Sunday, 12 November 2017

ನೇತ್ರಾವತಿಯವರ ಕವನ

ಜೋಳಿಗೆ

ಜೋಳಿಗೆ ತುಂಬ
ದಟ್ಟ ಕಾರ್ಮೋಡಗಳು
ಬಟ್ಟಲಲ್ಲೇ ಕಡಲನ್ನೇ
ಸೆರೆಹಿಡಿದ ಒಡೆಯ

ಪೌರ್ಣಿಮೆಗೂ ಈಗ
ಜೋಳಿಗೆಯಾಸೆ
ಮೊರೆತವೀಗ ಮೌನ..

ಪ್ರಶಾಂತ ಸಾಗರ ಪೂರ
ಅಸಹನೆಯ ಹಿಟ್ಲರ್ಗಳ
ಬಿಟ್ಟುಹೋದ
ದಿಗಂತದ ಮಾಲೀಕ..

ಆಸರೆಯ ಕೈಗಳಿಗೀಗ
ಹೆಗಲಿಗೆ ಬಂದದ್ದು ಹುನ್ನಾರವಿಲ್ಲದ
ಮಂದಮಾರುತ
ಜ್ವಾಲೆ ಕಿಡಿಗಳು ಆಗಸಕ್ಕೇರಿ
ಚುಕ್ಕೆಯಾಗಿ ಹಗಲಲ್ಲೇ ಕಂಗೊಳಿಸುವಂತೆ

ಲೋಲಕ ತೂಕದ
ತರಹೇವಾರಿ ಕಲ್ಗಳಿಗೆ
ತೆರೆ ನೃತ್ಯಗಾರ್ತಿಯ ನೃತ್ಯ
ನೋಡುವ ತವಕದೇ
ಒಂದರ ಮೇಲೊಂದು
ತಣ್ಣನೆ ಸ್ಪರ್ಧೆ..

ಬಳುಕುವ ಅಲೆಗಳಿಗೀಗ
ಮಾಂತ್ರಿಕನಾದ ಸ್ತಬ್ದನ ವಶ
ಸ್ಮೃತಿಗೀಗ ಭೂತದಕ್ಕರೆ
ಉಸುಕು ಕೆಳಮಾಳಿಗೆಯಲಿ
ಆರಾಮ ಚೇರಲ್ಲಿ ಕಪ್ಪೆಚಿಪ್ಪಿನೆಣಿಕೆ

# ನೇತ್ರಾವತಿ

8 comments:

  1. ಒಂದೊಳ್ಳೆ ಕವನ. ತುಂಬಾ ಚೆನ್ನಾಗಿದೆ.

    ReplyDelete
  2. ಚಂದದ ಕವನ.. ಚೆನ್ನಾಗಿದೆ

    ReplyDelete
  3. ಅರ್ಥಗರ್ಭಿತ

    ReplyDelete
  4. Such a different feelings... nice poem

    ReplyDelete
  5. ಧನ್ಯವಾದಗಳು ಪ್ರೀಯ ಓದುಗರಿಗೆ

    ReplyDelete