ಮಹಾಯುದ್ಧ - 1
ಮಹಾಯುಧ್ಧ -2
- ಕೆ ಪಿ ಪೂರ್ಣಚಂದ್ರ ತೇಜಸ್ವಿ .
ತೇಜಸ್ವಿಯವರ ಮಿಲನಿಯಮ್ ಸಿರಿಸಗಳು ನಿಜಕ್ಕೂ ವಿಶ್ವಮಾನವ ಸಂದೇಶದ ವಾಹಕಗಳು. ಹೃದಯದಿಂದ ಓದುವ ಓದುಗನಿಗೆ ಎದೆ ತಟ್ಟಿ ಒಳಗಣ್ಣು ದಿಟ್ಟಿಸುವಂತೆ ಮಾಡುತ್ತವೆ. ಅಲ್ಲಲ್ಲಿ ಯುದ್ಧದ ಬಗ್ಗೆ ಮಾತುಗಳು ಕೇಳುತ್ತಿರುವಾಗ ಯಾಕೋ ಅದರ ಬಗ್ಗೆ ಬರೆಯಬೇಕೆನಿಸಿತು. ಇಪ್ಪತ್ತೊಂದನೆ ಶತಮಾನಕ್ಕೆ ದಾಟುವ ಮುನ್ನವೆಂದು ತೇಜಸ್ವಿ ಬರೆಯುತ್ತ. ಇದರಿಂದ ನಾವು ಕಲಿಯಬೇಕಾಗಿರುವುದು ತುಂಬಾ ಇದೆಯಂದು ಹೇಳುತ್ತಾರೆ.
-: " ಎಷ್ಟೋ ಜನ ನನ್ನ ಮಿತ್ರರು ನಮ್ಮ ಸುತ್ತಲಿನ ಬಡತನ, ಜಾತೀಯತೆ, ಅನಕ್ಷರತೆ, ಭ್ರಷ್ಟಾಚಾರ, ಕೊಳಕು ಇದನ್ನೆಲ್ಲ ನೋಡಿ ರೋಸಿಹೋಗಿ ಪ್ರಜಾಪ್ರಭುತ್ವವನ್ನು ಬಯ್ದು ಇಲ್ಲಿ ಮಿಲಟರಿ ಆಳ್ವಿಕೆಯೋ, ಸರ್ವಾಧಿಕಾರಿ ಆಡಳಿತವೋ ಬಂದರೆ ಮಾತ್ರ ಎಲ್ಲ ಸರಿ ಹೋಗುತ್ತದೆಂದು ಕೋಪದಿಂದ ಬಿಸುಸುಯ್ಯುತ್ತಾರೆ. ಸಮಭಾಜಕ ವೃತ್ತದ ಅಡಿ ಇರುವ ನೂರಾರು ಹಿಂದುಳಿದ ರಾಷ್ಟ್ರಗಳಲ್ಲಿ ಇವರು ಹೇಳುವ ಎಲ್ಲ ರೀತಿಯ ಆಡಳಿತಗಳೂ ಇವೆ ಖಾಯಿಲೆಗಳು ಮಾತ್ರ ಒಂದೇ ! .
-: ನನಗೆ ನಿಜವಾಗಿಯೂ ನಮ್ಮ ಸ್ವಾತಂತ್ರ್ಯದ ಅಮೂಲ್ಯತೆಯ ಬಗ್ಗೆ ಅರಿವು ಅಭಿಮಾನ ಮೂಡುವುದು ಮಹಾಯುದ್ಧ ಮತ್ತು ಆನಂತರ ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ನಡೆದ ಕಡ್ಡಾಯ ಶ್ರಮಶಿಬಿರಗಳ ಕತೆಗಳನ್ನು ಕೇಳಿದಾಗ ಮತ್ತು ಓದಿದಾಗ.
