Monday 29 May 2017

ಕಾವ್ಯ ಮನೆ ಬಳಗ..

*ಕಾವ್ಯ ಮನೆ*ಸಮಿತಿಯ ಮೊದಲ ಸಭೆ...

ಅಕ್ಷರ ಜೋಪಡಿಯಡಿ ಭವಿಷ್ಯತ್ತಿನ ಕನಸು ಎಂಬಂತೆ ಕಾವ್ಯಮನೆಯ ಜಗಲಿಯಲ್ಲಿ ಸ್ನೇಹಲತ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಅಕ್ಷರಗಳೇ ನೇರ ರಾಜಕಾರಣದ ಮೂಲಾಶಯವನ್ನು ಹೊಂದಿರುವ ಈ ಸಂದಭ೯ದಲ್ಲಿ ಕವಿ ವಹಿಸಬೇಕಾದ ಪಾತ್ರ ಮತ್ತು ಎದುರಿಸಬೇಕಾದ ಸವಾಲುಗಳನ್ನು ಕುರಿತು ಸುಧೀಘ೯ವಾಗಿ ಚಚಿ೯ಸಲಾಯಿತು. ಒಂದು ಸಂಸ್ಥೆ ಕೇವಲ ಅಂತರ್ ಪ್ರವಾಹವಾಗಿ ಮಾತ್ರ ಕಾಯ೯ನಿವ೯ಹಿಸದೆ ವತ೯ಮಾನದ ಆಗುಹೋಗುಗಳೊಂದಿಗೆ ಸ್ಪಂದಿಸುತ್ತಾ ಸಂಚಲನ ಪ್ರಕ್ರಿಯಾತ್ಮಕವಾಗಿರಬೇಕೆಂಬುದನ್ನು ನಿಣ೯ಸಲಾಯಿತು.  ಲಿಂಗರಾಜಕಾರಣ ಮತ್ತು ಸಾಂಸ್ಕೃತಿಕ ಯಜಮಾನ್ಯತೆಯ ಸ್ಪಂದನೆಗೆ ಸಂವಿಧಾನಾತ್ಮಕ ಸಹಕಾರವನ್ನು ಬಳಸಿಕೊಂಡು ನಾವು ಮುಂದುವರಿಯುವ ಮಾಗ೯ಗಳನ್ನು ಅನುಸರಿಸುವ ಕ್ರಮವು ಮುಖ್ಯವಾದುದು. ಕಾವ್ಯಮನೆಯ ಆಶಯವೂ ಅದೇ ಆಗಬೇಕೆಂಬ ನಿಧಾ೯ರ ಖಚಿತಪಡಿಸಲಾಯಿತು.

ಚರ್ಚೆಗಳು ಮತ್ತು  ಸಮಿತಿ ರಚನೆ.

27/5/2017 ರಂದು ಮುಂಜಾನೆ  10 ಗಂಟೆಗೆ ಕಾವ್ಯ ಮನೆಯ ಗುರುಗಳಾದ ಹೈ.ತೋ ಮನೆಯಲ್ಲಿ  ಸಭೆ ಕರೆಯಲಾಗಿತ್ತು. ಒಟ್ಟು 8 ಜನ ಸದಸ್ಯರು ಭಾಗವಹಿಸಿದರು.

ಸಂಜೆವರೆಗೂ ನಡೆದ ಚರ್ಚೆಯ ನಂತರ ಅನೇಕ ನಿರ್ಣಯ ಕೈಗೊಳ್ಳಲಾಯಿತು.

*ಮೊದಲಿಗೆ ಕಾವ್ಯ ಮನೆಯ ಉದ್ದೇಶಗಳ ಚರ್ಚೆ ಆಯಿತು. ನಂತರ ಕಾವ್ಯ ಮನೆ ಸಂಘಟನೆಯ ಅಡಿ ಪ್ರಕಾಶನ ನಡೆಸುವ ನಿರ್ಣಯ ಕೈಗೊಳ್ಳಲಾಯಿತು.

* ಪುಸ್ತಕ ಪ್ರಕಟಣೆಗಳ ಆಯ್ಕೆಗೆ ಆಯ್ಕೆ ಸಮಿತಿ ರಚಿಸುವುದು.

* ಕಾವ್ಯ ಮನೆಯ ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಮತ್ತು ಕೋಶಾಧ್ಯಕ್ಷರ ಜಂಟಿ ಖಾತೆಯೊಂದಿಗೆ ಪಾರದರ್ಶಕವಾಗಿ ನಡೆಸುವುದು .

*ಸಾಮೂಹಿಕ ನಿರ್ಧಾರ ಮತ್ತು ವೈಯಕ್ತಿಕ ಜವಾಬ್ದಾರಿ* ಈ ಸಾಲಿನಡಿ ನಾವೆಲ್ಲ ಒಗ್ಗಟ್ಟಾಗಿ ಕನ್ನಡ ಸಾಹಿತ್ಯ, ಹೋರಾಟ, ಜನಪರ ಕಾರ್ಯಕ್ರಮಗಳಲ್ಲಿ ತೀವ್ರವಾಗಿ ತೊಡಗಿಸಿಕೊಳ್ಳುವುದು.

