Tuesday 14 November 2017

ಹುಲಿಯ ಪದ್ಯಗಳು # ಜೋಗಿಬೆಟ್ಟು, ಚಾಂದ್.

ಹುಲಿ

ಹುಲಿಯೊಂದು ನಿನ್ನೆ
ಬಲಿಯಾಗಿದೆ
ಬಳಿ ಸುಳಿದಾಡುವ
ಕೆಲವು ಪುಕ್ಕಲರು ಹೇಳುತ್ತಿದ್ದರು,
" ಹುಲಿ ಇನ್ನೂ ಉಸಿರಾಡುತ್ತಿದೆ "

ಜೀವವಿದ್ದಾಗ ಹತ್ತಿರವೆಲ್ಲೂ
ಸುಳಿಯದಿದ್ದ ಕ್ರಿಮಿ, ಕೀಟಗಳಿಗೆಲ್ಲಾ
ಅಹಂಕಾರ!
ಗುಂಯ್ಗು‌ಡುತ್ತ ಮುತ್ತಿಕ್ಕಿದೆ
ಹುಲಿಯ ಕಳೇಬರದ ಮೇಲೆ
ನಾಯಿಯೂ ಎಳೆಯುತ್ತಿದೆ,
ನರಿಯೂ ಮೆರೆಯುತ್ತಿದೆ!

ಒಂದಿಬ್ಬರು ಹುಲಿಯ
ಎದೆಗೆ ಮೆಟ್ಟಿ ನಿಂತು
ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ,
" ಅವರೇ ಬೇಟೆಯಾಡಿದಷ್ಟು ಕ್ರೂರ ಠೀವಿ!"

" ಹುಲಿ ತ್ರಾಣವಿಲ್ಲದೆ ಸತ್ತದ್ದು,
ಮುಪ್ಪೇರಿ ಬೇಟೆ ಸಿಗದೆ ಹೋಗಿದ್ದು"
ಮೂದಲಿಸುವಿಕೆ, ತಾತ್ಸಾರ ತಾರಕಕ್ಕೆ!
ಕೊಲ್ಲುವಾಗ ಅವರು ಬೀಸಿದ ಬಲೆ,
ಚಿಮ್ಮಿದ ಗುಂಡು, ಮೋಸದ ಅಕ್ರಮಣ
ಎಲ್ಲವೂ ನ್ಯಾಯ ಸಮ್ಮತ ?..

ಮುನವ್ವರ್, ಜೋಗಿಬೆಟ್ಟು.

2.
ನನಗೆ ಗೊತ್ತು, ನಿಮಗೆ ಟಿಪ್ಪುವಿನ ಚೂಪಾದ ಮೀಸೆಯ ಕಂಡರೆ, ಅವನ ಖಡ್ಗವ ಕಂಡಷ್ಟೇ ಭಯವೆಂದು,
ಏಕೆಂದರೆ, ಹುಲಿಯ ಎದುರು ನಿಲ್ಲಲಾಗದ ವೀರತ್ವದವರು ನೀವು!!
ಅಷ್ಟಕ್ಕೂ, ಹುಲಿಯನ್ನು ಕೊಲ್ಲಲು ದನದ ಕಥೆ ಹೇಳಿದವರಲ್ಲವೇ ನೀವು!

                       
                            .  . #ಕವಿಚಂದ್ರ

1 comment: