Tuesday 29 August 2017

ತುಟಿ ಚಿವುಟಿದ ಸಾಲುಗಳು- 2.

ತೇಜಸ್ವಿಯವರ ಬಹುತೇಕ ಪುಸ್ತಕಗಳು ಓದಿದರೂ ಪ್ಯಾಪಿಲಾನ್ ಓದಲು ತುಂಬಾ ವಿಳಂಬಸಿದೆ. ತೇಜಸ್ವಿ ಕಸ ಎಸೆದರು ಕೈಗೆತ್ತಿ ಓದುವ ಆಸೆ.  ಪುಸ್ತಕ ತಂದು ಒಂದು ವರ್ಷವೆ ಕಳೆಯುತ್ತ ಬಂದಿತ್ತು. ಎರಡು ಮೂರು ಸರತಿ ಓದಲು ಸಹ ಪ್ರಯತ್ನಿಸಿ ಬಿಟ್ಟೆ. ಯಾಕೋ ಆ ಸಂದರ್ಭದಲ್ಲಿ ಗೊಂದಲವೆನಿಸಿತು. ಇಗ ಯೋಚಿಸಿಕೊಂಡರೆ ನಗು ಬರುತ್ತದೆ.  ಎಂತಹ ಪುಸ್ತಕ ಓದುವುದು ತಪ್ಪಿಸಿಕೊಳ್ಳುತ್ತಿದ್ದೆಯಲ್ಲ !.
ಇದೆಲ್ಲ ಯಾಕೆ ಹೇಳುತ್ತಿದ್ದೆನೆಂದರೆ ಮನುಷ್ಯನ ಮನಸ್ಸಿನ ಬಗ್ಗೆಯೆ ವಿಚಿತ್ರವೆನಿಸುತ್ತದೆ. ಇದು ಚಂಚಲತೆಯಂತೂ ಅಲ್ಲ. ಅನಂತಮೂರ್ತಿಯವರು ಸಹ ಅವಧೇಶ್ವರಿ ಕೃತಿಯನ್ನು ಹೀಗೆ ಮೊದ ಮೊದಲು ಬಿಟ್ಟು  ಆಮೇಲೆ ಓದಿ ತುಂಬಾ ಖುಷಿ ಪಟ್ಟರೂ. ನಾವು ಯಾವುದೋ ಸಂದರ್ಭದಲ್ಲಿ ಇದು ಮುಖ್ಯವಾದದ್ದಲ್ಲವೆಂದು ಕೈಬಿಟ್ಟ ಪುಸ್ತಕಗಳು ಮತ್ತೆಂದೊ ಅಂದು ನಿರಾಕರಿಸಿದಕ್ಕೆ ಇಂದು ಸಿಗದೆ ಪೀಡಿಸುತ್ತವೆ. ಜಂಬಣ್ಣ ಅಮರಚಿಂತ  ಅವರ ಬೂಟುಗಾಲಿನ ಸದ್ದು ಪುಸ್ತಕ ಸುಮಾರು ಹತ್ತೈದು ಜನರಿಗೆ ಮಾರಾಟ ಮಾಡಿದ್ದೆ ಕೊನೆಗೆ ಅದರ ಮುಖ್ಯತೆ ಗೊತ್ತಾಗಿ ಪಲ್ಲವ ವೆಂಕಟೇಶಗೆ ಅವರಿಗೆ ಸಂಪರ್ಕಿಸಿದರೆ ಒಂದು ಪ್ರತಿಯೂ ಇಲ್ಲ. ಕೊನೆಗೆ ಹೊಸಪೇಟೆಗೆ ಹೋದಾಗ ಅವರ ಮನೆ ತುಂಬಾ ತಲಾಸ್ ಮಾಡಿದರೂ ಸಿಗಲಿಲ್ಲ. " ಪುಸ್ತಕ ಒಂದು ರೀತಿಯಲ್ಲಿ ಬೇಟೆ ತರಹ ಒಂದು ಸಾರಿ ಕೈ ಬಿಟ್ಟರೆ ಮತ್ತೆ ಸಿಗಲಾರದು"- ಆರ್ ಕೆ ಹುಡುಗಿಯವರು ಒಂದು ಭಾಷಣದಲ್ಲಿ ಹೇಳಿದ ಮಾತು ನೆನಪಾಗುತ್ತಿದೆ.
_________________________

"ಪ್ರೀಯ ಓದುಗರೆ , ಭೂಗತ ಜನರಿಗೂ ಕಾಡಿನ ಮೃಗಗಳಿಗೂ ಸಾಮಾನ್ಯವಾದ ಕೆಲವು ಗುಣಗಳಿವೆ. ಅಪಾಯ ಎದುರಾದಾಗ ಪಕ್ಕನೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹಾಗೂ ಆತ್ಮೀಯರಿಗೆ ತೊಂದರೆಯಾದಾಗ ಜೀವಭಯವನ್ನೂ ಲೆಕ್ಕಿಸದೆ ಅವರ ನೆರವಿಗೆ ಧಾವಿಸುವುದು, ಎರಡೂ ಜೀವಗಳಲ್ಲಿ ಕಂಡುಬರುವ ದೊಡ್ಡತನಗಳು"
____________

"ಬುಡಕಟ್ಟಿನ ಹುಡುಗಿ ಪ್ರೇಮವನ್ನು ಇಷ್ಟೊಂದು ನಿರಾತಂಕವಾಗಿ ಪ್ರಕಟಿಸುವುದು ಕಂಡು ಕಸಿವಿಸಿಯಾಯಿತು. ಈ ಪ್ರಕೃತಿ ಶಿಶುಗಳ ನಡವಳಿಕೆಯೇ ಹಾಗೆ. ಭಾವನೆಗಳನ್ನು ಸಹಜವಾಗಿ ವ್ಯಕ್ತಪಡಿಸಿಬಿಡುತ್ತಿದ್ದರು. ಪ್ರೇಮ, ದ್ವೇಷ, ಸಿಟ್ಟು, ಸಹನೆ ಎಲ್ಲವನ್ನೂ ನೇರವಾಗಿ ಹೇಳಿಬಿಡುವುದು. ಮನದೊಳಗೇ ಇಟ್ಟುಕೊಂಡು ಕೊರಗುವ ಬಾಬತ್ತಿಲ್ಲ"

# ಪ್ಯಾಪಿಲಾನ್.
# ಕಪಿಲ ಪಿ ಹುಮನಾಬಾದೆ.
29/8/2017.

Friday 25 August 2017

ಕಥಾಭಿಪ್ರಾಯ...