*ಕಾವ್ಯ ಮನೆ* ಯ ಸಮಿತಿಯೊಂದನ್ನು ಎರಡು ವರ್ಷಗಳವರೆಗೆ ನಾಮನಿರ್ದೇಶಿತ ಆಯ್ಕೆ ವಿಧಾನದ ಮೂಲಕ ಅಂತಿಮಗೊಳಿಸಲಾಯಿತು.

ಅಧ್ಯಕ್ಷರು - *ಅಬ್ದುಲ್ ಹೈ.ತೋ.* ಬಳ್ಳಾರಿ.

ಉಪಾಧ್ಯಕ್ಷರು - *ರಮ್ಯ*  ಶಿವಮೊಗ್ಗ.

ಉಪಾಧ್ಯಕ್ಷರು - *ಸಚಿನ ಅಂಕೋಲಾ* ಉಡುಪಿ.

ಪ್ರಧಾನ ಕಾರ್ಯದರ್ಶಿ-  *ಅರಡಿಮಲ್ಲಯ್ಯ. ಪಿ.*ಚಳ್ಳಕೆರೆ

ಸಹ ಕಾರ್ಯದರ್ಶಿ-  *ಶ್ರೀಕಾಂತ ತಾಮ್ರಪಣಿ೯*. ಹೊಸಪೇಟೆ

ಜಂಟಿ ಕಾರ್ಯದರ್ಶಿ-  *ಸ್ನೇಹಲತಾ* ಚಿಂಚೋಳಿ.

ಸಂಘಟನಾ ಕಾರ್ಯದರ್ಶಿ-  *ಪ್ರವೀಣ ಪಿ.ಕೆ* ಗದಗ.

ಸಂಚಾಲಕರು /ಕೋಶಾಧ್ಯಕ್ಷರು - *ಕಪಿಲ ಪಿ ಹುಮನಾಬಾದೆ* ಕಲಬುರ್ಗಿ.

ಸಹ ಸಂಚಾಲಕರು - *ಶಾಂತೇಶ ಕೋಡ್ಲೆ*. ಕಲಬುರ್ಗಿ

ನಿರ್ದೇಶಕರು :
*ಚಾಂದ್ ಪಾಶ* ಬೆಂಗಳೂರು
*ಹಸನ್*ಬಡಗನೂರು ಮಂಗಳೂರು.

# ಕಾವ್ಯ ಮನೆ ಬಳಗ

Tuesday 16 May 2017

ಅನ್ಯ

The outsider

ಜೈಲಲ್ಲಿ ಅತ್ತಿಂದಿತ್ತ ತಿರುಗಾಡುತ್ತಿದ. ಗೋಡೆಗಳು ಸಹ ಭಯ ಹುಟ್ಟಿಸುತ್ತಿದ್ದವು. ಅವನ ನಿರ್ಲಿಪ್ತ ಮುಖಭಾವ ಮೊದಲ ಬಾರಿಗೆ ಭಯ ಹೊಡೆದು ತೋರಿಸುತ್ತಿದೆಯಂದು ಅವನೆ  ಭಾವಿಸಿದ. ಪಶ್ಚಾತ್ತಾಪ ಮಾತ್ರ  ಇಲ್ಲ. ನಾಳೆಯೆ ಗಿಲೊಟಿನ್ ಯಂತ್ರದಲ್ಲಿ ಅವನ ತಲೆ ಕತ್ತರಿಸುವವರಿದ್ದಾರೆ. ಇದು ಮರಣದಂಡನೆಯ ಶಿಕ್ಷೆ. ಈ ಗಿಲೊಟಿನ್ ಯಂತ್ರ ಪಠ್ಯಪುಸ್ತಕಗಳಲ್ಲಿ ನೋಡಿ, ಅದರ ನಯಗಾರಿಕೆಗೆಯ ಆಕಾರಕ್ಕೆ ಮೆಚ್ಚಿದಾನೆ. ತಾನು ಒಂದು ದಿನ ನೋಡಬೇಕೆಂದು ಆಸೆ ಪಟ್ಟಿದನು . ಪ್ರ್ಯಾನ್ಸ್ ಕ್ರಾಂತಿಯ ಸಂದರ್ಭದಲ್ಲಿ ದಂಗೆಕೋರರಿಗೆ ಸಾಯಿಸಲು ಈ ಯಂತ್ರ ಬಳಸುತ್ತಿದ್ದರೂ. ದೂರದೃಷ್ಟವಶಾತ ಕೊನೆಗೆ ಒಂದು ದಿನ  ಈ ಯಂತ್ರ ಕಂಡು ಹಿಡಿದ ಗಿಲೊಟಿನಗೂ ಸಹ  ಈ ಯಂತ್ರಕ್ಕೆ ತಲೆ ಕತ್ತರಿಸಿ ಸಾಯಿಸುತ್ತಾರೆ. ಅವನದೆ ಹೆಸರು ಈ  ಯಂತ್ರಕ್ಕಿಟ್ಟಿದ್ದಾರೆ. ಒಂದು ದಿನ ಅವರಪ್ಪ ಯಾರೋ ಕೈದಿಯೊಬ್ಬನನ್ನು ಗಿಲೊಟಿನ್ ಯಂತ್ರಕ್ಕೆ ತಲೆ ಕೊಡುವುದನ್ನು ಮತ್ತು ಸುತ್ತಲು ಸೇರಿದ ಜನ ಅವಾಚ್ಯವಾಗಿ ಬೈಯವುದನ್ನು ಕಂಡು ಮನೆಗೆ ಬಂದು ವಾಂತಿ ಮಾಡಿಕೊಂಡಿದ್ದ.  