ತೇಜಸ್ವಿಯವರ ಮೇಲಿನ ಎರಡು ಮಾತುಗಳು ತುಂಬಾ ಯೋಚಿಸುವಂತೆ ಮಾಡುತ್ತವೆ. ಈ ಪುಸ್ತಕಗಳಲ್ಲಿನ ಯುದ್ಧದ ಭೀಕರತೆ ಬಗ್ಗೆ ಬರೆಯಲಿಕ್ಕೂ ಮನಸಾಗುತ್ತಿಲ್ಲ. ಅದೊಂದು ರೀತಿಯ ಅಫೀಮು. " ಬರ್ಲಿನ್ ಮೇಲೆ ರಷ್ಯಾ ನುಗ್ಗಿದ್ದಾಗ , ಇಗಾಗಲೇ ಸಾವಿನಂಚಿಗಿದ್ದ ಹಿಟ್ಲರ್ ಮತ್ತೆ ಮರು ರಷ್ಯಾದ ಮೇಲೆ ದಾಳಿ ಮಾಡಬಹುದಾದ ಸಾಧ್ಯತೆ ವಿವರಿಸುವಾಗ ಇನ್ನೊಂದು ಸಾರಿ ಪ್ರಯತ್ನ ಮಾಡಬೇಕೆಂದೆನಿಸಿತು ಎಂದು ಜನರಲೊಬ್ಬ ಹೇಳುತ್ತಾನೆ. ಹಿಟ್ಲರಂತೂ ದೊಡ್ಡ ಮನುಷ್ಯ ರಾಕ್ಷಸ. ಅಣುಬಾಂಬಿನ ಹಾನಿಗಳು, ರಷ್ಯಾದ ಕಮ್ಯುನಿಷ್ಟರು ಬರ್ಬರವಾಗಿ ಕೊಂದ ಚಕ್ರವರ್ತಿಗಳ ಕಥೆ ಓದುವಾಗ, ಈ ಯುದ್ಧಗಳು ಸೀಮಿತ ಜನರ ಅಪೇಕ್ಷೆಗಳಾಗಿ ಸಾಮಾನ್ಯ ಜನರ ಮೇಲೆ ದೊಡ್ಡ ಪ್ರಭಾವ ಸದಾ ಬೀರುತ್ತವೆ. ಹಿರೊಶಿಮಾದ ಮೇಲೆ ಅಮೇರಿಕಾದ ಮೂರು ವಿಮಾನಗಳಿಂದ ಕೆಳಗಿಳಿಯುವ ಪ್ಯಾರೆಚೂಟ್ ನೋಡಿ ಅಲ್ಲಿನ ಜನ ವೈಮಾನಿಕ ತೊಂದರೆಯಿಂದ ಯಾವುದೋ ವ್ಯಕ್ತಿ ಕೆಳಗಿಳಿಯುತ್ತಿದ್ದಾನೆಂದು ಕೈಬೀಸಿದರು ಆದರೆ ಆ ಮಾನವರಹಿತ ಪ್ಯಾರಚೂಟನಲ್ಲಿ ಅಣುಬಾಂಬು ಸಿಡಿಯುವುದಕ್ಕೆ ಬರುತಿತ್ತು. !
ಯುದ್ಧವೆಂದರೆ ಲೆಕ್ಕವಿಲ್ಲದಷ್ಟು ನಾಟಕಗಳ ಅಥವಾ ಮುಖವಾಡಗಳ ರಂಗ...
ಜರ್ಮನ ಸೈನಿಕರು ಜ್ಯೂ ಮಕ್ಕಳನ್ನು ಸಿಕ್ಕಲ್ಲಿ ಕೊಲ್ಲುವುದರ ಹಿಂದಿದ್ದದ್ದು ಬರೀ ರಕ್ತಪಿಪಾಸೆ.
ವಿಚಿತ್ರಗಳು. ಊಹಿಸಲಾಗದಷ್ಟು ಕೀಳುಮಟ್ಟದ ಮೋಸಗಳು. ಇದರ ಮಧ್ಯೆ ಮಾನವೀಯತೆ ಮರೆದವರು, ನಾಯಿಗಳ ಚಾಣಕ್ಷತನದ ಕಥೆಗಳು ಇತ್ಯಾದಿ.
