. ಕಾಲಕನ್ನಡಿ - ಚಿದಾನಂದ ಸಾಲಿ
( ಸಂದರ್ಶನಗಳು ವ್ಯಕ್ತಿಚಿತ್ರಗಳು)

12.ಕ್ಯಾಮರಾ ಕಣ್ಣಲ್ಲಿ ರಾಜ್
- ಭವಾನಿ ಲಕ್ಷ್ಮೀನಾರಾಯಣ

13. ಅಕ್ಕ ಸೀತಾ ನಿನ್ನಂತೆ ನಾನೂ ಶಂಕಿತ
(ಕವನ ಸಂಕಲನ ) ಬಿ ಪೀರ್ ಬಾಷಾ

14 ಮಗದೊಮ್ಮೆ ನಕ್ಕ ಬುದ್ಧ - ಆನಂದ ಋಗ್ವೇದಿ ಕತೆಗಳು

15.ಮಧ್ಯಕಾಲೀನ ಕರ್ನಾಟಕದಲ್ಲಿ ದಲಿತರು
- ಡಾ ಓ ದೇವರಾಜ

16.ಸಾವಿತ್ರಿಬಾಯಿ ಫುಲೆ- ಸುಜ್ಞಾನಮೂರತಿ

17 ದೂರ ತೀರ - ಅನುಪಮಾ ಪ್ರಸಾದ

18 ಸಮಗ್ರ ಸಂಶೋಧಕ ಎಂ ಎಂ ಕಲಬುರಗಿ
- ಮೃತ್ಯುಂಜಯ ರುಮಾಲೆ

19 ಹೊಳೆಗುಂಟ ನಡೆದ ಹುಡುಗಿ '(ಕವನ ಸಂಕಲನ)
- ಡಾ ಸಿ ರವೀಂದ್ರನಾಥ

20, ಮುಗಿಲ ಮಾಯೆಯ ಕರುಣೆ - ಪಿ ಮಂಜುನಾಥ

21 ಧರೆ ಹತ್ತಿ ಉರಿದರೆ- ಡಾ ಟಿ ಆರ್ ಚಂದ್ರಶೇಖರ್

22 ಸೂರ್ಯ ಸಮುದ್ರದಲ್ಲಿ ಮುಳುಗುವುದಿಲ್ಲ - ಚಂದ್ರಶೇಖರ್ ಆಲೂರು

23 ಯಾಕೆ ಕಾಡುತ್ತಿದೆ ಸುಮ್ಮನೆ ನನ್ನನು (ಅಂಕಣ ಬರಹಗಳು ) - ಎನ್ ಸಂಧ್ಯಾರಾಣಿ

24 ವಾಹ್ ! ಮೀಡಿಯಾ  (ಅಂಕಣ ಬರಹಗಳು )
- ಜಿ ಎನ್ ಮೋಹನ್

25 ನಿಜಸ್ವಪ್ನ- ಎಚ್  ಆರ್ ರಮೇಶ್

26 ಭಾರತ ಭಾಗ್ಯ ವಿಧಾತ ( ಕಥಾಸಂಕಲನ )
- ಮಹಾಂತೇಶ ನವಲಕಲ್

27.ಜುಲುಮೆ ( ಕವನ ಸಂಕಲನ ) ರಮೇಶ್ ಅರೋಲಿ

28 .ಕರಿಮೆಣಸಿನಗಿಡ( ಕಾದಂಬರಿ )
ತೆಲುಗಿನಲ್ಲಿ - ಡಾ ವಿ ಚಂದ್ರಶೇಖರ
ಕನ್ನಡ - ಸೃಜನ್

29 ಅಸಮಗ್ರ- ರಾಜೇಂದ್ರ ಚೆನ್ನಿ

30. ಬೂಟುಗಾಲಿನ ಸದ್ದು - ಜಂಬಣ್ಮ ಅಮರಚಿತ

31. ಚರಿತ್ರೆ ಕಥನ- ಡಾ ಕೆ ಮೋಹನಕೃಷ್ಣ ರೈ

32 ಕಥೆ ಎಂಬ ಇರಿವ ಅಲಗು- ಮಂಜುನಾಥ ಲತಾ

33. ಬಲಿಹಾರ ( ಕಾದಂಬರಿ) - ಚೀಮನಹಳ್ಳಿ ರಮೇಶಬಾಬು.

34. ಹದ ( ಕಾದಂಬರಿ) - ಚೀಮನಹಳ್ಳಿ ರಮೇಶಬಾಬು.

35. ಬುತ್ತಿ( ಬಾಲ್ಯ ಅನುಭವ ಕಥನ)  - ಅಮರೇಶ ನುಗಡೋಣಿ

36. ಜೋಗತಿ ಜೋಳಿಗೆ - ಅನುಪಮಾ ಪ್ರಸಾದ್.

- ಸಂಪರ್ಕಿಸಿ
ಪುಸ್ತಕ ಮನೆ:-
📞 7829464653
ಪುಸ್ತಕ ಮನೆ 7829464653

ಕೊರಿಯರ್ ಮುಖಾಂತರ ಅಥವಾ ಪೊಸ್ಟ್ ಮುಖಾಂತರ ಪುಸ್ತಕ ಕಳುಹಿಸಲಾಗುವುದು. ನೀವು ನಮ್ಮ  ಅಕೌಂಟಗೆ ಹಣ ಹಾಕಿ ಅಥವಾ ಮನಿಯಾರ್ಡರ್ ಮಾಡಿ. ಪುಸ್ತಕ ಕೊಂಡು ಪ್ರೋತ್ಸಾಹಿಸಿ.  ನಿಮಗೆ ಬೇಕಾದ ಪುಸ್ತಕಗಳು ಕಾಮೆಂಟ್ ಮಾಡಿ.