ಇಗ  ಆ ಗಿಲೊಟಿನ್ ಯಂತ್ರಕ್ಕೆ ಜೈಲಲ್ಲಿನ ಕೈದಿ ನಾಳೆಯೆ ತಲೆ ಕೊಡುವನಿದ್ದಾನೆ. ಒಂದು ವೇಳೆ ಬೇರೆಯವರಾಗಿದ್ದರೆ   ದೂರದಿಂದಲೆ ನೋಡಿ ಹೋಗುತ್ತಿದ್ದನೇನೊ ಇಗ  ಆ ಸ್ಥಾನದಲ್ಲಿ ಅವನಿದ್ದಾನೆ. ಪಾದ್ರಿ ಬಂದು ದೇವರ ಹತ್ತಿರ  ಕ್ಷೇಮೆ ಕೇಳು ಎಂದು ಹೇಳುತ್ತಾನೆ. ಇವ ಮಾತ್ರ ನಿರ್ವಿಕಾರವಾಗಿ ಯಾವ ಪ್ರತಿಕ್ರಿಯೆ ಸಹ ಸೂಚಿಸುವುದಿಲ್ಲ ಪಾದ್ರಿ ಹೋರಟು ಹೋಗುತ್ತಾನೆ.

ಹಿಂದೆ ಒಂದು ಸಾರಿ, 
ಅವನ ಮುದಿ ತಾಯಿ ಸತ್ತಾಗ ಕಣ್ಣೀರು ಸಹ ಹಾಕಿರಲಿಲ್ಲ. ಶವದ ಪೆಟ್ಟಿಗೆಯದುರು ಕೂತು ಸಿಗರೇಟ್ ಸೇದುತ್ತಾನೆ. ಕೊನೆಯ ಬಾರಿ ಅವನ ತಾಯಿ ಮುಖ ನೋಡಲು ಸಹ ಅವನು ಉತ್ಸುಕನಾಗಿರುವುದಿಲ್ಲ.

ಮರುದಿನ ನಗರಕ್ಕೆ  ಬಂದು ತನ್ನ ಪ್ರೇಯಸಿ ಮಾರೀಯ ಜೊತೆ ಒಂದು ಹಾಸ್ಯ ಚಿತ್ರಕ್ಕೆ ಹೋಗುತ್ತಾನೆ, ಕಡಲಲ್ಲಿ  ಈಜುತ್ತಾನೆ. 

ಇಗ ಕೆಲವು ದಿನದ ಹಿಂದೆ, 
ಅವನ ಗೆಳೆಯನ ಶತ್ರುಗಳು ಅಚಾನಕಗಾಗಿ ಇವನ ಮೇಲೆ  ಆಕ್ರಮಣ ಮಾಡುತ್ತಾರೆ. ಯಾವ ನಿರ್ವಾಹವಿಲ್ಲದೆ ಎದುರು ವ್ಯಕ್ತಿಗೆ ಗುಂಡು ಹೊಡೆದು ಸಾಯಿಸುತ್ತಾನೆ. ಮುಂದೆ ಕೋರ್ಟ್ ಮೆಟ್ಟಿಲೆರಿದ ಈ ಕೊಲೆ ಕೇಸು. ಇದೊಂದು ಆಕಸ್ಮಿಕ ಘಟನೆ ಎಂದು ಅವನೆಷ್ಟು ಹೇಳಿದರು ಕೇಳುವುದಿಲ್ಲ.  ಕೋರ್ಟಲ್ಲಿ ಸಾಕ್ಷಿ ನೀಡಲು ಇವನ  ತಾಯಿ ಇದ್ದ ವೃದ್ಧಾಶ್ರಮದ ನಾಲ್ಕೈದು ಜನ ಬರುತ್ತಾರೆ. ಬಂದು, ಇವನೆಷ್ಟು ಕ್ರೂರಿಯಂದರೆ ತಾಯಿ ಸತ್ತಾಗಲೂ ಅಳಲಿಲ್ಲ. ಮತ್ತೆ ಅವಳ ಕೊನೆಯ ಮುಖದರ್ಶನಕ್ಕೂ ಉತ್ಸಾಹ ತೋರಿಸಲಾರದ ವಿಕೃತ ಮನುಷ್ಯನೆಂದು ಹೇಳುತ್ತಾರೆ.

 ಇವನು ಈ ಕೊಲೆಗೂ ನನ್ನ ತಾಯಿ ಸತ್ತದಕ್ಕೂ ಯಾವ ಸಂಬಂಧಗಳು ಇಲ್ಲವೆಂದು ಹೇಳುತ್ತಾನೆ. ಕೊನೆಗೆ ನ್ಯಾಯಲಯ ಮರಣದಂಡನೆ ಶಿಕ್ಷೆ ನೀಡುತ್ತದೆ. ಆ ಗಿಲೊಟಿನ ಯಂತ್ರಕ್ಕೆ ನಾಳೆ ತಲೆಕೊಡಬೇಕಾದವನು ಈ ಕಾದಂಬರಿಯ ನಿರೂಪಕ ! 

