ತಾತ್ಕಾಲಿಕ ಪ್ರೀಯಕರ
ಶ್ರಾವಣದ ಕಡು ಪಾಪಿ ಮಳೆ
ವಿರಹ ಗೋಡೆಗೆ ಕಾಮನ ಬಾಣದ ಹೊಡೆತ
ತೀವ್ರ ಮೋಹದಲೆಗಳ ಸುನಾಮಿ ನಡಿಗೆ !
ಅವನೊಳಗೂ ಥಂಡಿ ಗಾಜಿಗೆ ಬಿಸಿ ತುಟಿಯ ಸ್ಪರ್ಶ !
ಅವನೋ ಗಂಧರ್ವ ಲೋಕದ ಮೋಡಿಗಾರ
ಘಳಿಗೆ ಸಿಕ್ಕು ಅಮಲೇರಿಸಿ ಮುದ್ದಿಸಿ ಮರೆಯಾಗುವ
ತಾತ್ಕಾಲಿಕ ಮಾಯಗಾರ
ಆಯಾಸಗೊಂಡ ಪ್ರಯಾಣದ ತುಂಬೆಲ್ಲಾ
ಕಾಡುವ ಕಚಗುಳಿ ಬೆರಳುಗಳ ಯಾನ !
ಅವನ ಪ್ರಣಯದ ಕಥೆಯನ್ನೇ ಪದೇ ಪದೇ ಓದಿಕೊಳ್ಳುವ ನಾನು ಇದೀಗ ಇನ್ನಷ್ಟು
ಅಸಹಾಯಕ ಹಿಂಸೆಗೆ ಬಲಿಯಾದ ಒಂಟಿ ಹಂಸ ಪ್ರೇಮಿ !
ಇಲ್ಲಿ ಗೋಡೆಗಳು ಮೈಬಿಸಿಗೆ ಗೋಣು ಬಗ್ಗಿಸಿವೆ !
ಎದುರಿಗೊಬ್ಬ ದುರುಗುಟ್ಟುವಾಗ
ಅವನಿರಬೇಕಿತ್ತು ಈ ಕ್ಷಣ !
ಛೇ ! ಮತ್ತೆ ದೀರ್ಘ ಉಸಿರು ಬಿಡುತ್ತಾ ಹೆಡ್
ಫೋನ್ಸ್ ಕಿವಿಗಿಟ್ಟರೆ "ಅಂಗ ಲಗಾ ದೇ ರೇ.." ರಿಂಗಣಿಸಿ ಮೈಯೆಲ್ಲಾ ಮತ್ತಷ್ಟು ಚಳಿಗೆ
ಬಿಸಿ ನಾಲಿಗೆಯ ಹಂಬಲ !
ಸಿಕ್ಕು ಬಿಡಲಿ ಅವನೊಮ್ಮೆ
ಒಂಟಿ ರಾತ್ರಿಗೆ ಜೊತೆಯಾಗಿ ತಣ್ಣನೆಯ ಬೆಳದಿಂಗಳಿರಲಿ
ಕೊಡು ಕೊಳ್ಳುವ ಕೆಂಡಗಳ ಲೆಕ್ಕವೊಂದು ತೀರಲಿ
ಇಂದಿಗೂ ಘಟಿಸದ ಹೆಣ್ತನವೊಂದು ಜರುಗಲಿ
ಮೊಗ್ಗೊಂದು ಹಾಗೆಯೇ ಸದ್ದಿಲ್ಲದೇ ಹೂವಾಗಲಿ...!
ಸ್ನೇಹಲತಾ.
ತಾತ್ಕಾಲಿಕ ಪ್ರೇಯಸಿ
ಕಾಫಿ ಕಪ್ಪಿನ ಕೊನೆಯ ಹನಿಯಲ್ಲು ಕೆನೆಗಟ್ಟಿದ ಕಡಲಿದ್ದಿದ್ದರೆ
ನಿನ್ನ ಫೋಟೋಗೊಂದು ಮುತ್ತಿಟ್ಟಿದ್ದಕ್ಕೆ ಮೊಡವೆಯೇ ಏಳುತ್ತಿರಲಿಲ್ಲ!