ಸ್ಫೋಟ - ( ಸಣ್ಣ ಕಥೆ) ದೀಪ್ತಿ ಭದ್ರಾವತಿ.

ಸೆಪ್ಟೆಂಬರ್ ತಿಂಗಳ ಈ ಸಾರಿಯ ಮಯೂರದಲ್ಲಿ ದೀಪಕ್ಕಳ ಸ್ಫೋಟ ಕಥೆ ನೋಡಿದೆ ಓದಬೇಕೆಂದು ಮೇಜಿನ ಮೇಲಿಟ್ಟು ಅವರು ಈ ಹಿಂದೆ ಕಳುಹಿಸಿದ "ಆ ಬದಿಯ ಹೂವು" ಕಥಾಸಂಕಲನದ ತಿಮ್ಮಯ್ಯ ಮಾರ್ಕೆಟ್ ಓದಿ ಒಂದೆರೆಡು ಕಥೆ ಸುಮ್ಮನೆ  ತಿರುವಿ ಹಾಕಿ ಮತ್ತೆ ಸ್ಪೋಟಕ್ಕೆ ಬಂದೆ. ಶಾಂತಿನಾಥ ದೇಸಾಯಿಯವರ ಕ್ಷಿತಿಜ ಕಥಾಸಂಕಲನದಲ್ಲಿ ಕ್ಷಿತಿಜ ಕಥೆ ಬಿಟ್ಟರೆ ಬಹುತೇಕ ಉಳಿದೆಲ್ಲವು ಅಥವಾ ಕ್ಷಿತಿಜ ಕಥೆಯು ಹೆಣ್ಣೊಬ್ಬಳ ಸುತ್ತವೆ ಗಿರಕಿ ಹೊಡೆಯುತ್ತವೆ. ಗಂಡ ಸತ್ತ ಮೇಲೆ, ಅಕಾಲ, ಬೇಸರ ಈ ಕಥೆಗಳು ಹೆಣ್ತನದ ಸುಪ್ತ ಬಯಕೆಗಳನ್ನು ಚಿತ್ರಿಸುತ್ತವೆ. ಬದಲಾಗುತ್ತಿರುವ ಜೀವನ ಸಂದರ್ಭಕ್ಕೆ ತಕ್ಕಂತೆ ಕಿಟಕಿಯಾಚೆ ಹಣಕಿ ಹಾಕುವ ಸಂಬಂಧಗಳು ವಿವರಿಸುತ್ತವೆ. ಅಕಾಲ ಕಥೆಯಂತೂ ಗಂಡನೊಬ್ಬ ತನ್ನ ಹೆಂಡತಿ ಹೆರಿಗೆಗೆ ಹೋದಾಗ ಅವಳ ಕಾಗದಗಳಿಗೆ ಕಾಯುವುದಾಗಿದೆ ಮತ್ತು  ಅವನಲ್ಲಿ ಅವಳಿಲ್ಲದಿರುವಿಕೆಯ ಖಾಲಿತನವನ್ನು ದಾಟುವ, ನಿಯಂತ್ರಿಸಿಕೊಳ್ಳುವಂತೆ ಕಾಣುತ್ತದೆ -ಈ ಮಾತುಗಳೆಲ್ಲ ಯಾಕೆ ಹೇಳಬೇಕಾಯಿತೆಂದರೆ ಇಂತಹದೆ ದಾಂಪತ್ಯ ಸಮಸ್ಯೆಯ ಇನ್ನೊಂದು ಕಥೆಯೆ ಸ್ಫೋಟವೆಂದು ಒಂದು ಫ್ರೆಮ್ ಹಾಕಿಕೊಂಡು ನೋಡುತ್ತಿಲ್ಲ ಬದಲಾಗಿ ಮುಂದುವರೆಕೆಯ ಭಾಗವಾಗಿ ನೋಡುತ್ತಿರುವೆ.

" ಸ್ಫೋಟಗೊಳ್ಳುವುದೆಂದರೆ ಒಳಕುದಿಗಳ ಹೊರಹಾಕಿ ನಿರಾಳವಾಗುವುದು ಎನ್ನುವುದರ ಜೊತೆಗೆ ಬರಿದಾಗುವುದು, ಬಯಲಾಗುವುದು ಎನ್ನುವ ಅರ್ಥಗಳೂ ಇವೆ"
ಈ ಕಥೆಯ ಮೊದಲ ಸಾಲುಗಳಿವು. ಹೆಣ್ಣೊಂದು ಕಣ್ಣೆತ್ತಿಯು ಸಹ ನೋಡದ ಗಂಡಸೊಂದಿಗೆ ಜೀವನ ಪರ್ಯಂತ ಕಳೆಯುವುದೆಂದರೆ ಅದೊಂದು ಸವಾಲೆ ಸರಿ. ಇಲ್ಲಿವರೆಗೂ ಅಥವಾ ಮುಂದೆಯು ಈ ಸವಾಲನ್ನು ತ್ಯಾಗದಿಂದಲೆ ಸ್ವೀಕರಿಸುತ್ತ ಬಂದಿದ್ದಾಳೆ ,ಮುಂದೆಯೂ  ?.

