The outsider
ಜೈಲಲ್ಲಿ ಅತ್ತಿಂದಿತ್ತ ತಿರುಗಾಡುತ್ತಿದ. ಗೋಡೆಗಳು ಸಹ ಭಯ ಹುಟ್ಟಿಸುತ್ತಿದ್ದವು. ಅವನ ನಿರ್ಲಿಪ್ತ ಮುಖಭಾವ ಮೊದಲ ಬಾರಿಗೆ ಭಯ ಹೊಡೆದು ತೋರಿಸುತ್ತಿದೆಯಂದು ಅವನೆ ಭಾವಿಸಿದ. ಪಶ್ಚಾತ್ತಾಪ ಮಾತ್ರ ಇಲ್ಲ. ನಾಳೆಯೆ ಗಿಲೊಟಿನ್ ಯಂತ್ರದಲ್ಲಿ ಅವನ ತಲೆ ಕತ್ತರಿಸುವವರಿದ್ದಾರೆ. ಇದು ಮರಣದಂಡನೆಯ ಶಿಕ್ಷೆ. ಈ ಗಿಲೊಟಿನ್ ಯಂತ್ರ ಪಠ್ಯಪುಸ್ತಕಗಳಲ್ಲಿ ನೋಡಿ, ಅದರ ನಯಗಾರಿಕೆಗೆಯ ಆಕಾರಕ್ಕೆ ಮೆಚ್ಚಿದಾನೆ. ತಾನು ಒಂದು ದಿನ ನೋಡಬೇಕೆಂದು ಆಸೆ ಪಟ್ಟಿದನು . ಪ್ರ್ಯಾನ್ಸ್ ಕ್ರಾಂತಿಯ ಸಂದರ್ಭದಲ್ಲಿ ದಂಗೆಕೋರರಿಗೆ ಸಾಯಿಸಲು ಈ ಯಂತ್ರ ಬಳಸುತ್ತಿದ್ದರೂ. ದೂರದೃಷ್ಟವಶಾತ ಕೊನೆಗೆ ಒಂದು ದಿನ ಈ ಯಂತ್ರ ಕಂಡು ಹಿಡಿದ ಗಿಲೊಟಿನಗೂ ಸಹ ಈ ಯಂತ್ರಕ್ಕೆ ತಲೆ ಕತ್ತರಿಸಿ ಸಾಯಿಸುತ್ತಾರೆ. ಅವನದೆ ಹೆಸರು ಈ ಯಂತ್ರಕ್ಕಿಟ್ಟಿದ್ದಾರೆ. ಒಂದು ದಿನ ಅವರಪ್ಪ ಯಾರೋ ಕೈದಿಯೊಬ್ಬನನ್ನು ಗಿಲೊಟಿನ್ ಯಂತ್ರಕ್ಕೆ ತಲೆ ಕೊಡುವುದನ್ನು ಮತ್ತು ಸುತ್ತಲು ಸೇರಿದ ಜನ ಅವಾಚ್ಯವಾಗಿ ಬೈಯವುದನ್ನು ಕಂಡು ಮನೆಗೆ ಬಂದು ವಾಂತಿ ಮಾಡಿಕೊಂಡಿದ್ದ.
ಇಗ ಆ ಗಿಲೊಟಿನ್ ಯಂತ್ರಕ್ಕೆ ಜೈಲಲ್ಲಿನ ಕೈದಿ ನಾಳೆಯೆ ತಲೆ ಕೊಡುವನಿದ್ದಾನೆ. ಒಂದು ವೇಳೆ ಬೇರೆಯವರಾಗಿದ್ದರೆ ದೂರದಿಂದಲೆ ನೋಡಿ ಹೋಗುತ್ತಿದ್ದನೇನೊ ಇಗ ಆ ಸ್ಥಾನದಲ್ಲಿ ಅವನಿದ್ದಾನೆ. ಪಾದ್ರಿ ಬಂದು ದೇವರ ಹತ್ತಿರ ಕ್ಷೇಮೆ ಕೇಳು ಎಂದು ಹೇಳುತ್ತಾನೆ. ಇವ ಮಾತ್ರ ನಿರ್ವಿಕಾರವಾಗಿ ಯಾವ ಪ್ರತಿಕ್ರಿಯೆ ಸಹ ಸೂಚಿಸುವುದಿಲ್ಲ ಪಾದ್ರಿ ಹೋರಟು ಹೋಗುತ್ತಾನೆ.
ಹಿಂದೆ ಒಂದು ಸಾರಿ,
ಅವನ ಮುದಿ ತಾಯಿ ಸತ್ತಾಗ ಕಣ್ಣೀರು ಸಹ ಹಾಕಿರಲಿಲ್ಲ. ಶವದ ಪೆಟ್ಟಿಗೆಯದುರು ಕೂತು ಸಿಗರೇಟ್ ಸೇದುತ್ತಾನೆ. ಕೊನೆಯ ಬಾರಿ ಅವನ ತಾಯಿ ಮುಖ ನೋಡಲು ಸಹ ಅವನು ಉತ್ಸುಕನಾಗಿರುವುದಿಲ್ಲ.
ಮರುದಿನ ನಗರಕ್ಕೆ ಬಂದು ತನ್ನ ಪ್ರೇಯಸಿ ಮಾರೀಯ ಜೊತೆ ಒಂದು ಹಾಸ್ಯ ಚಿತ್ರಕ್ಕೆ ಹೋಗುತ್ತಾನೆ, ಕಡಲಲ್ಲಿ ಈಜುತ್ತಾನೆ.
