Tuesday 26 September 2017

ತೆರೆದ-ಮನ ( ಪುಸ್ತಕಭಿಪ್ರಾಯ)

ಹೆಬ್ಬಾವಿನೊಡನೆ ಹೋರಾಟ - ಪ್ರದೀಪ್ ಕೆಂಜಿಗೆ.

" ಮೇಲು ನೋಟಕ್ಕೆ  ಇದು ಸರಳವೆಂಬಂತೆ ತೋರಿ ದಿಕ್ಕು ತಪ್ಪಿಸುವ ಕೃತಿ. ಆದರೆ ಗಮನವಿಟ್ಟು ನೋಡಿದರೆ , ಈ ಲೋಕದ ಒಳ ಸೂಕ್ಷ್ಮಗಳನ್ನು ಅರಿಯುವ ಲೇಖಕನ ಆಶಯ ಕಾಣದಿರದು" - ಎಸ್ ಆರ್ ವಿಜಯಶಂಕರರು ಮುನ್ನುಡಿಯ ಕೊನೆಗಾಡಿರುವ ಈ ಮಾತುಗಳೆ ಸಾಕು ಈ ಪುಸ್ತಕ ಓದಿದವನಿಗೆ ಸಮಾಧಾನ ಪಡಿಸಲು.

ಈ ಹಿಂದೆ ಪ್ರದೀಪ್ ಅವರ ಅದ್ಭುತ ಯಾನ, ಪ್ಯಾಪಿಲಾನ್ ( ಭಾವಾನುವಾದ) ಓದಿದವರಿಗೆ " "ಹೆಬ್ಬಾವಿನೊಡನೆ ಹೋರಾಟ" ಎನ್ನುವ ಶಿರ್ಷೀಕೆ ಕುತೂಹಲ ಹುಟ್ಟಿಸದೆ ಇರದು. ವಿಚಿತ್ರ ಕುತೂಹಲಕ್ಕೆ ಬಿದ್ದೆ ಈ ಪುಸ್ತಕ ಕೊಂಡೆ. ಆದರೆ ಇಲ್ಲಿ ಯಾವುದೇ ಕುತೂಹಲ ಕೇರಳಿಸುವ ಅಂಶಗಳಾಗಲಿ ಅಥವಾ ಕುರ್ಚಿಯ ತುದಿಗೆ ಕೂತು ಕ್ಷಣಕ್ಷಣಕ್ಕೂ ಜಾರುತ್ತ ಪುಸ್ತಕದೊಳಗಿಳಿಯುವ ಪುಸ್ತಕವೆನ್ನಲ್ಲ.

ಇದಾರೆಚೆಗೂ ಇದು ನನಗೆ ಹಲವು ಕಾರಣಗಳಿಂದ ಮುಖ್ಯವಾಗುತ್ತದೆ. ವಿಜ್ಞಾನವೆಂದರೆ ಸಾಕು ಯಂತ್ರಗಳೆಂದು ತಿಳಿದುಕೊಂಡಿದ್ದೆವೆ . ಒಂದರ್ಥದಲ್ಲಿ ಮನುಷ್ಯನಿಗೆ ಆರಾಮಾಗಿಡುವ ವಸ್ತುಗಳನ್ನೆಲ್ಲವನ್ನು ವಿಜ್ಞಾನದವಿಷ್ಕಾರಗಳೆಂದು ಉನ್ನತವಾದ ಸ್ಥಾನ ಕೊಟ್ಟಿದ್ದೆವೆ. ನಮ್ಮ ಕಾಡು, ಸುತ್ತಲಿನ ಗಾಳಿ, ನೀರಿನ ಬಗ್ಗೆ ಯೋಚಿಸುವುದೆ ಇಲ್ಲ. ಇಲ್ಲಿ ಕೆಂಜಗೆ ಆ ಕೆಲಸ ಮಾಡಿದ್ದಾರೆ.

ಜಾರ್ಜ್ ಎನ್ನುವ ವ್ಯಕ್ತಿಯೊಬ್ಬನ ಮೇಲೆ ಕತ್ಲೇಕಾನಿನಲ್ಲಿ ಹೆಬ್ಬಾವೊಂದು ಅಟ್ಯಾಕ್ ಮಾಡಿದೆ ಎನ್ನುವ ಸಂಗತಿಯನ್ನು ಶೋಧಿಸಲು ಹೋಗುವುದೆ ನಿರೂಪಕನ ಕೆಲಸ. ಭಾರತದಲ್ಲಿಯೆ ಇಲ್ಲಿವರೆಗೂ ಹೆಬ್ಬಾವೊಂದು ಮನುಷ್ಯನ ಮೇಲೆ ಎರಗಿದ ವರದಿಗಳಿರಲಿಲ್ಲ. "ಉಳಿದವರು ಕಂಡಂತೆ" ಎನ್ನುವ ದೃಷ್ಟಿಯಲ್ಲಿ ಕಥನ ಸಾಗುತ್ತದೆ. ಜಾರ್ಜನ ಮೇಲೆ ಹೆಬ್ಬಾವೊಂದು ಎರಗಿದ್ದ ಸಂಗತಿ ಕುರಿತು  ಉಳಿದವರು ಕಾಣುವ ರೀತಿ ಮತ್ತು  ಈ ಘಟನೆ ಕುರಿತು ಅವರ ವ್ಯಾಖ್ಯಾನಗಳೆ ಈ ಕಾದಂಬರಿಯಾಗಿದೆ.