" ಗೊತ್ತೇ ಇರದವನ ಎದುರು ತೆರೆದುಕೊಳ್ಳುವ ಭಯವಿತ್ತು, ಕಾತರವಿತ್ತು, ನಿರೀಕ್ಷೆಯೂ ಇತ್ತು ಮದುವೆ ಎಂದಾಕ್ಷಣಕ್ಕೆ ಅವೆಲ್ಲ ಎದುರು ಬಂದು ನಿಂತು ತನ್ನನ್ನು ಲಜ್ಜೆಯ ಹೊಳೆಯಲ್ಲಿ ಮೀಯುಸಬಹುದೆಂದು ಕನಸಿತ್ತು. ಆದರೆ ಈಗ ಬೆತ್ತಲೆ ಎನ್ನುವುದು ನಿರ್ವಿಕಾರ ಎನ್ನುವಷ್ಟರ ಮಟ್ಟಿಗೆ ಮನಸ್ಸು ಮರಗಟ್ಟಿ ಹೋಗಿದೆ" - ಅರುಂಧತಿ ಸ್ಟ್ರೆಚರ್ನಲ್ಲಿ ಮಲಗಿ ಇದೆಲ್ಲ ಯೋಚಿಸುತ್ತಿದ್ದಳು. ಹೆಣ್ಣಿಗೆ ಸುಖ ಕೇಳುವ ಹಕ್ಕಿಲ್ಲವೆಂದು ಗಂಡನ ಮನೆಗೆ ಕಳಿಸಿ ಕೊಡುವ ತಂದೆತಾಯಿಗಳ ಕಣ್ಣೀರಡಿಯಲ್ಲಿ ತನ್ನ ಬಯಕೆಗಳೆಲ್ಲ ಕರಗಿಸಿದಳು.

ಆಸ್ತಿಯಿತ್ತು ಮಾತುಗಳಿರಲಿಲ್ಲ. ಬೆರಳುಗಳ ಸ್ಪರ್ಶಗಳಿರಲಿಲ್ಲ. ಗಂಡನೊಂದಿಗೆ ಗುದ್ಡಾಡಬೇಕಂದರೆ ಅವನೋ ತಣ್ಣಗೆ ಕೊರೆವ ಇದ್ದಿಲು. ಇಲ್ಲಿ ಬರೀ ದೈಹಿಕ ಕಾಮನೆಗಳ ಅನಾವರಣವಲ್ಲ.  ಇದ್ಯಾವುದರಲ್ಲಿಯು ಇಂಟರೆಸ್ಟ್ ಇಲ್ಲವೆನ್ನುವ ಗಂಡ ತನ್ನ ಹೆತ್ತವರ ಒತ್ತಾಯಕ್ಕೆ ಇನ್ನೊಂದು ಹೆಣ್ಣಿನ ಬದುಕು  ಬಲಿ ಕೊಡಬೇಕೆ ? ತನ್ನ ದೌರ್ಬಲ್ಯಗಳು, ಅಂತಸ್ತುಗಳ ಪ್ರದರ್ಶನಕ್ಕಾಗಿ  ಕೃತಕತೆಯ ಮೊರೆ ಹೋಗುವ ಗಂಡನ ಬಗ್ಗೆ ಅರುಂಧತಿಗೆ ತಿರಸ್ಕಾರದ ಜೊತೆ ಅದನ್ನು ಹೊಂದಿಕೊಳ್ಳಬೇಕಾದ ಅವಳದೆ ಕಾರಣಗಳಿವೆ.
ಅಂತಿಮವಾಗಿ ಕಥೆಯ ಕೊನೆಯಲ್ಲಿ ಗೌತಮನ ಸೆಮನ್ ಬದಲಾಗಿ ಡಾಕ್ಟರ್ ಕೈಹಿಡಿದು ಬೇರೆ ಯಾರದ್ದಾದರೂ ಇನ್ಸರ್ಟ್ ಮಾಡಿ ಅಂತಾಳೆ. ಇದು ಸಹ ಒಂದು ರೀತಿಯಲ್ಲಿ ಸ್ಫೋಟಗೊಳ್ಳುವುದೆ.

"ಯಾವ ಹೆಂಗಸನ್ನು ಕಂಡರೂ ಉಕ್ಕಲಾರದ ಉಲ್ಕೆಯ ಮುಂದೆ ಉರಿಯುವ ಅಗತ್ಯವಾದರೂ ಎಲ್ಲಿತ್ತು"...

ಈ ಕಥೆಯನ್ನು ನಾವು  ಇಡೀಯಾಗಿ ನೋಡಿದಾಗ. " ಒತ್ತಾಯಿಸಲ್ಪಟ್ಟ ಕೂಡಿಕೊಳ್ಳುವಿಕೆಯ ನಗುಗಳು ಕಳಚಿಕೊಳ್ಳಲಾಗದ ಮತ್ತು  ಕತ್ತಲಿಗಪ್ಪುವ ಒಂಟಿತನವನ್ನು ಮತ್ತು  ಈ ಒಂಟಿತನದಲ್ಲಿ ಒಮ್ಮಿಂದೊಮ್ಮೆಲೆ ಸ್ಫೋಟಗೊಳ್ಳಬಹುದಾದ ಸಣ್ಣ ಕಣವೊಂದಿದೆ...

ಶಾಂತಿನಾಥ ದೇಸಾಯಿ ಅವರ ಕ್ಷಿತಿಜ ಕಥಾಸಂಕಲನದ ಪಾತ್ರಗಳ ಅಪೇಕ್ಷೆಗಳು ಬೆಳಕ ಕಿಟಕಿ ದಾರಿ ಹಿಡಿದರೆ, ಈ ಕಥೆಯ ಪಾತ್ರ ಅದರ ಮುಂದುವರಿಕೆಯ ಭಾಗವಾಗಿ ಮರೆಮಾಚಿ ಕುದಿಯಾಗಿದೆ.

# ಕಪಿಲ್ ಪಿ. ಹುಮನಾಬಾದೆ.
25/8/2017.

Wednesday 23 August 2017

ತುಟಿ ಚಿವುಟಿದ ಸಾಲುಗಳು -೧.

ಚಿಂತನೆಯ ಪಾಡು - ರಹಮತ್ ತರಿಕೇರಿ.

