Thursday 14 September 2017

ಹುಲಿಯೂರಿನ ಸರಹದ್ದುವಿನ ಸೋಮು...

– ಕಪಿಲ ಪಿ ಹುಮನಾಬಾದೆ

ವರ್ತಮಾನದ ಯಾವುದೇ ವಿಷಯಗಳಿರಲಿ ತೇಜಸ್ವಿ ಎಲ್ಲಾದರೊಂದು ಕಡೆ ತಳಕು ಹಾಕಿಕೊಂಡಿರುತ್ತಾರೆ. ಮಂತ್ರ ಮಾಂಗಲ್ಯ, ಸರಳ ವಿವಾಹ, ಅಂತರಜಾತಿ ವಿವಾಹ  ಮುಂತಾದ  ಮಾತುಗಳು ಈ ಹೊತ್ತಿಗೆ ಅಲ್ಲಲ್ಲಿ ಕೇಳಿ  ಬರುತ್ತಿರುವಾಗ ಸೋಮು ನನಗೆ ಮುಖ್ಯವಾಗಿ ಕಾಣುತ್ತಾನೆ.

ಸೋಮು ಗೌಡರ ಮಗ. ಯಾವುದೋ  ಸಂಪ್ರದಾಯಸ್ಥ ಹುಡುಗಿಗೆ ಕೊಟ್ಟು ಮದುವೆ ಮಾಡಬೇಕೆನ್ನುವ ಇರಾದೆ ಅವನ ತಂದೆ ತಾಯಿಗಿರುತ್ತದೆ ಆದರೆ ಈತ ಬ್ರಾಹ್ಮಣ ಹುಡುಗಿ  ನಳಿನಾಕ್ಷಿಯನ್ನು ಪ್ರೀತಿಸುತ್ತಿರುತ್ತಾನೆ ಈ ತಳಹದಿಯಲ್ಲಿಯೆ ಸೋಮುವಿನ ತವಕ ತಲ್ಲಣಗಳು ಕೆಲವು  ಸಂಕೇತಗಳ ಮೂಲಕ ವಿವರಿಸಿದ್ದಾರೆ.

ಹುಲಿಯೂರಿನ ಸರಹದ್ದು ಎಂದರೆ ಗೌಡರಿಗೊಂದು ಧೈರ್ಯ ಮತ್ತು  ಅಧಿಕಾರ ತಮ್ಮೂರು ಯಾರ ತನ್ನ ಮಾತು ಮೀರಲಾರರೆಂದು. ಅವರ ಮಗ ಸೋಮುವಿಗೆ ಮಾತ್ರ  ಉಸಿರುಗಟ್ಟಿಸುವ ಈ ಸರಹದ್ದಿನೊಳಗೆ ಸ್ವಾತಂತ್ರದ ಗಾಳಿ ನುಗ್ಗಿಸುವ ತವಕ.