ಇಗ ಕೆಲವು ದಿನದ ಹಿಂದೆ,
ಅವನ ಗೆಳೆಯನ ಶತ್ರುಗಳು ಅಚಾನಕಗಾಗಿ ಇವನ ಮೇಲೆ ಆಕ್ರಮಣ ಮಾಡುತ್ತಾರೆ. ಯಾವ ನಿರ್ವಾಹವಿಲ್ಲದೆ ಎದುರು ವ್ಯಕ್ತಿಗೆ ಗುಂಡು ಹೊಡೆದು ಸಾಯಿಸುತ್ತಾನೆ. ಮುಂದೆ ಕೋರ್ಟ್ ಮೆಟ್ಟಿಲೆರಿದ ಈ ಕೊಲೆ ಕೇಸು. ಇದೊಂದು ಆಕಸ್ಮಿಕ ಘಟನೆ ಎಂದು ಅವನೆಷ್ಟು ಹೇಳಿದರು ಕೇಳುವುದಿಲ್ಲ. ಕೋರ್ಟಲ್ಲಿ ಸಾಕ್ಷಿ ನೀಡಲು ಇವನ ತಾಯಿ ಇದ್ದ ವೃದ್ಧಾಶ್ರಮದ ನಾಲ್ಕೈದು ಜನ ಬರುತ್ತಾರೆ. ಬಂದು, ಇವನೆಷ್ಟು ಕ್ರೂರಿಯಂದರೆ ತಾಯಿ ಸತ್ತಾಗಲೂ ಅಳಲಿಲ್ಲ. ಮತ್ತೆ ಅವಳ ಕೊನೆಯ ಮುಖದರ್ಶನಕ್ಕೂ ಉತ್ಸಾಹ ತೋರಿಸಲಾರದ ವಿಕೃತ ಮನುಷ್ಯನೆಂದು ಹೇಳುತ್ತಾರೆ.
ಇವನು ಈ ಕೊಲೆಗೂ ನನ್ನ ತಾಯಿ ಸತ್ತದಕ್ಕೂ ಯಾವ ಸಂಬಂಧಗಳು ಇಲ್ಲವೆಂದು ಹೇಳುತ್ತಾನೆ. ಕೊನೆಗೆ ನ್ಯಾಯಲಯ ಮರಣದಂಡನೆ ಶಿಕ್ಷೆ ನೀಡುತ್ತದೆ. ಆ ಗಿಲೊಟಿನ ಯಂತ್ರಕ್ಕೆ ನಾಳೆ ತಲೆಕೊಡಬೇಕಾದವನು ಈ ಕಾದಂಬರಿಯ ನಿರೂಪಕ !
ಆಲ್ಬರ್ಟ್ ಕ್ಯಾಮ್ಯುನ The outsider ಕೃತಿಯ ಕಥೆ ಇದು. ಕನ್ನಡದಲ್ಲಿ " ಅನ್ಯ "ವೆಂದು ಅನುವಾದವಾಗಿದೆ. Outsider ಪದವೇ ಸೂಚಿಸುವಂತೆ ಸದಾ ಮನುಷ್ಯ ಇನ್ನೊಬ್ಬರ ಚಲನವಲನಗಳ ಮೇಲೆ ಅವರ ವ್ಯಕ್ತಿತ್ವ ಅಳೆಯುತ್ತಿರುತ್ತಾರೆ. ಆದರೆ ಅವ ತನ್ನೊಳಗೆ ಅನುಭವಿಸುತ್ತಿರುವೆ ವೇದನೆ ಯಾರು ನೋಡುವುದೆಯಿಲ್ಲ. ತಾಯಿ ಸತ್ತಾಗ ಚೀರಾಡಿ ಅಳಬೇಕಂತಲ್ಲ. ಯಾವುದೋ ಹಾಸ್ಯ ಚಿತ್ರಕ್ಕೆ ಹೋಗಿದ್ದ ಎಂಬ ಮಾತ್ರಕ್ಕೆ ಅವ ಅಲ್ಲಿ ನಕ್ಕಿರಬಹುದೆ ? ಈ ಪ್ರಶ್ನೆ ಯಾರು ಕೇಳಿಕೊಳ್ಳುವುದೆಯಿಲ್ಲ.
ಈ ಕಾದಂಬರಿಯ ನಾಯಕ ಇನ್ನೊಬ್ಬರು ಗಿಲೊಟಿನಗೆ ತಲೆ ಕೊಡುವುದು ನೋಡಲು ಉತ್ಸುಕನಾಗಿದ್ದಾನೆ ಆದರೆ ತನ್ನ ತಲೆ ಕೊಡುವ ಸಂದರ್ಭ ಬಂದರೆ ಯೋಚನಾ ಲಹರಿಯ ಬದಲಾಗುತ್ತದೆ.
Outsider ಹೆಸರೆ ಸೂಚಿಸುವಂತೆ . ಮನುಷ್ಯ ಸದಾ ಇನ್ನೊಬ್ಬರನ್ನು ಮೇಲಮೈಯಲ್ಲಿಯೆ ಅಳೆಯುತ್ತಾನೆ.
# ಕಪಿಲ ಪಿ ಹುಮನಾಬಾದೆ.
No comments:
Post a Comment