"ಕೆಲವು ವರ್ಷಗಳ ಹಿಂದೆ ನಾನು 'ಜನಪ್ರಿಯ' ಪತ್ರಿಕೆಗಳಲ್ಲಿ ಕನ್ನಡ ಪುಸ್ತಕಗಳ ಮೇಲೆ ವಿಮರ್ಶೆ ಬರೆದೆ. ಅದನ್ನು ವಿಮರ್ಶೆ ಎನ್ನುವುದಕ್ಕಿಂತ ಲಹರಿ ರೂಪದ ವಿಶ್ಲೇಷಣೆಗಳು ಎನ್ನುವುದು ಉಚಿತ. ಬೇಕಾದ ಪುಸ್ತಕವನ್ನು ಆರಿಸಿಕೊಂಡು ಬರೆಯುವ ಸ್ವಾತಂತ್ರ್ಯವನ್ನು ಆ ಪತ್ರಿಕೆಗಳು ನನಗೆ ಕೊಟ್ಟಿದ್ದವು. ಸಾಹಿತ್ಯಕ ಪತ್ರಿಕೆಗಳಿಗೆ ನಾನು ಗಂಭೀರ ವದನವುಳ್ಳವನಾಗಿ ಪುಸ್ತಕ ವಿಮರ್ಶೆ ಬರೆದವನೇ...ಆದರೆ ದೊಡ್ಡ ಸಂಖ್ಯೆಯ ಓದುಗರಿರುವ ಜನಪ್ರಿಯ ಪತ್ರಿಕೆಗಳಲ್ಲಿ ಸಾಹಿತ್ಯ ಕೃತಿಗಳನ್ನು ಕುರಿತು ವಿಶ್ಲೇಷಣೆ ಮಾಡಿರಲಿಲ್ಲ. ಹಲವು ಹಿನ್ನಲೆಗೆ ಸೇರಿದ ಜನರು ಓದುವ ಪತ್ರಿಕೆಗಳಿಗೆ ವಿಮರ್ಶೆ ಬರೆಯುವಾಗ, ಸಹಜವಾಗಿಯೇ ಅಕಡೆಮಿಕ್  ಆಯಾಮ ಹಿಂಜರಿಯುತ್ತದೆ. ಜನಪ್ರಿಯತೆಯ ಸೆಳವಿನಲ್ಲಿ ಜಿಜ್ಞಾಸೆಯ ಗುಣ ಕಡಿಮೆಗೊಳ್ಳುತ್ತದೆ. ಅದೇ ಹೊತ್ತಲ್ಲಿ ಭಾಷೆ ಮತ್ತು ಶೈಲಿ ಸರಳವಾಗತೊಡಗುತ್ತವೆ. ಶೈಕ್ಷಣಿಕ ಗಂಭೀರತೆಯಿಂದ ಬರುವ ಜಡತೆ ತೊಡೆದುಹೋಗುತ್ತದೆ...

ತರಿಕೇರಿಯವರು ತಮ್ಮ  ಚಿಂತನೆಯ ಪಾಡು ಕೃತಿಗೆ ಮುಮ್ಮಾತು ಬರೆಯುತ್ತ ಹೀಗೆ ಹೇಳಿದ್ದು ನಿಜಕ್ಕೂ ಹೌದನಿಸಿತು. ಫೇಸ್ಬುಕಗಳಲ್ಲಿ ನಮ್ಮ ಪಾಡಿಗೆ ನಾವು ಬರೆಯುವ ಪುಸ್ತಕಭಿಪ್ರಾಯಗಳಿಗೆ ಹೆಚ್ಚು ಸ್ವಾತಂತ್ರ್ಯವಿದೆಯೆನಿಸುತ್ತದೆ.  ಪತ್ರಿಕೆಗಳು ಲೇಖನದ ತುದಿ ಮಡಚಿ ಚಿವುಟಿ ನೀಟಾಗಿ ಪತ್ರಿಕೆಗೆ ಅಂಟಿಸುವುದು ನೋಡಿದರೆ ಬೇಸರವು ಮತ್ತು  ಅವರ ಅನಿವಾರ್ಯತೆಯು ಎದ್ದು ಕಾಣುತ್ತದೆ. ಹಾಗಂತ ನಾವು ಬರೆಯುವುದೆ ಅಂತಿಮವಲ್ಲ. ತಿದ್ದುಕೊಳ್ಳಬೇಕು ಹಾಗೂ ನಿರಂತರ ಓದು ಇತರ ಚಿಂತನೆಗಳು ಸಹ ಅವಶ್ಯಕ. ಆದರೆ  ನಮ್ಮ ಪಾಡಿಗೆ ನಾವು ಸ್ವಾತಂತ್ರ್ಯವಾಗಿ ನಮ್ಮದೇ ಪುಟಗಳಲ್ಲಿ ಬರೆಯುವಾಗ ಅಲ್ಲಿ ಪ್ರಾಮಾಣಿಕ ಅಭಿವ್ಯಕ್ತಿ  ಇರುತ್ತದೆ. ಇತ್ತರ ಒತ್ತಡಗಳು ಹಾಗೂ ಯಾರಿಗೋ ಒಲೈಸಿಕೊಳ್ಳುವಿಕೆ ಕಾಣುವುದಿಲ್ಲ. ಈ ನಿಟ್ಟಿನಲ್ಲಿ ನಾವು ತರಿಕೇರಿಯವರ ಮಾತುಗಳು ಒಂದಿಷ್ಟು ಮರುಯೋಚಿಸಬೇಕಾದನಿವಾರ್ಯವಿದೆ.