ಬುದ್ಧ ಮತ್ತು ಯುದ್ಧ ಹೀಗೆ ಏನೇನೋ ಚರ್ಚೆಯಾಗುತ್ತಿರುವಾಗ ತೀರಾ ಇದನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ. ಟೀ ಅಂಗಡಿಯಲ್ಲಿ ಟೀ ಕುಡಿಯುತ್ತ ಕುಳಿತಿದ್ದವರಿಗೆ ಪ್ಯಾರಚೂಟನಲ್ಲಿ ಅಣುಬಾಂಬವೊಂದು ಬರುತ್ತಿದೆಯಂದು ಗೊತ್ತೆ ಇರಲಿಲ್ಲ. ಆ ಬಾಂಬ್ ಬಿದ್ದ ಮೇಲೆ ಹಿರೂಶಿಮಾ ಅಲ್ಲಿ ಹುಟ್ಟೆ ಇಲ್ಲವೆಂಬಂತೆ ಬೂದಿಯಾಗಿತ್ತು.
ಯುದ್ಧ ಆಗಬೇಕೆನ್ನುವರು ಒಂಚೂರು ಚರಿತ್ರೆ ಓದಲಿ. ಯುದ್ಧಕ್ಕೆ ಹಚ್ಚಿ ಗೆದ್ದಾಗ ಬಾವುಟ ನೆಲಕ್ಕೆ ತಿವಿದು ಸಂಭ್ರಮ, ಸೋತಾಗ ತಣ್ಣನೆಯ ಒಪ್ಪಂದ ಸತ್ತವರು ಸಾಮಾನ್ಯ ಜನ ಮಾತ್ರ. ಜರ್ಮನ ಸೈನಿಕನೊಬ್ಬ ಯುದ್ಧ ಮುಗಿದ ನಂತರ ಹೊಟ್ಟೆ ಪಾಡಿಗೆ ಕಿರಾಣಿ ಅಂಗಡಿಯೊಂದು ತೆರೆಯುತ್ತಾನೆ...
ಭೂಮ್ಯಾಕಾಶದ ಅನಂತದೊಳಗೆ ಲೆಕ್ಕವಿಲ್ಲದಷ್ಟು ವಿಸ್ಮಯಗಳು ಕೂಡಿರುವಾಗ ಜಾತಿ, ಮತ ಅಂತ ಗುದ್ದಾಡುತ್ತಿದ್ದೆವೆ. " ಸಾಯುವಾಗ ನನ್ನಜ್ಜಿ ಹೇಳಿದ ಹಾಡುಗಳು ಬರೆದುಕೊಳ್ಳಲಿಲ್ಲವಲ್ಲ ಎನ್ನುವ ನೋವು ಕಾಡಬೇಕು ಎಂದು ಎಲ್ಲೋ ಲಂಕೇಶ್ ಹೇಳುತ್ತಾರೆ. ತರಿಕೇರಿ ಸರ್ ಹೇಳುವ ಹಾಗೇ ನಮ್ಮ ಭಾರತ ಬಹುತ್ವಗಳಿಂದ ಕೂಡಿ ಒಗ್ಗಟ್ಟಾಗಿದೆ. ಸಾಂಸ್ಕೃತಿಕ ರಾಜಕಾರಣವಂತೂ ಪುರೋಹಿತಶಾಹಿಗಳು ತುಂಬಾ ನೀಟಾಗಿ ಎಲ್ಲದರ ಮೇಲೆಯು ಪ್ರಯೋಗಿಸುತ್ತಿದ್ದಾರೆ. ವಿಜ್ಞಾನಿಗಳ ಮತ್ತು ಕಲಾವಿದರನ್ನು ನೋಡುವಾಗ ಖುಷಿ ಉಕ್ಕಿ ಬರುತ್ತದೆ. ನಾವು ಮಕ್ಕಳಿಗೆ ಹೇಗಾದರೂ ಮಾಡಿ ಸಾಧನೆ ಮಾಡಿಯಂತ ಹೇಳುತ್ತಿದ್ದೆವೆ ಹೊರತು ಸಾಹಸಗಳ ಬಗ್ಗೆ ಹೊಸತನಗಳ ಬಗ್ಗೆ ಮಾತಾಡುವುದೆಯಿಲ್ಲ...
" ಆಕಾಶದ ನಕ್ಷತ್ರಗಳು ದಿಟ್ಟಿಸುವಾಗ ನಾವೆಲ್ಲ ಎಂತಹ ಸುಂದರ ಪ್ರಪಂಚದಲ್ಲಿ ಬದಕುತ್ತಿದ್ದೆವಲ್ಲವೆ ?
- ಕಪಿಲ್ ಪಿ. ಹುಮನಾಬಾದೆ.
27/7/2017.
No comments:
Post a Comment