ಆಲ್ಬರ್ಟ್ ಕ್ಯಾಮ್ಯುನ The outsider ಕೃತಿಯ ಕಥೆ ಇದು. ಕನ್ನಡದಲ್ಲಿ " ಅನ್ಯ "ವೆಂದು ಅನುವಾದವಾಗಿದೆ. Outsider ಪದವೇ ಸೂಚಿಸುವಂತೆ  ಸದಾ ಮನುಷ್ಯ  ಇನ್ನೊಬ್ಬರ ಚಲನವಲನಗಳ ಮೇಲೆ ಅವರ ವ್ಯಕ್ತಿತ್ವ ಅಳೆಯುತ್ತಿರುತ್ತಾರೆ. ಆದರೆ ಅವ ತನ್ನೊಳಗೆ  ಅನುಭವಿಸುತ್ತಿರುವೆ ವೇದನೆ ಯಾರು ನೋಡುವುದೆಯಿಲ್ಲ. ತಾಯಿ ಸತ್ತಾಗ ಚೀರಾಡಿ ಅಳಬೇಕಂತಲ್ಲ. ಯಾವುದೋ ಹಾಸ್ಯ ಚಿತ್ರಕ್ಕೆ ಹೋಗಿದ್ದ ಎಂಬ ಮಾತ್ರಕ್ಕೆ ಅವ  ಅಲ್ಲಿ ನಕ್ಕಿರಬಹುದೆ ? ಈ ಪ್ರಶ್ನೆ ಯಾರು ಕೇಳಿಕೊಳ್ಳುವುದೆಯಿಲ್ಲ. 

ಈ ಕಾದಂಬರಿಯ ನಾಯಕ  ಇನ್ನೊಬ್ಬರು ಗಿಲೊಟಿನಗೆ ತಲೆ ಕೊಡುವುದು ನೋಡಲು ಉತ್ಸುಕನಾಗಿದ್ದಾನೆ ಆದರೆ ತನ್ನ ತಲೆ ಕೊಡುವ ಸಂದರ್ಭ ಬಂದರೆ ಯೋಚನಾ ಲಹರಿಯ ಬದಲಾಗುತ್ತದೆ. 

Outsider ಹೆಸರೆ ಸೂಚಿಸುವಂತೆ . ಮನುಷ್ಯ ಸದಾ ಇನ್ನೊಬ್ಬರನ್ನು ಮೇಲಮೈಯಲ್ಲಿಯೆ ಅಳೆಯುತ್ತಾನೆ.

# ಕಪಿಲ ಪಿ ಹುಮನಾಬಾದೆ.

Saturday 13 May 2017

ಅವ್ವ

ನನ್ನವ್ವ

ನನ್ನವ್ವ ನನ್ನಂಥಲ್ಲ !
ಹಸಿರು ಮಸಿಯಿಂದ ಹೆಸರು ಬರೆದವಳಲ್ಲ,
ಪುಟಗಟ್ಟಲೆಯ ಪುರಾಣವ ಓದಿದವಳಲ್ಲ!
ಆದರೂ, ನನ್ನವ್ವ ಓದುತ್ತಾಳೆ..
ಯಾರಿಗೂ ಕಾಣಿಸದ ನನ್ನ ಹಣೆಯ ಬರಹವನು,
ಸದಾ ಎಣಿಸುತ್ತಾಳೆ ನಾ ತೊಟ್ಟಿಕ್ಕುವ ಕಣ್ಣೀರ ಹನಿಯನು.
ನನ್ನವ್ವ ನನ್ನಂಥಲ್ಲ.....

ಅವಳ ನೆರಳಿನ ಹಿಂದಿನ ಹೆಜ್ಜೆ ನಾನು
ಬಿಸಿಲ ತಾಳದೆ ಆ ನೆರಳಲ್ಲೆ ಇರುವೆನು,
ನನ್ನವ್ವ ಬಿಗುಮಾನದ ಬಿನ್ನಾಣದವಳಲ್ಲ
ಆಭರಣ ತೊಡುವ ಅನ್ನಪೂರ್ಣೆಯಂಥಲ್ಲ..!

ನನ್ನವ್ವ ನೆಲದೊಳಗಿನ ಗರಿಕೆಯಂತೆ!
ತಾಗುವಳು, ಬಾಗುವಳು
ಮನೆಯ ಹೊಳೆಯಲಿ ಹೊಳೆಯುವಳು.
ಕೆಂಡದ ಮೇಲೆ ಕೈಯಾಡಿಸಿದ್ದಂತೆ,
ಕುಡಿದು ಬಂದ ಅಪ್ಪನನ್ನು ಸಂಭಾಳಿಸುವಳು
ನನ್ನ ಹೆಣವ ಮುಚ್ಚಿಡುವ ಗೋರಿಯಾಗುವಳು,
ನನ್ನವ್ವ ಗುಡಿ ಗುಂಡಾರದ ಗೋಪುರದ್ದಂತ್ತಲ್ಲ!