ಹತ್ತು ಸಲ ಲೈಕ್ ಒತ್ತಿದ್ದರು ನೆಟ್ಟಗಾಗದ ಸೊಟ್ಟ ಮುಖದ ಫೋಟೋ,
ಫೋನ್ ಸ್ಕ್ರೀನಿಗೆ ಸಿಗುವಷ್ಟು ಸುಲಭವಾಗಿ ತುಟಿಗೆ ಸಿಕ್ಕಿದ್ದರೆ, ಚಳಿಗಾಲದಲ್ಲೂ ಬೆವರುವ ಕೆಲಸ ಸಿಗುತ್ತಿತ್ತೇನೋ ?!
ಬೆರಳ ಸೋಕುವುದೂ ಕೂಡ ಬೆದೆಯಂತೆ ಕಾಡುವಾಗ,
ಆಷಾಢದ ಗಾಳಿಯ ಕೆನ್ನೆಗೂ ಒಂದೆರಡು ಲಿಪ್ಸ್ಟಿಕ್ ನ ಗುರುತು ಸಿಗಬೇಕಿತ್ತು!
ದೂರದಲ್ಲಿ ಬೀಸುವ ಚಂಡಮಾರುತಕ್ಕೆ ಮೈ ಮೇಲಿನ ಉಲ್ಲನಿನ ಸ್ವೆಟರ್ ಆಗಿರುವ ನೀನು
ತಾತ್ಕಾಲಿಕ ಶಾಖ ಹೆಚ್ಚಿಸುವ ಶಾಖೆ.
ಚಳಿಗಷ್ಟೇ ಬೆಚ್ಚಗೆ!
ನೀ ಹೊಸ ಜೀನ್ಸ್ ತೊಟ್ಟ ದಿನ
ನನ್ನ ಅಂಗಿಯ ಗುಂಡಿ ಕಿತ್ತು ಹೋದ ಹಾಗೆ ಕನಸು ಬೀಳುತ್ತದೆ!
ಏನು ಮಾಡಲಿ ತೊಟ್ಟಿಕ್ಕುವ ನಲ್ಲಿಗೆ ಮಾತಾಡುವ ನಾಲಿಗೆ ಇಲ್ಲ.
ಇರುಳೆಲ್ಲ ರಸಶಾಸ್ತ್ರ ಓದಿದರೂ ಸಹ, ನಿನ್ನೆದುರು ಸಿಕ್ಕಾಗ ಅನಕ್ಷರಸ್ತನಂತೆಯೇ ವರ್ತಿಸುವೆ, ನಿನಗೆ ಗೊತ್ತಾಗುವ ಹಾಗೆ!
ನಿರಪರಾಧಿ ನೀಲಿ ತಾರೆಯಾಗಿರುವ ನನ್ನ ಯೌವ್ವನಕ್ಕೆ ,
ಬಟ್ಟೆ ತೊಟ್ಟವರ ಬೆನ್ನಳತೆ ತಿಳಿಯದು!
ನಿನ್ನ ಕಿರು ಬೆರಳನೂ ತಾಕದ ಕಣ್ಣೊಳಗಿನ ಕೈಯಲಿ ಯಾವ ಮೈಥುನದ ಗುರುತೂ ಇಲ್ಲ!
ಮಳೆಗಾಲಕೆ ಮೈಯೊಡ್ಡಿದ ಕೊಡೆಯಂತ್ತಿರುವ ನಿನಗೂ ತೊಟ್ಟಿಕ್ಕುವ ತವಕ ಇರಬಹುದೇನೋ?
# ಕವಿಚಂದ್ರ
ಮಸ್ತ್ ಇದೆ ಸರ್
ReplyDeleteಮಸ್ತ್ ಇದೆ ಸರ್
ReplyDeleteಸೂಪರ್ ಗುರು..
ReplyDeleteಅಕ್ಕ ನಿನ್ ಕವಿತೆನೂ ಸೂಪರ್
Thanks
ReplyDeleteTumba chanageve kavite ya salu galu
ReplyDelete8th ಒನ್ ಚೆನ್ನಾಗಿದೆ ಸರ್
ReplyDeleteWow👏 nan Life nalli first Timt matte matte ಓದಬೇಕು ಎಂಬ ಹಂಬಲ ಹೆಚ್ಚಾಯಿತು
ReplyDelete👌👌👌👌👌👌👌👌👌👌👌👌👌👌👌👌
😘😘😘😘😘😘😘😘😘😘😘😘😘😘😘😘
ಸಖತ್ ಎರಡು ಕವಿತೆ...
ReplyDelete