ಮರದೊಳಗಣ ಕಿಚ್ಚು: -

ಮರದೊಳಗಿನ ಕಿಚ್ಚು, ಪ್ರತಿಸಂಸ್ಕೃತಿ, ಚಿಂತನೆಯ ಪಾಡು ಅವರ ಕೃತಿಗಳು ಸುಮ್ಮನೆ ಹರಡಿಕೊಂಡು ಕೂತಿದ್ದೆ.  ಮರದೊಳಗಣ ಕಿಚ್ಚಿನ ಕೃತಿಯ ಮೊದಲ ಲೇಖನದಲ್ಲಿ
" ಹೂವಯ್ಯನಂತಹವರ ಸಮಸ್ಯೆಯಿರುವುದು, ಸಮುದಾಯದ ಸಂಸ್ಕೃತಿ ಮೂಢವಾಗಿದೆ ಮತ್ತು  ಅದನ್ನು ಬದಲಾಯಿಸಬೇಕು ಎಂದು ನಂಬಿರುವುದರಲ್ಲಿ. ಅವನಿಗೆ ಗುತ್ತಿ ಸೋಮ ಭೈರರ ಜಗತ್ತಿನ ಚೈತನ್ಯಶಕ್ತಿಗಳ ಬಗ್ಗೆ  ಏನೂ ಗೊತ್ತಿಲ್ಲ. ಹೂವಯ್ಯ ತಮ್ಮ ಸಾಂಸ್ಕೃತಿಕ ಲೋಕದ ಒಳಗೆ ತಿರಸ್ಕಾರದ ನಿಲುವಿನಿಂದ ಹೊಕ್ಕಾಗ, ಉದ್ಧಾರ ಮಾಡುತ್ತೇನೆಂದು ಹೊರಟಾಗ ಸಿಡಿದು ದೂರವಾಗಿ ಬಿಡುತ್ತದೆ. ನಿಜವಾದ ಬದಲಾವಣೆ ಎಲ್ಲಿಂದ ಶುರುವಾಗಬೇಕೆಂದು ಕಡೇತನಕ ಹೂವಯ್ಯನಿಗೆ ತಿಳಿಯುವುದಿಲ್ಲ" ತರಿಕೇರಿ ಸರ್ ಅವರ ಈ ವಿಶ್ಲೇಷಣೆ ನೋಡುವಾಗ ನನಗೆ ಅನಂತಮೂರ್ತಿಯವರ ಭಾರತೀಪುರದ ಜಗನ್ನಾಥನ ಸಮಸ್ಯೆಯು ಇದೇ ಇರಬಹುದೆ ಎಂದನಿಸುತ್ತದೆ ಆ ಸಾಧ್ಯತೆಗಳು ಸಹ ಇವೆ.

ಇಲ್ಲೆಕೆ ಹೂವಯ್ಯನ ಮಾತುಗಳು ನೆನಪಿಸಿದೆಯಂದರೆ ನಾವು ಸಹ ಕೆಲವು ಆಚರಣೆಗಳನ್ನು ತೀರಾ ತಿರಸ್ಕಾರ ದೃಷ್ಟಿಯಿಂದ ನೋಡುತ್ತಿದ್ದೆವೆ. ಹಾಗಂತ ಎಲ್ಲಾ  ಆಚರಣೆಗಳು ಉತ್ತಮವಾದವುಗಳೆಂದಲ್ಲ. ನಮ್ಮ ಮತ್ತು ಅವರ ಜಗತ್ತುಗಳು ಬೇರೆ ಬೇರೆಯಾಗಿರುವಾಗ ಈ ರೀತಿಯ ಅಭಿಪ್ರಾಯ ಮೂಡುವುದು ಸಹಜ. ಅವರ ಪಾದಗಳು ನಿಂತಿರುವ ನೆಲದ  ತಲ್ಲಣ ಮತ್ತು ಶಕ್ತಿ ಅರಿಯುವುದು ತೀರಾ ಮುಖ್ಯ. ಅವರ ಆಚರಣೆಗೂ ಅವರ ಬದುಕಿಗೂ ಏನೋ ಒಂದು ಸಂಬಂಧ ಇರುತ್ತದೆ.  ಹಲವು ಸಾಂಸ್ಕೃತಿಕ  ಆಚರಣೆಗಳನ್ನು ನಾವು ತೀರಾ ಉಡಾಫೆಯಿಂದ ನೋಡುವುದು ಸಹ ತಪ್ಪೆನಿಸುತ್ತಿದೆ. ಅಲ್ಲೆನೋ ಇದೆ ಅವರ ಬದುಕಿಗಂಟಿಕೊಂಡಿರುವಂತಹದು...

# ಕಪಿಲ ಪಿ ಹುಮನಾಬಾದೆ.

Tuesday 15 August 2017

ಮೊಗ್ಗುಗಳ ಹೆಣ

ಹಾಲ ಪಸೆ ಆರದ ತುಟಿಯ ಚಂದ್ರನ ತೂಗುತಲಿತ್ತು ಅಮವಾಸ್ಯೆಯ ಇರುಳು ‌
ಅದರ ಕೊನೆಯುಸಿರಾದರೂ ಹುಟ್ಟಿಸಲಿ‌ ಪಸೆಯಾರಿದ ಎದೆಯಲಿ

ಅರೆ ಮುಚ್ಚಿದ ಕಣ್ಣುಗಳೊಳಗೆ 
ಕಾಣುತಿದೆ ದಿವ್ಯ ಶಾಂತಿ
ಮುದ್ದು ಸುರಿವ ಗುಂಗುರಲೂ
ನಸುಗೆಂಪಿನ ಕೆನ್ನೆಯಲೂ
ನೋವ ಸಹಿಸದ ಎಳೇ ಸೂರ್ಯ ಮತ್ತೆ ಮತ್ತೆ  ಸಾಯುತಿದ್ದಾನೆ ರಣಗೆಂಪು
ಶರಧಿಯಲಿ

ಕಣ್ಣ ಮುಚ್ಚಿ ತೆರೆದರೂ ಮತ್ತೆ
ಮರೆಯಾಗದ ಮುಖವ
ಮತ್ತೆ ಸುಡುತಿದೆ ನನ್ನ ಬಿಸಿಯ ಹನಿಗಳು
ಉಕ್ಕಿ ಬರೋ ಕೊರಳನ್ನ
ತಣಿಸಬಹುದೇನೋ
ಕರುಳ ಕಿತ್ತ ಹೆತ್ತಬ್ಬೆಯ
ನೋವಿನ ಶಾಪ ಕಲ್ಲೆದೆಯನೂ
ಸೀಳಿ ಒತ್ತ ಬಹುದು
ಉಗುರುಗೆಂಪಿನ ಬೆಣ್ಣೆ ಮುದ್ದೆಗೆ ಉಸಿರ ಕೊಡಿಸುವ ಕೊನೆ ಹಂಬಲ
ದಾಹದುರಿಗೆ ಆಹುತಿಯು ಮೊಗ್ಗಿನ ಹೆಣ