ಬಡತನದ ಬೆಂಕಿಯ ಮೈಯ ತೊಳೆಯುತಾಳೆ
ಬೂದಿಯಾದ ಕನಸುಗಳ ಬಳಿಯುತಾಳೆ!
ಹೂತಿಟ್ಟ  ಉಸಿರಿಲಿ ಮಕ್ಕಳ ಹೆಸರ ಬರಿಯುತಾಳೆ,
ನನ್ನವ್ವ ಬಿಂಕದ ಬರವಣಿಗೆಯ ಶಾರದೆಯಂಥಲ್ಲ...!!

ಅವಳ ಕಣ್ಣ  ಹನಿಯ ಮಡಿಲ ಸೇರಿ
ಹಸಿರಾಯಿತೋ ನನ್ನೋಡಲು..
ಆ ಕಂಬನಿಯ ಕಸಿದುಕೊಂಡು ಮೈ ತುಂಬಿತೋ ಕಡಲು,
ನನ್ನವ್ವ ಖಾಲಿ ಬಾನಿನ ಕಪ್ಪು ಮುಗಿಲು.

ನನ್ನ ನವಮಾಸದಿ ಹುದುಗಿಟ್ಟಳು ಗರ್ಭದಲಿ
ನನ್ನವ್ವ ಗರ್ಭ ಗುಡಿಯಲ್ಲಿರುವ ಕಲ್ಲಂತ್ತಲ್ಲ..!!

                          -- ಕವಿಚಂದ್ರ

Wednesday 10 May 2017

ಬುದ್ಧನಿಗೊಂದು ಕವನ

        ನಾನು ಮತ್ತು ಬುದ್ಧ

ನಾ ಬೆಚ್ಚಿ ಬಿದ್ದಾಗಲೆಲ್ಲ ಬುದ್ದನ ತುಟಿಯ ಗೋಡೆಗಳಲಿ ಬಿರುಕು ಕಾಣುತದೆ.
ಬಿದ್ದಾಗಲಂತೂ ಅವನ ನೆರಳಲಿ ಅರಳಿ ನಿಂತ ಅರಳಿ ಮರದ ಬೇರು, ಬೇನೆ ತಿನ್ನುತದೆ.
ನಾ ಮನೆಯ ಹೊಸ್ತಿಲ ಕಿತ್ತುಕೊಂಡಾಗಲೆ
ಅವನ ಆಲಯದ ಆವರಣಕೆ ಬಣ್ಣ ಬರುತದೆ.
ನನ್ನ ಕಣ್ಣು ತೆರೆಯುತದೆ,
ಏಕೆಂದರೆ ಬದ್ದನೆಂದರೆ ನನಗೆ ಅರೆಗಣ್ಣು ತೆರೆದ ಅರಳಿ ಮರ...!

ನಾನು, ನಾಳೆಗಾಗಿ ಒಂದಿಷ್ಟು ನಗುವನು ನಗದಿಗೆ ಕೊಂಡರೆ,
ಅವನು, ಎಂದೂ ಸಾಯದ ಮುಗುಳು ನಗೆಯಲಿ ಮುಳುಗಿ ಬಿಡುತಾನೆ!
ಸತ್ತ ನಾನು ಸಾವಿರ ಬದುಕಿನ ಸಮಾಧಿಗೆ ನನ್ನ ಹೆಸರನಿಟ್ಟರೆ,
ಅವನು,  ಸಾವಿನ ಮನೆಯಲಿ ಸಾಸಿವೆಯ ಸಂಬಂಧ ಹುಡುಕುತಾನೆ!
ಏಕೆಂದರೆ, ಬುದ್ದನೆಂದರೆ ನನಗೆ
ಕೋಟಿ ಮೈಲಿಗಲ್ಲನು ದಾಟಿ ನಿಂತ ಒಂಟಿ ಹೆಜ್ಜೆ..!!

ನಾನು ಬೊಗಸೆ ಪ್ರೀತಿಗಾಗಿ ಬದುಕನ್ನೆ ಅಡವಿಟ್ಟರೆ,
ಬುದ್ದ, ಬದುಕನ್ನೆ ಚಿಟುಕೆ ಪ್ರೀತಿಗೆ ಮಾರಿಕೊಂಡವನು!
ಸುಳಿವ ಗಾಳಿಯ ಚರ್ಮ ಸುಲಿದು ಚರಮ ಗೀತೆಯ ಹೊಲಿದರೆ,
ಅವನು, ಉಸಿರಿನ ನಿಲ್ದಾಣದಲಿ ಊರ ಸುತ್ತಿ ಬೆತ್ತಲೆಗೆ ಬೆಂಕಿ ತಾಕಿಸುತಾನೆ,
ಏಕೆಂದರೆ, ಬುದ್ದನೆಂದರೆ ನನಗೆ
ಉಸಿರಿನಲಿ ಹೂತು ಹೋದ ಆಳೆತ್ತರದ ಬೆಳಕಿನ ಪೈರು....!!

  
                          ..  ಕವಿಚಂದ್ರ  ..