” ಅಯ್ಯೋ,  ಈ ಹುಲಿಯೂರಿನ ಸರಹದ್ದಿನಲ್ಲಿ ಒಂದು ಇನ್ನೊಂದುಕ್ಕಾಗಿ ಬದುಕಿದೆ. ಗಾಳಿ ಕೂಡಾ ಈ ಕಾಡಿನ ಮಂಗನಬಳ್ಳಿ ಗಿಜರಿನಲ್ಲಿ ಕೈಗೆ ಬೇಡಿ ಹಾಕಿಸಿಕೊಂಡ ಖೈದಿ. ನಾನು ಈ ಅಪ್ಪನಿಗಾಗಿ ಬದುಕುತ್ತಿದ್ದೇನೆ, ಅವನು ಅವನಜ್ಜನಿಗಾಗಿ, ನನ್ನ  ಮಗ ನನಗಾಗಿ”…- ಸೋಮು ಇಲ್ಲಿ ಕುರಿಯಂತೆ ತಲೆ ಅಲ್ಲಾಡಿಸುವ ಪರಂಪರೆಯನ್ನು ಮುರಿಯಬೇಕೆನ್ನುತ್ತಿದ್ದಾನೆ. “ಈ ಅಪ್ಪ ಅಮ್ಮರ ಕುತ್ತಿಗೆಗೆ ಕೊಕ್ಕಿನಿಂದ ಇರಿದು ಬಾಂದಳದ ಬಿತ್ತರಕ್ಕೆ ನೆಗೆದುಬಿಡಬೇಕು” – ಸೋಮು ತಾನೊಂದು ಗರುಡನಾಗಬೇಕೆಂದು ಊಹಿಸಿ ಅದರಷ್ಟೇ ಶಕ್ತಿಶಾಲಿ ಮತ್ತು  ಎಲ್ಲದರ ಮೇಲೆ ತನ್ನ ರೆಕ್ಕೆಯ ಭಯದ ನೆರಳು ಸುರಿಯಬೇಕೆಂದಿದಾನೆ. ಆಕಾಶದಲ್ಲಿ ಹಾರುತ್ತಿದ್ದ ಗರುಡ  ಅದು ಹೇಗೊ ಕೆಳಗೆ ಬಂದು ಸೋಮುವಿನ ಕೈಯಲ್ಲಿ ಸಿಕ್ಕಿಬೀಳುತ್ತದೆ ಅದರ ಯಮಯಾತನೆ ತಾಳಲಾರದೆ ತನ್ನ  ಬಾಯಿಂದ ಆ ಗರುಡದ ರುಂಡದ ರಕ್ತ ಕುಡಿದು ಸಾಯಿಸುತ್ತಾನೆ ಅವನ ತಂದೆ ಇನ್ನೂ ಮೇಲೆ ನೀ ಹಾಳಾಗು ನಮ್ಮ  ಜಾತಿ ಭ್ರಷ್ಟ ಮಾಡಿದೆಯಂದು ಹೇಳುತ್ತಾನೆ. ಇಲ್ಲಿ ನಾವು ಮುಖ್ಯವಾಗಿ ಯೋಚಿಸಬೇಕಾಗಿರುವುದು ” ಸೋಮುವಿಗೆ ಹೇಗಾದರೂ ಹೋಗಿ ಬದುಕು ಎನ್ನುವಾಗಲು, ಮೌಢ್ಯದ  ಆಧಾರವನ್ನೆ ಮುಂದಿಟ್ಟುಕೊಂಡ ತಂದೆಯ ವಿರುದ್ಧ ಸೋಮು ಸಿಡಿದೆಳುತ್ತಾನೆ. ನನ್ನ ಮೇಲೆ ನಳಿನಾಕ್ಷಿಗೆ ಅಷ್ಟು ಪ್ರೇಮವಿದ್ದರೆ ನನ್ನ ಜೊತೆ ಬರಲಿ ಎಂದು ಹೇಳುತ್ತಾನೆ.

ಈ ಕಥೆ ಅವಲೋಕಿಸಿದಾಗ ತೇಜಸ್ವಿಯವರು ಹೇಳುತ್ತಿರುವುದೇನು ? ಸೋಮು ಹುಲಿಯೂರಿನ ಸರಹದ್ದು ಮುರಿದನೆ ? ಅಥವಾ ಅದೊಂದು ಪಲಾಯನವೆ. ಸ್ವತಹ ತೇಜಸ್ವಿ ನಿಜ ಬದುಕಿನಲ್ಲಿ ಪ್ರೇಮ ವಿವಾಹವಾದವರು.  ಈ ಕಥೆ ಪ್ರೇಮಿಗಳು ಎದುರಿಸಬೇಕಾಗುವ ಕೆಲವು ಅನಿಷ್ಟ  ಪರಂಪರೆಯ ಮೀರುವಿಕೆ ಮತ್ತು  ಆರ್ಥಿಕ ಸ್ವಾತಂತ್ರದ ಬದುಕಿನ ನಡುವಿನ ಸೂಕ್ಷ್ಮ ನೋಟದ ಗೆರೆಯಾಗಿದೆ. ತನ್ನವರನೆಲ್ಲ ಬಿಟ್ಟು ಬರಲಿ ನನ್ನ ಮೇಲೆ ನಳಿನಾಕ್ಷಿಗೆ ಪ್ರೇಮವಿದ್ದರೆ ? ಇಲ್ಲಿ  ಸೋಮುವಿನ ನಂಬಿಕೆ ಮತ್ತು  ಅಗಾಧವಾದ ಪ್ರೇಮವಿದೆ ಜೊತೆಗೆ ಅವಳು ಬರದಿದ್ದರೂ ಪರವಾಗಿಲ್ಲ  ಈ ಹುಲಿಯೂರಿನ ಕೊಚ್ಚೆಯಿಂದ ಜಿಗಿಯುವ ಇರಾದೆ ಇದೆ. ಅಂತರಜಾತಿ ವಿವಾಹಕ್ಕೆಂದು ತಯಾರಾದವರ ಸಿಟ್ಟು ಸೆಡವು,ಏಕಾಂಗಿತನ, ಹೊಂಬು ಧೈರ್ಯ,  ನಂಬಿಕೆ, ಅಗಾಧ ಪ್ರೀತಿ  ಎಲ್ಲವೂ ಈ ಕ
ತೆಯಲ್ಲಿದೆ…

No comments:

Post a Comment