ಬೆವೆತ ಬೆವರ ನೆಕ್ಕಿ ಗಂಟಲು
ಒದ್ದೆ ಮಾಡುವವರೋ
ಮೈಕಿಗೆ ನಾಲಿಗೆಯ ಮೆತ್ತಿ
ಬಿಟ್ಟಿದ್ದಾರೆ ಇಲ್ಲೋ ಶ್ವಾಸ
ಸ್ವಾತಂತ್ರ್ಯ ಕೇಳುತಿದೆ
ಎಂಜಲು ವೀರರ ಬುಟ್ಟಿ
ತುಂಬಾ ಹಸಿರಕ್ತದ ಹೂವು ಅಂಗಾತ ಬೀಳುತ್ತಲೇ ಇವೆ

ಎಸಳೆಸಲುಕಿತ್ತು ಬಾವುಟ ಹಾರಿಸುತ್ತಾರೆ ಬಾಡಿಗೆ ಕೈಗಳೋ ಚಪ್ಪಾಳೆ ತಟ್ಟುತ್ತಿವೆ..

ಕಾವ್ಯ ಎಸ್ ಕೋಳಿವಾಡ್

Thursday 10 August 2017

ಕೆಲವು ಪುಸ್ತಕಗಳು...

"ಪುಸ್ತಕ ಮನೆ" ( ಆನ್ಲೈನ್ ಪುಸ್ತಕ ಮಾರಾಟ)

ಹನುಮಂತ ಹಾಲಿಗೇರಿಯವರ ಪುಸ್ತಕಗಳು..

1. ಮಠದ ಹೋರಿ ( ಕಥಾಸಂಕಲನ) - ಹನುಮಂತ ಹಾಲಿಗೇರಿ. - 180 ರೂಪಾಯಿ.

2. ಗೆಂಡೆದೇವ್ರು - ಕಥಾಸಂಕಲನ,  ಹನುಮಂತ ಹಾಲಿಗೇರಿ,  100 ರೂಪಾಯಿ.

3. ಕೆಂಗುಲಾಬಿ  (ಕಾದಂಬರಿ) - ಹನುಮಂತ ಹಾಲಿಗೇರಿ. 110 ರೂಪಾಯಿ.

4. ಊರು ಸುಟ್ಟರೂ ಹನುಮಪ್ಪ ಹೊರಗೆ ( ನಾಟಕ) - ಹನುಮಂತ ಹಾಲಿಗೇರಿ.  75 ರೂಪಾಯಿ.

6. ಅಲೆ ತಾಕಿದರೆ ದಡ - ವಾಸುದೇವ್ ನಾಡಿಗ್  (ಕವನ ಸಂಕಲನ) - 90 ರೂಪಾಯಿ.

7. ತಮಂಧದ ಕೇಡು - ಅಮರೇಶ ನುಗಡೋಣಿ,  150 ರೂಪಾಯಿ.

8. ಆರಿಫ್ ರಾಜಾರವರ ಎರಡು ಕವನ ಸಂಕಲನಗಳು 200 ರೂಪಾಯಿ

9 ಗಾಂಧಿ ಬಂದ ( ಕಾದಂಬರಿ) - ಎಚ್ ನಾಗವೇಣಿ,  240 ರೂಪಾಯಿ

10.ಅನುದಿನದ ಅಂತರಗಂಗೆ - ಪ್ರತಿಭಾ ನಂದಕುಮಾರ್ ಆತ್ಮಕಥೆ ,260 ರೂಪಾಯಿ

ಆಡು ಕಾಯುವ ಹುಡುಗನ ದಿನಚರಿ - ಟಿ ಎಸ್ ಗೊರವ. 100 ರೂಪಾಯಿ

ರೊಟ್ಟಿ ಮುಟಗಿ - ಟಿ ಎಸ್ ಗೊರವ.70 ರೂಪಾಯಿ

ಅಹರ್ನಿಶಿ ಪ್ರಕಾಶನ

1 . ಗಾಂಧಿ ಬಂದ- ಎಚ್ ನಾಗವೇಣಿ
ರಾಜ್ಯ ಮಟ್ಟದ ನಾಲ್ಕು ಪ್ರಶಸ್ತಿಗಳನ್ನು ಪಡೆದಿದೆ .
ಬೆಲೆ- 260

2.ಮತ್ತೆ ಮತ್ತೆ ಬ್ರೇಕ್ಟ  (ಬರ್ಟೋಲಟ್ ಬ್ರೇಕ್ಟ ಕವಿ)
ಅನುವಾದ- ಯು ಆರ್ ಅನಂತಮೂರ್ತಿ
ಬೆಲೆ- 100

3.ಆ ದಶಕ (80 ರ ದಶಕದ ಬರಹ ಮತ್ತು ಪತ್ರಗಳು)
ಕಡಿದಾಳು ಶಾಮಣ್ಣ
ಬೆಲೆ -80

4. ಅನಂತಮೂರ್ತಿ ಮಾತುಕತೆ ಹತ್ತು  ಸಮಸ್ತ ಮಾಸ್ತರರ ಜೊತೆ...
ಸಂದರ್ಶನಕಾರರು:- ಅನಂತಮೂರ್ತಿ
ಬೆಲೆ-125