ಬುದ್ಧನಿಗೊಂದು ಕವನ

        ನಾನು ಮತ್ತು ಬುದ್ಧ

ನಾ ಬೆಚ್ಚಿ ಬಿದ್ದಾಗಲೆಲ್ಲ ಬುದ್ದನ ತುಟಿಯ ಗೋಡೆಗಳಲಿ ಬಿರುಕು ಕಾಣುತದೆ.
ಬಿದ್ದಾಗಲಂತೂ ಅವನ ನೆರಳಲಿ ಅರಳಿ ನಿಂತ ಅರಳಿ ಮರದ ಬೇರು, ಬೇನೆ ತಿನ್ನುತದೆ.
ನಾ ಮನೆಯ ಹೊಸ್ತಿಲ ಕಿತ್ತುಕೊಂಡಾಗಲೆ
ಅವನ ಆಲಯದ ಆವರಣಕೆ ಬಣ್ಣ ಬರುತದೆ.
ನನ್ನ ಕಣ್ಣು ತೆರೆಯುತದೆ,
ಏಕೆಂದರೆ ಬದ್ದನೆಂದರೆ ನನಗೆ ಅರೆಗಣ್ಣು ತೆರೆದ ಅರಳಿ ಮರ...!

ನಾನು, ನಾಳೆಗಾಗಿ ಒಂದಿಷ್ಟು ನಗುವನು ನಗದಿಗೆ ಕೊಂಡರೆ,
ಅವನು, ಎಂದೂ ಸಾಯದ ಮುಗುಳು ನಗೆಯಲಿ ಮುಳುಗಿ ಬಿಡುತಾನೆ!
ಸತ್ತ ನಾನು ಸಾವಿರ ಬದುಕಿನ ಸಮಾಧಿಗೆ ನನ್ನ ಹೆಸರನಿಟ್ಟರೆ,
ಅವನು,  ಸಾವಿನ ಮನೆಯಲಿ ಸಾಸಿವೆಯ ಸಂಬಂಧ ಹುಡುಕುತಾನೆ!
ಏಕೆಂದರೆ, ಬುದ್ದನೆಂದರೆ ನನಗೆ
ಕೋಟಿ ಮೈಲಿಗಲ್ಲನು ದಾಟಿ ನಿಂತ ಒಂಟಿ ಹೆಜ್ಜೆ..!!

ನಾನು ಬೊಗಸೆ ಪ್ರೀತಿಗಾಗಿ ಬದುಕನ್ನೆ ಅಡವಿಟ್ಟರೆ,
ಬುದ್ದ, ಬದುಕನ್ನೆ ಚಿಟುಕೆ ಪ್ರೀತಿಗೆ ಮಾರಿಕೊಂಡವನು!
ಸುಳಿವ ಗಾಳಿಯ ಚರ್ಮ ಸುಲಿದು ಚರಮ ಗೀತೆಯ ಹೊಲಿದರೆ,
ಅವನು, ಉಸಿರಿನ ನಿಲ್ದಾಣದಲಿ ಊರ ಸುತ್ತಿ ಬೆತ್ತಲೆಗೆ ಬೆಂಕಿ ತಾಕಿಸುತಾನೆ,
ಏಕೆಂದರೆ, ಬುದ್ದನೆಂದರೆ ನನಗೆ
ಉಸಿರಿನಲಿ ಹೂತು ಹೋದ ಆಳೆತ್ತರದ ಬೆಳಕಿನ ಪೈರು....!!

  
                          ..  ಕವಿಚಂದ್ರ  ..


Thursday 4 May 2017

ಕೌದಿ ಮೇಲೆ ಬಿಡಿಸಿದ ಚಿತ್ರಗಳು

ನೆನಪುಗಳು...

ಮನುಷ್ಯ ಬದುಕಿರೊದು ಈ ನೆನಪುಗಳಿಂದಲೆ
ನಿರ್ಲಿಪ್ತವಾಗಿ ಖಾಲಿ ದಾರಿ ನೋಡುವಾಗ 
ತುಸು ಮಣ್ಣು ಹಾರಿದರೆ ಸಾಕು
ಎಂದೋ ಬ್ಯಾಲದಲ್ಲಿ ಮಳೆ ಬಿದ್ದಾಗ ಮಣ್ಣಿನ ವಾಸನೆ  ಮೂಗರಳಿಸಿದ್ದು ನೆನಪಾಗುತ್ತದೆ..

ಕನಸುಗಳೆ ಇಲ್ಲದೆ ಸೋರಗಿ ಅನಾಥವಾಗಿ ಬಿದ್ದ ರಸ್ತೆ ಮೇಲೆ ನೂರು ಗುರಿಗಳಿಟ್ಟುಕೊಂಡು ಚಲಿಸುವ ಚಕ್ರಗಳು ನೋಡುವಾಗ 
ಬಸ್ಸಲ್ಲಿ ಡ್ರೈವರ್ ಪಕ್ಕದ ಬಾಕ್ಸ್ ಮೇಲೆ ಕೂತದ್ದು ನೆನಪಾಗುತ್ತದೆ.
ಇಂದಿನ ಮಕ್ಕಳು ಕಾರ್ ರೇಸ್ ಆಡುತ್ತ ಮುಳುಗಿರುವಾಗ ಆಗ ನಾವು ಬಸ್ ಡ್ರೈವರಗಿಂತಲೂ ಎದುರು ಬರುವ ವಾಹನಗಳ ಬಗ್ಗೆ ನಮಗೆ ಹೆಚ್ಚು ರೋಮಾಂಚನ ಒಂಥರಾ ಭಯ ಇರುತ್ತಿತ್ತು  ....