ಕೆಲವರಿಗೆ ಇದು ಕಟ್ಟು ಕಥೆ ಎನಿಸಿದರೆ , ಯಾರೋ ಒಬ್ಬ ಅದು ನಿಧಿ ಕಾಯಲು ಕುತ್ತಿತ್ತು ಇವ ಅಲ್ಲಿ ಹೋಗಿದ್ದಾಗ ಹೆಬ್ಬಾವು ಎರಗಿತು ಅಂತ ಹೇಳಿದ. ಜಾರ್ಜ್ನ ಹೆಂಡತಿ ಮಾತು ಮರೆತು ಅತ್ತಳಷ್ಟೆ. ಕೆಲವರಿಗಂತೂ ಅದರ ಬಗ್ಗೆ ಮಾತಾಡಿದರೆ ನಮ್ಮ ಮೇಲೆರಗುತ್ತದೆ ಏನೋ ಎನ್ನುವ ಭಯ. ನಿರೂಪಕನು ಕತ್ತಲಲ್ಲಿ ಬಾತರೂಮಗೆ ಹೋದಾಗ ಅಲ್ಲಿ ಇಳಿಬಿಟ್ಟ ರಬ್ಬರ್ ಪೈಪನ್ನು ಸಹ ಹೆಬ್ಬಾವೆಂದು ತಿಳಿದು ಅದರ ಕುತ್ತಿಗೆ ಭಾಗವೆಂದು ಯಾವುದೋ ನಿರ್ಧರಿಸಿಕೊಂಡು ಅದನ್ನು ಜೋರಾಗಿ ಒತ್ತುತಾನೆ. ಭಯ, ಸಂಶಯ, ಗಾಳಿಸುದ್ಧಿಗಳೆಲ್ಲ ಸೇರಿ ಸತ್ಯ ಅಸತ್ಯತೆಯೆ ಮರೆತು ಹೋಗುತ್ತದೆ.

ತೇಜಸ್ವಿಯವರ ಆಪ್ತ ಒಡನಾಟದಲ್ಲಿದ್ದ ಕೆಂಜಗೆ ಅವರಿಗೆ ಅವರ ಪ್ರಭಾವ ಬಿಡಿಸಿಕೊಳ್ಳಲಾಗಿಲ್ಲವೆಂಬಂಶ ನಾವು ಇಲ್ಲಿ ಸಹ ನೋಡಬಹುದು. ಕೆಲವು ಸಾಲುಗಳು ಸಹಜವಾಗಿ ನಗು ಉಕ್ಕಿಸುತ್ತವೆ.
"ನಿನ್ನ ಕಾರಿನ ಹಾರ್ನ್ ಬಿಟ್ಟರೆ ಬೇರೆ ಎಲ್ಲಾ ಪಾರ್ಟುಗಳು ಶಬ್ಧ ಮಾಡುತ್ತವೆ. ಇದರಲ್ಲಿ ಅಷ್ಟು ದೂರ ಹೋಗೋದ ?...

ಒಟ್ಟಾರೆ ಕಾದಂಬರಿ ಹಲವು ಸಂಗತಿಗಳು ಒಳಗೊಂಡು ಟಿಸಿಲೊಡಿದಿದೆ. ಪ್ರಚರದ ಗೀಳಿಗೆ ಬಿದ್ದು ಪ್ರದರ್ಶನದ ಪರಿಸರದ ಹೋರಾಟ, ಮಲೆನಾಡಿನ ಹಸಿರು ಬರಿದಾಗುತ್ತಿರುವ ಬಗ್ಗೆ , ಕೃಷಿ ಭೂಮಿಗೆ ಭಾರ ಹಾಕಿ ಹೆಚ್ಚು ಫಸಲು ತೆಗೆಯುವ ಬಗ್ಗೆ,  ಆಧುನಿಕಯ ಭರಾಟೆಯಲ್ಲಿ ಮನುಷ್ಯನ ಸಂಬಂಧಗಳು ತೆಳುವಾಗುತ್ತಿರುವುದರ ಹಾದಿಗಳು ಇತ್ಯಾದಿ.