5.ಅನುದಿನದ ಅಂತರಗಂಗೆ-
ಪ್ರತಿಭಾ ನಂದಕುಮಾರ್ ಅವರ ಆತ್ಮಕಥೆ
ಬೆಲೆ-230

6 .ಮತ್ತೆ ಮತ್ತೆ ಬೇಂದ್ರೆ -ಕಿ ರಂ ನಾಗರಾಜ್
ಬೆಲೆ- 75"ರೂಪಾಯಿ

7.ದಲಿತಬ್ರಾಹ್ಮಣ (ಕಥಾ ಸಂಕಲನ )
- ಶರಣುಕುಮಾರ ಲಿಂಬಾಳೆ/ ಮಾಧವ್
150 ರೂಪಾಯಿ

8.ಧ್ಯಾನಕ್ಕೆ ತಾರೀಖಿನ ಹಂಗಿಲ್ಲ  (ಕವನ ಸಂಕಲನ )
ಕಾವ್ಯ ಕಡಮೆ ಬೆಲೆ-75 ರೂಪಾಯಿ

9.ಅವ್ವನ ಅಂಗನವಾಡಿ (ಕವನ ಸಂಕಲನ )
ಅರುಣ ಜೋಳದಕೊಡ್ಲಿಗಿ
-60

10.ರೆಕ್ಕೆ ಹಾವು (ಕಥಾ ಸಂಕಲನ )
ಟಿ ಕೆ ದಯಾನಂದ
100 ರೂಪಾಯಿ

11.ಹನ್ನೋಂದನೆ ಇಂದ್ರಿಯ( ಅಂಕಣ ಬರಹಗಳು )
ಕೆ ಸತ್ಯನಾರಾಯಣ
150 ರೂಪಾಯಿ

12. ಸಾಸಿವೆ ತಂದವಳು (ಕ್ಯಾನ್ಸರ್ ಜೊತೆಗಿನ ಹೋರಾಟದ ಕಥನ)
ಭಾರತಿ ಬಿ.ವಿ
110 ರೂಪಾಯಿ

13 ಉರಿ  (ಕಥೆಗಳು )
ವಿನಯಾ
ಬೆಲೆ -90

14.ದಿಲ್ಲಿ ಡೈರಿಯ ಪುಟಗಳು (ಅಂಕಣ ಬರಹ)
ರೇಣುಕಾ ನಿಡಗುಂದಿ
140  ರೂಪಾಯಿ

15 ಜಾಲರ ಹೂ (ಪ್ರಬಂಧ )
ಜಿ ವಿ ಆನಂದಮೂರ್ತಿ
ಬೆಲೆ -85
.
16.ಹುದುಗಲಾರದ ದುಃಖ  ( "ಏ ಗ್ರೀಪ್ ಟು ಬರಿ"ಯ ಅನುವಾದ )
ವಸಂತ ಕಣ್ಣಾಭಿನರಾವ್  ಸಂಯೋಜಕಿ-ಎಂ ಎಸ್ ಆಶಾದೇವಿ
ಬೆಲೆ- 310

17.ವಿಮೋಚಕಿಯ ಕನಸು, ಸಾವಿತ್ರಿ ಬಾಯಿ ಫುಲೆ ಜೀವನ ಚರಿತ್ರೆ
ಬೆಲೆ -70

18 ನಮ್ಮ ಶಾಮಣ್ಣ -ಕಡಿದಾಳು ಶಾಮಣ್ಣನವರ ಅಭಿನಂದನಾ ಗ್ರಂಥ
ಬೆಲೆ-375

19. ಸ್ತ್ರೀ ದರ್ಪಣದಲ್ಲಿ ನಾಟ್ಯಶಾಸ್ತ್ರ(ವಿಮರ್ಶಾ ಕೃತಿ)
ಬಿ ಎನ್ ಸುಮಿತ್ರಬಾಯಿ
ಬೆಲೆ- 200/-

20.ಯೋಳ್ತಿನಿ ಕೇಳಿ- (ಅಂಕಣ ಬರಹಗಳು )
ಕುಸುಮಬಾಲೆ
ಬೆಲೆ -165

21.ಮರೆತು ಹೋದ ದೊಂಬರಾಕೆ (ಕವನ ಸಂಕಲನ)
ಎಚ್ ಎಸ್ ಶಿವಪ್ರಕಾಶ್ (ಜಿಂಗೋನಿಯಾ ಜೀಗೊನಿ ಕವನಗಳ ಅನುವಾದ)
ಬೆಲೆ- 75 ರೂಪಾಯಿ.

22.* ಬೆತ್ತಲೆಯ ಬೆಳಕನುಟ್ಟು - ಜಿ ಪಿ ಬಸವರಾಜು
ಸಣ್ಣ ಕಥಾಸಂಕಲನ

23. ಕಥೆ ಹೇಳುವೆ - ಸುಕನ್ಯಾ ಕನಾರಳ್ಳಿ

24 .ನಡುವೆ ಸುಳಿವ ಆತ್ಮ-ಸ್ತ್ರೀ ಸಂಕಥನದ ಚಹರೆಗಳು
ಎಂ ಎಸ್ ಆಶಾದೇವಿ.

ಪಲ್ಲವ ಪ್ರಕಾಶನದ ಪುಸ್ತಕಗಳ ಪಟ್ಟಿ

1, ಜಂಗಮ ಫಕೀರನ ಜೋಳಿಗೆ ( ಕವನ ಸಂಕಲನ) ಆರಿಫ್ ರಾಜಾ

2 ಬೆಂಕಿಗೆ ತೊಡಿಸಿದ ಬಟ್ಟೆ ( ಕವನ ಸಂಕಲನ ) ಆರಿಫ್ ರಾಜಾ

3 ಬನದ ಹುಣ್ಣಿಮೆ ( ಕಥಾ ಸಂಕಲನ )
ಅಬ್ಬಾಸ್ ಮೇಲಿನಮನಿ

4 ಭಾವಭಿತ್ತಿಯ ಚಿತ್ರಗಳು ( ಕಥಾ ಸಂಕಲನ) ಟಿ ಕೆ ತ್ಯಾಗರಾಜ

5 ಹೊಕ್ಕಳ ಋತುಗಾನ (ಕವನ ಸಂಕಲನ )
ಎಸ್ ಜಿ ಸಿದ್ದರಾಮಯ್ಯ

6 ಇಂತಿ ನಮಸ್ಕಾರಗಳು - ಪಿ ಲಂಕೇಶ್ ಕುರಿತು ಲೇಖಕ ನಟರಾಜ್ ಹುಳಿಯಾರ

7 ಕುದುರಿ ಮಾಸ್ತರ - ಟಿ ಎಸ್ ಗೊರವರ ( ಕಥಾಸಂಕಲನ )