ನಮ್ಮ ಮನೆಯದಲ್ಲದ ಮದುವೆಯಂದು ಊರಿನ ಯಾವ ಮದುವೆಯು ಅನಿಸುತ್ತಿರಲಿಲ್ಲ. ಹುಚ್ಚೆದ್ದು ಕುಣಿಯುತ್ತಿದ್ದೆವು ಹೀಗೆ ಕ್ರಮಬದ್ಧವಾಗಿ ಕುಣಿಯಬೇಕೆಂದು ನಿಯಮವೆನಲ್ಲ. ಈ ನಗರದ ಬೀದಿಗಳಲ್ಲಿ ಟ್ರಾಫಿಕ್ ಜಾಮ್ ಮಾಡಿ ಕುಣಿಯುವ  ಒಂದೆರೆಡು ತಲೆಗಳಿಗೆ ನೋಡಿದರೆ ಹೋಗಿ ಒಂದೆರೆಡು ಸ್ಟೆಪ್ ಹಾಕಬೇಕೆನಿಸುತ್ತದೆ...

ಮೊನ್ನೆ  ಊರಿಗೆ ಹೋಗಿದ್ದೆ. ಬರೀ ನಗು ವಿನಿಮಯ ಮಾಡಿಕೊಂಡಿದ್ದ ಬಾಲ್ಯದ ಗೆಳತಿ ಪುಟ್ಟ ಮಗುವಿಗೆ ಎತ್ತಿಕೊಂಡು ನೀರು ತರಲು ನಿಂತಿದಳು ಅವಳದೆ ಮಗುವಿರಬಹುದು...ನನ್ನ ಜೊತೆ ಸ್ಟ್ವಾಪ್ ಆಡಿದ ಹುಡುಗಿ ಬೆಳೆದು ನಿಂತಿದಕ್ಕೆ ಬೆರಗಾಗುತ್ತದೆ. 
ಈ ನಗರದ ಏರಿಯಾದ ಬೀದಿ ತಿರುವಿನಲ್ಲಿ ಕಾಫೀ ಡೇ ಮುಂದೆ ನಿಂತ ಪ್ರಣಯ ಹಕ್ಕಿಗಳು ನೋಡುವಾಗ...
ಮುಟಾಟ  ಆಡಿ, ಜಗಳ ಮಾಡಿಕೊಂಡು ಕೈಕಾಲು ಒಡೆದು ರಕ್ತ ಸೋರುವ ಕಾಲು, ಕಣ್ಣೀರು, ಮೂಗಲ್ಲಿ ಸುಂಬಳ  ಅಮ್ಮನ ಎದುರು ಗೆಳತಿಯ ಬಗ್ಗೆ ದೂರು ಕೊಡುವಾಗ ಯಾವ ದ್ವೇಷವು ಇರುತ್ತಿರಲಿಲ್ಲ. ಮರುದಿನ ಸೂರ್ಯ ಹುಟ್ಟುವುದೆ ತಡ ಊರ  ಅಗಸಿಗೆ ಹೋಗಿ ಟೈರ್ಗೆ ಕಟ್ಟಿಗೆಯಿಂದ ನೂಕಿ ಊರು ಸುತ್ತಿಸುವುದೆ ಕೆಲಸ....

ಯಾವ ಗದ್ದಲುವು ಇಲ್ಲದೆ ಅನಾಥವಾಗಿ ಓಂ ನಮ: ಶಿವಾಯ ಹಾಡುತ್ತ ಹೋಗುವ ಹೆಣ ನೋಡಿದರೆ ಬೇಸರವೆ ಉಸಿರುಗಟ್ಟಿಸುತ್ತದೆ. ಹಲಗಿ ಹೊಡೆದು ಪಟಾಕಿ ಸಿಡಿಸಿ ಚೆಂದವಾಗಿ ಅಲಂಕರಿಸಿ, ಕೈ ಕಾಲು ಕುರ್ಚಿಗೆ ಬಿಗಿದಾಗ ಆ ಹೆಣ ಸೆಟೆದು ಕೂತಿರುತ್ತದೆ. ನಾವು ಸಹ  ಒಂದೆರೆಡು ಸ್ಟ್ಯಾಪಿ ಹಾಕಿ ಸುಖವಾಗಿ ಅವರಿಗೆ ಸ್ವರ್ಗಕ್ಕೆ ಕಳುಹಿಸಿಕೊಡುತ್ತಿದ್ದವು. ಹೆಣ ಕುಣಿಯೊಳಗಿಳಿಸುವುದು ನೋಡಬೇಕೆಂಬಾಸೆ ಇನ್ನೂ ಕೈಗೂಡಿಲ್ಲ....

