Tuesday 29 August 2017

ತುಟಿ ಚಿವುಟಿದ ಸಾಲುಗಳು- 2.

ತೇಜಸ್ವಿಯವರ ಬಹುತೇಕ ಪುಸ್ತಕಗಳು ಓದಿದರೂ ಪ್ಯಾಪಿಲಾನ್ ಓದಲು ತುಂಬಾ ವಿಳಂಬಸಿದೆ. ತೇಜಸ್ವಿ ಕಸ ಎಸೆದರು ಕೈಗೆತ್ತಿ ಓದುವ ಆಸೆ.  ಪುಸ್ತಕ ತಂದು ಒಂದು ವರ್ಷವೆ ಕಳೆಯುತ್ತ ಬಂದಿತ್ತು. ಎರಡು ಮೂರು ಸರತಿ ಓದಲು ಸಹ ಪ್ರಯತ್ನಿಸಿ ಬಿಟ್ಟೆ. ಯಾಕೋ ಆ ಸಂದರ್ಭದಲ್ಲಿ ಗೊಂದಲವೆನಿಸಿತು. ಇಗ ಯೋಚಿಸಿಕೊಂಡರೆ ನಗು ಬರುತ್ತದೆ.  ಎಂತಹ ಪುಸ್ತಕ ಓದುವುದು ತಪ್ಪಿಸಿಕೊಳ್ಳುತ್ತಿದ್ದೆಯಲ್ಲ !.
ಇದೆಲ್ಲ ಯಾಕೆ ಹೇಳುತ್ತಿದ್ದೆನೆಂದರೆ ಮನುಷ್ಯನ ಮನಸ್ಸಿನ ಬಗ್ಗೆಯೆ ವಿಚಿತ್ರವೆನಿಸುತ್ತದೆ. ಇದು ಚಂಚಲತೆಯಂತೂ ಅಲ್ಲ. ಅನಂತಮೂರ್ತಿಯವರು ಸಹ ಅವಧೇಶ್ವರಿ ಕೃತಿಯನ್ನು ಹೀಗೆ ಮೊದ ಮೊದಲು ಬಿಟ್ಟು  ಆಮೇಲೆ ಓದಿ ತುಂಬಾ ಖುಷಿ ಪಟ್ಟರೂ. ನಾವು ಯಾವುದೋ ಸಂದರ್ಭದಲ್ಲಿ ಇದು ಮುಖ್ಯವಾದದ್ದಲ್ಲವೆಂದು ಕೈಬಿಟ್ಟ ಪುಸ್ತಕಗಳು ಮತ್ತೆಂದೊ ಅಂದು ನಿರಾಕರಿಸಿದಕ್ಕೆ ಇಂದು ಸಿಗದೆ ಪೀಡಿಸುತ್ತವೆ. ಜಂಬಣ್ಣ ಅಮರಚಿಂತ  ಅವರ ಬೂಟುಗಾಲಿನ ಸದ್ದು ಪುಸ್ತಕ ಸುಮಾರು ಹತ್ತೈದು ಜನರಿಗೆ ಮಾರಾಟ ಮಾಡಿದ್ದೆ ಕೊನೆಗೆ ಅದರ ಮುಖ್ಯತೆ ಗೊತ್ತಾಗಿ ಪಲ್ಲವ ವೆಂಕಟೇಶಗೆ ಅವರಿಗೆ ಸಂಪರ್ಕಿಸಿದರೆ ಒಂದು ಪ್ರತಿಯೂ ಇಲ್ಲ. ಕೊನೆಗೆ ಹೊಸಪೇಟೆಗೆ ಹೋದಾಗ ಅವರ ಮನೆ ತುಂಬಾ ತಲಾಸ್ ಮಾಡಿದರೂ ಸಿಗಲಿಲ್ಲ. " ಪುಸ್ತಕ ಒಂದು ರೀತಿಯಲ್ಲಿ ಬೇಟೆ ತರಹ ಒಂದು ಸಾರಿ ಕೈ ಬಿಟ್ಟರೆ ಮತ್ತೆ ಸಿಗಲಾರದು"- ಆರ್ ಕೆ ಹುಡುಗಿಯವರು ಒಂದು ಭಾಷಣದಲ್ಲಿ ಹೇಳಿದ ಮಾತು ನೆನಪಾಗುತ್ತಿದೆ.
_________________________

"ಪ್ರೀಯ ಓದುಗರೆ , ಭೂಗತ ಜನರಿಗೂ ಕಾಡಿನ ಮೃಗಗಳಿಗೂ ಸಾಮಾನ್ಯವಾದ ಕೆಲವು ಗುಣಗಳಿವೆ. ಅಪಾಯ ಎದುರಾದಾಗ ಪಕ್ಕನೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹಾಗೂ ಆತ್ಮೀಯರಿಗೆ ತೊಂದರೆಯಾದಾಗ ಜೀವಭಯವನ್ನೂ ಲೆಕ್ಕಿಸದೆ ಅವರ ನೆರವಿಗೆ ಧಾವಿಸುವುದು, ಎರಡೂ ಜೀವಗಳಲ್ಲಿ ಕಂಡುಬರುವ ದೊಡ್ಡತನಗಳು"
____________

"ಬುಡಕಟ್ಟಿನ ಹುಡುಗಿ ಪ್ರೇಮವನ್ನು ಇಷ್ಟೊಂದು ನಿರಾತಂಕವಾಗಿ ಪ್ರಕಟಿಸುವುದು ಕಂಡು ಕಸಿವಿಸಿಯಾಯಿತು. ಈ ಪ್ರಕೃತಿ ಶಿಶುಗಳ ನಡವಳಿಕೆಯೇ ಹಾಗೆ. ಭಾವನೆಗಳನ್ನು ಸಹಜವಾಗಿ ವ್ಯಕ್ತಪಡಿಸಿಬಿಡುತ್ತಿದ್ದರು. ಪ್ರೇಮ, ದ್ವೇಷ, ಸಿಟ್ಟು, ಸಹನೆ ಎಲ್ಲವನ್ನೂ ನೇರವಾಗಿ ಹೇಳಿಬಿಡುವುದು. ಮನದೊಳಗೇ ಇಟ್ಟುಕೊಂಡು ಕೊರಗುವ ಬಾಬತ್ತಿಲ್ಲ"

# ಪ್ಯಾಪಿಲಾನ್.
# ಕಪಿಲ ಪಿ ಹುಮನಾಬಾದೆ.
29/8/2017.

No comments:

Post a Comment