8 ಅಸಮಗ್ರ - ರಾಜೇಂದ್ರ ಚೆನ್ನಿ

9 ನನ್ನಿಷ್ಟ , ರಾಮ್ ಗೋಪಾಲ್ ವರ್ಮಾ ಸಿನಿಮಾಯಾನ

10 ಆಡು ಕಾಯೋ ಹುಡುಗನ ದಿನಚರಿ - ಟಿ ಎಸ್ ಗೊರವರ ( ಅನುಭವ ಕಥನ) ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೃತಿ

ಈ ಪುಸ್ತಕಗಳಲ್ಲದೆ ಹೆಚ್ಚಿನ ಪುಸ್ತಕಗಳ ಮಾಹಿತಿಗೆ

ಪಲ್ಲವ ಪ್ರಕಾಶನ

11. ಕಾಲಕನ್ನಡಿ - ಚಿದಾನಂದ ಸಾಲಿ
( ಸಂದರ್ಶನಗಳು ವ್ಯಕ್ತಿಚಿತ್ರಗಳು)

12.ಕ್ಯಾಮರಾ ಕಣ್ಣಲ್ಲಿ ರಾಜ್
- ಭವಾನಿ ಲಕ್ಷ್ಮೀನಾರಾಯಣ

13. ಅಕ್ಕ ಸೀತಾ ನಿನ್ನಂತೆ ನಾನೂ ಶಂಕಿತ
(ಕವನ ಸಂಕಲನ ) ಬಿ ಪೀರ್ ಬಾಷಾ

14 ಮಗದೊಮ್ಮೆ ನಕ್ಕ ಬುದ್ಧ - ಆನಂದ ಋಗ್ವೇದಿ ಕತೆಗಳು

15.ಮಧ್ಯಕಾಲೀನ ಕರ್ನಾಟಕದಲ್ಲಿ ದಲಿತರು
- ಡಾ ಓ ದೇವರಾಜ

16.ಸಾವಿತ್ರಿಬಾಯಿ ಫುಲೆ- ಸುಜ್ಞಾನಮೂರತಿ

17 ದೂರ ತೀರ - ಅನುಪಮಾ ಪ್ರಸಾದ

18 ಸಮಗ್ರ ಸಂಶೋಧಕ ಎಂ ಎಂ ಕಲಬುರಗಿ
- ಮೃತ್ಯುಂಜಯ ರುಮಾಲೆ

19 ಹೊಳೆಗುಂಟ ನಡೆದ ಹುಡುಗಿ '(ಕವನ ಸಂಕಲನ)
- ಡಾ ಸಿ ರವೀಂದ್ರನಾಥ

20, ಮುಗಿಲ ಮಾಯೆಯ ಕರುಣೆ - ಪಿ ಮಂಜುನಾಥ

21 ಧರೆ ಹತ್ತಿ ಉರಿದರೆ- ಡಾ ಟಿ ಆರ್ ಚಂದ್ರಶೇಖರ್

22 ಸೂರ್ಯ ಸಮುದ್ರದಲ್ಲಿ ಮುಳುಗುವುದಿಲ್ಲ - ಚಂದ್ರಶೇಖರ್ ಆಲೂರು

23 ಯಾಕೆ ಕಾಡುತ್ತಿದೆ ಸುಮ್ಮನೆ ನನ್ನನು (ಅಂಕಣ ಬರಹಗಳು ) - ಎನ್ ಸಂಧ್ಯಾರಾಣಿ

24 ವಾಹ್ ! ಮೀಡಿಯಾ  (ಅಂಕಣ ಬರಹಗಳು )
- ಜಿ ಎನ್ ಮೋಹನ್

25 ನಿಜಸ್ವಪ್ನ- ಎಚ್  ಆರ್ ರಮೇಶ್

26 ಭಾರತ ಭಾಗ್ಯ ವಿಧಾತ ( ಕಥಾಸಂಕಲನ )
- ಮಹಾಂತೇಶ ನವಲಕಲ್

27.ಜುಲುಮೆ ( ಕವನ ಸಂಕಲನ ) ರಮೇಶ್ ಅರೋಲಿ

28 .ಕರಿಮೆಣಸಿನಗಿಡ( ಕಾದಂಬರಿ )
ತೆಲುಗಿನಲ್ಲಿ - ಡಾ ವಿ ಚಂದ್ರಶೇಖರ
ಕನ್ನಡ - ಸೃಜನ್

29 ಅಸಮಗ್ರ- ರಾಜೇಂದ್ರ ಚೆನ್ನಿ

30. ಬೂಟುಗಾಲಿನ ಸದ್ದು - ಜಂಬಣ್ಮ ಅಮರಚಿತ

31. ಚರಿತ್ರೆ ಕಥನ- ಡಾ ಕೆ ಮೋಹನಕೃಷ್ಣ ರೈ

32 ಕಥೆ ಎಂಬ ಇರಿವ ಅಲಗು- ಮಂಜುನಾಥ ಲತಾ

- ಸಂಪರ್ಕಿಸಿ
ಪುಸ್ತಕ ಮನೆ:-
ಪ್ರವೀಣ ಮುತಾಲಿಕ್.
8762370118.

ಕೊರಿಯರ್ ಮುಖಾಂತರ ಅಥವಾ ಪೊಸ್ಟ್ ಮುಖಾಂತರ ಪುಸ್ತಕ ಕಳುಹಿಸಲಾಗುವುದು. ಪುಸ್ತಕ ಕೊಂಡು ಪ್ರೋತ್ಸಾಹಿಸಿ.