ಆಗ ನಮಗೆ
ವಾರಗಳೆ ಗೊತ್ತಾಗುತ್ತಿರಲಿಲ್ಲ ಪ್ರತಿ ಶನಿವಾರ ಸರಕಾರಿ ಮಾಸ್ತರ ಬಂದು ನಾಳೆ ಆಯಿತ್ವಾರ ಸಾಲಿ ಸುಟಿ ಇರುತ್ತದೆಯಂದು ಹೇಳುತ್ತಿದ್ದ. ಆರುದಿನಕ್ಕೊಂದು ಸಾರಿ ಹೀಗೆ ಹೇಳುತ್ತಲೆಯಿದ್ದ. ಪಾಪ ಎಷ್ಟು  ಒಳ್ಳೆಯ ಮಾಸ್ತರೆಂದು ಖುಷಿಯಾಗುತ್ತಿತ್ತು. ಶಾಲೆಯಲ್ಲಿ ಕಲಿತ್ತದ್ದೆ ಇಲ್ಲ. ಯಾರೋ ತಿಂದು ಬಿಸಾಕಿದ ಮಾವಿನ ತಿಪಾಗಳನ್ನು ತಿಪ್ಪಿ ತಿಪ್ಪಿ ಅಲೆದು ತಂದು ಮಣ್ಣಲ್ಲಿ ಹಾಕಿ ಹೂಳುತ್ತಿದ್ದೆವು....ಈ ಕಾಲೇಜಿನ ಬೆಂಚುಗಳು ನೋಡುವಾಗ ಇದೆಲ್ಲ ನೆನಪಾಗುತ್ತದೆ....

# ಕಪಿಲ 
4/05/2017.

Monday 1 May 2017

ಪುಸ್ತಕ ಓದು -2

ಪೆರುವಿನ ಪವಿತ್ರ ಕಣಿವೆಯಲ್ಲಿ - ನೇಮಿಚಂದ್ರ.
ಓದು -1

"ಹೊರಟಂತೆ ದಾರಿ ಕಾಣುತ್ತದೆ"
_____________

ನನಗೆ ಮೋಡದ ಮೇಲೆ ಹಾರಬೇಕಿರಲಿಲ್ಲ, ಈ ನೆಲದ  ಅನುಭವ ಬೇಕಿತ್ತು

_________

ಪೆರುವಿನಲ್ಲಿ ಕಾರಿನ ಕೊನೆಯ ಉಸಿರಿನವರೆಗೂ ಓಡಿಸುತ್ತಾರೆ. ಅಮೇರಿಕಾದಲ್ಲಿ ಹೊಸ ಕಾರುಗಳನ್ನೇ ಬಳಸಿ ಬಿಸಾಕಿದ ಬೃಹತ್ ಜಂಕ್ ಯಾರ್ಡಗಳು ನೋಡಬಹುದು

_________

ಪೇರುವಿನಲ್ಲಿ ಅಮೇರಿಕದಂತೆ ಮಟ ಮಟ ಮಧ್ಯಾಹ್ನದಲ್ಲೂ ಖಾಲಿ ಖಾಲಿ ಬಿದ್ದ ಬೀದಿಗಳಲ್ಲಿ.
_______

ಪೆರುವಿನ ಪವಿತ್ರ ಕಣಿವೆಯಲ್ಲಿ ನೇಮಿಚಂದ್ರರವರ  ಪ್ರವಾಸ ಕಥನ  ಓದಿದಂತೆ ಮೈರೊಮಾಂಚಿತ ಗೋಳಿಸುತ್ತದೆ. ಪೆರುವಿನಲ್ಲಿ ಸ್ಪ್ಯಾನಿಷ್ ಬಿಟ್ಟರೆ ಇಂಗ್ಲಿಷನಲ್ಲಿ ಮಾತಾಡುವ ಬಾಯಿಗಳಪರೂಪ . ಇಲ್ಲಿನ ಬಡತನ, ಪ್ರಜಾಪ್ರಭುತ್ವವಕ್ಕಾಗಿ ಹೋರಾಟ,  ಅಮೇರಿಕಾದ ಶೋಷಣೆ, ಮಹಿಳಾ ಹೋರಾಟಗಾರ್ತಿಯರ ಕೊಲೆಗಳು. ಸಾಮಾನ್ಯ ಬೀದಿಗಳಲು ಈ ಜನರ ಲವಲವಿಕೆಯ ಬದುಕು. ಶುಚಿಗೊಳಿಸಿ ನುಣಗಿಟ್ಟ ಬೀದಿಗಳು, ಜನರ ಹೊಟ್ಟೆಯಲ್ಲಿ ಹಸಿವಿನ ಕಿಡಿ ಹೊಮ್ಮುತ್ತಿದ್ದರೆ "ಶೈನಿಂಗ್ ಪಾತಗೆ" ಸೇರಬಹುದೆಂಬ ದುರಾಸೆ. ( ಶೈನಿಂಗ್ ಪಾತ - ಭ್ರಷ್ಟಗೊಂಡ ಕ್ರಾಂತಿಕಾರಿ ಪಡೆ)....

ಪಿರಮಿಡ್ಗಳು,  ಫಲವತತ್ತೆಯನ್ನು ಬೇಡಿ ಪೂಜಿಸಿದ ಬಲು ದೊಡ್ಡ ಬಯಲು ಶಿಶ್ನಗಳ ದೇವಾಲಯಗಳು  ನಮ್ಮಲ್ಲಿಯ ಲಿಂಗ ಪೂಜೆ ಸಂಸ್ಕೃತಿ ನೆನಪಿಸುತ್ತವೆ..

ಹಸಿವಿದ್ದಿರೂ ಹೂ ನಗುಗಳಿವೆ...

ಕಪಿಲ -
2/05/2017