ಇದರ ಮಧ್ಯೆ  ಒಂದು ಸಂಗತಿ ಬರುತ್ತೆ. - "ಪರಸ್ಪರ ಬೇರೆಯಾಗಿರುವ ಗಂಡುಹೆಣ್ಣು ಕತ್ಲೆಖಾನೆನ್ಸಿಸ್ ಮರಗಳ ನಡುವೆ ಪರಾಗಸ್ಪರ್ಶ ಮಾಡಬಲ್ಲ ಏಕ ಮಾತ್ರ ಜೀವಿಗಳಾದ ಮಲಬಾರಿಕಾ ಚಿಟ್ಟೆಗಳ ಕುರಿತು ಮಾತುಗಳು ಇಂಟರೆಸ್ಟಿಂಗ್ ಅನಿಸುತ್ತವೆ.

ಇದೊಂದು ರೀತಿಯಲ್ಲಿ ಕಾಡುಹರಟೆ ಇದ್ದ ಹಾಗಿದೆ ಆದರೂ ಚಿಂತನೆಯಿದೆ. ಹೊಸ ವಿಚಾರಗಳಿವೆ.  ತುಂಡು ಮೋಡಗಳೆಲ್ಲ ಅಲಲ್ಲಿ ಮಳೆ ಸುರಿಸಿದಂತೆ.

"ಪ್ರಕೃತಿಯ ಜೊತೆ ದೈಹಿಕ ಗುದ್ದಾಟಕ್ಕೆ ಸಾಕಷ್ಟು ಹತ್ಯಾರುಗಳಿವೆ. ಅದನ್ನು ಮನುಷ್ಯ ಇನ್ನಷ್ಟು ಮತ್ತಷ್ಟು ಬೆಳೆಸುತ್ತಲೂ ಇದ್ದಾನೆ. ಆದರೆ ಪ್ರಕೃತಿಯ ಗೂಢವನ್ನು ಭೇಧಿಸಬೇಕಾದ್ದು ಮನುಷ್ಯ ತನ್ನ ಮನಸ್ಸಿನ ಶಕ್ತಿಯಲ್ಲಿ "- ಎಸ್ ಆರ್ ವಿಜಯಶಂಕರ ಅವರ ಈ ಮಾತು ಕಾಡುತ್ತದೆ. ಒಂದು ರೀತಿಯಲ್ಲಿ ಈ ಕಾದಂಬರಿ ನೋಡುವ ಕಣ್ಣುಗಳಿಗೆ ದುರ್ಬಿನ ಇದ್ದ ಹಾಗಿದೆ...

ಈಷಿಯ ಕಥೆ :-  ಇದೆ ಪುಸ್ತಕದಲ್ಲಿರುವ ಒಂದು ಕಥೆ ಇದು. ರೆಡ್ ಇಂಡಿಯನ್  ಒಬ್ಬ ಕಾಡು ತಪ್ಪಿ ನಾಡು ತಲುಪಿ ವಾಷಿಂಗ್ಟನ್ ಮ್ಯೂಸಿಯಂನಲ್ಲಿಡ್ಪಟ್ಟಿದ್ದು. ನಾಗರಿಕ ಸಮಾಜದ ದಾಳಿಗೆ ತುತ್ತಾಗಿ ಕಾಡಲ್ಲಿ ಅಲೆದು ಅದು ಹೇಗೊ ನಗರದ ಮಧ್ಯೆ ಬೆತ್ತಲೆಯಾಗಿ ಕೈಯಲ್ಲಿ ಗನ್ ಹಿಡಿದು ನಿಂತವನು. ಕಾಲಾಂತರದಲ್ಲಿ ಅವ ಇಂಗ್ಲಿಷ್ ಕಲಿತು. ಮನುಷ್ಯನಿಗೆ ಆರಾಮಾಗಿಡುವ ಎಲ್ಲಾ ತಂತ್ರಜ್ಞಾನಗಳ ಬಗ್ಗೆ  ಅತೀ ಪ್ರೀತಿ ಹೊಂದಿ ಅಮೇರಿಕಾದಲ್ಲಿಯೆ ಉಳಿಯುವ ಕಥೆ. ಈ ಹಿಂದೆ ಪಲಾಯನವೆ ಅವನ ಕೆಲಸವಾಗಿತ್ತು. ಕಾಡಿನಲ್ಲಿಯೆ ದೊಡ್ಡವನಾದವನು. ಈ ಕಥೆ ಬಹಳ ಸಂಕೀರ್ಣವಾಗಿದ್ದು ಬೇರೆ ಬೇರೆ ಅರ್ಥಸಾಧ್ಯತೆಗಳು ಹುಟ್ಟಿಸುತ್ತದೆ. ತನ್ನವರಿಂದ ದೂರ ಮಾಡಿದ ನಾಗರಿಕ ಮನುಷ್ಯರ ಮಧ್ಯೆಯೆ ಕೊನೆ ಉಸಿರೆಳೆದವನ ಕಥೆ.

# ಕಪಿಲ ಪಿ ಹುಮನಾಬಾದೆ.
26/9/2017

No comments:

Post a Comment