ತೆರೆದ ದಾರಿ-ಪುಸ್ತಕ ವಿಮರ್ಶೆ
ಕಾದಂಬರಿ-ಬದುಕೆಂಬ ಬೇತಾಳ
ಲೇಖಕರು-ಜಬಿಲಾಲ ಮುಲ್ಲಾ
ಸಾಧಿಸಬೇಕು ಎಂದು ಹೊರಟರೆ ದಾರಿಯಲ್ಲಿ ಸುಮಾರು ನೋವುಗಳ ಅಡ್ಡ ಬರುತ್ತದೆ. ಆದರೆ ಎದೆಗುಂದದೆ ಒಂದು ಹೆಣ್ಣು ಮಗಳು ತನ್ನ ತಂದೆ ತಾಯಿಗೆ ತಗಲಿದ "ಎಚ್ ಐ ವಿ"ರೋಗದ ಬಗ್ಗೆ ಊರಿನವರ ವರ್ತನೆಯಿಂದ ಮನಸ್ಸಿಗೆ ನಾಟಿ ಇದಕ್ಕೆ ನಾಂದಿ ಹಾಡಬೇಕು ಎಂದು ಇತ್ಯರ್ಥ ಮಾಡಿ ಇದರ ಸುತ್ತ ಹೆಣೆದಿರುವ ಕಥೆಯ "ಬುದುಕೆಂಬ ಬೇತಾಳ" ಕಾದಂಬರಿ ಈ ಕಾದಂಬರಿಗೆ ಬಂದ ಟ್ಯಾಗ್ ಲೈನ್ "ಸಾವಿನಲ್ಲೂ ಬದುಕು ಕಂಡುಕೊಂಡ ಸಾವಿತ್ರಿ" ಇದು ಲೇಖಕರ ವಿಷಯ ವಸ್ತು ಮತ್ತು ಟ್ಯಾಗ್ ಲೈನ್ ಗೆ ಬಹಳ ಹತ್ತಿರವಾಗುವಂತೆ ಅಷ್ಟೆ ಚೆನ್ನಾಗಿ ಕಥೆ ಕಟ್ಟವ ಕೆಲಸ ಮಾಡಿದ್ದಾರೆ.
ಇಲ್ಲಿ ಬರುವ ಕೆಲವು ಪಾತ್ರಗಳಂತು ಬಹಳ ಕಾಡುವುದ ಮುಖ್ಯವಾಗಿ ಸಂಜಯ್ ನ ಪಾತ್ರ.
ಕೆಲವೊಮ್ಮೆ ಕೈ ತಪ್ಪಿ ಆದ ತಪ್ಪು ಇನ್ನೊಬ್ಬರ ಮನಸ್ಸಿನ ಮೇಲೆ ಬಹಳ ಗಂಭೀರ ಪರಿಣಾಮ ಬೀರುತ್ತದೆ ಅದೆ ರೀತಿ ಸಂಜಯನಿಗೆ ಮೊದಲು ಬೇಕಾದ ಸಾವಿತ್ರಿ ಪ್ರೇಮ ಅವರ ತಂದೆಗೆ ಇರುವ ಮಾರಕ ರೋಗ HIV ಇದೆ ಎಂದು ಗೊತ್ತು ಆದ ಮೇಲೆ. ಅವಳನ್ನು ನಿರಾಕರಿಸಿ ಬೇರೆ ಹುಡಿಗಿಯ ಹರಿಸಿ ಹೋದ ಸಂಜಯ್. ಮತ್ತೆ ಅವಳ ಆಶ್ರಯಕ್ಕೆ ಬಂದು ತನ್ನ ಕುಟುಂಬವೇ ಆಶ್ರಮದಲ್ಲಿ ಉಳಿಯುವುದೂ ಕಾಲಚಕ್ರದಲ್ಲಿ ಹೇಗಾದರೂ ನಡೆಯಬಹುದು ಜೀವನದ ಗಾಲಿ ಮೇಲೆ ಕೆಳಗೆ ಆಗ್ಲೇ ಬೇಕು ಅದೆ ಜೀವನ ಎನ್ನುವುದನ್ನು ಸಾಬೀತುಪಡಿಸಿದ್ದನ್ನು ಮೆಚ್ಚಲೇಬೇಕು.
ಇನ್ನೂ ರಾಮಣ್ಣನಿಗೆ ಏಡ್ಸ್ ಬಂದಿದ್ದು ಸ್ವಲ್ಪ ವಿಚಿತ್ರ ಅನಿಸುತ್ತದೆ ನನಗೆ. ಎರಡು ವರ್ಷ ಹಿಂದೆ ಆಸ್ಪತ್ರೆಯಲ್ಲಿ ಒಂದು ಸೂಜಿಯಿಂದ ತಗಲಿದೆ ಎಂದು ಹೇಳಿದಾಗ ಇದು ಮಾರಕ ರೋಗ ಇಷ್ಟ ವಿಳಂಬ ಆಗಿದ್ದು ಹೇಗೆ ಎಂದು ನನ್ನೂಳಗೆ ಸ್ವಲ್ಪ ಗೊಂದಲ ಶುರುವಾಗಿತ್ತು .ಇದರ ಬಗ್ಗೆ ನನ್ನ ಸ್ನೇಹಿತ ವಿಜ್ಞಾನ ವಿದ್ಯಾರ್ಥಿಯಾದ ವಿರೇಶ ನಾಯಕ ಅವರೊಂದಿಗೆ ಚರ್ಚಿಸಿದಾಗ. ಸ್ವಲ್ಪ ಸಮಾಧಾನ ಆಯ್ತು ಈ ಏಡ್ಸ್ ರೋಗ ಅನ್ನೋದು ಇನ್ನೊಬ್ಬರಿಗೆ ಚುಚ್ಚುಮದ್ದು ಬಳಿಸಿದ ತಕ್ಷಣ ಅವರ ಸೋಂಕು cells ನಮ್ಮ cells ಗಳಜೊತೆ ಬೆರೆತು ನಮ್ಮ ದೇಹದಲ್ಲಿನ antibody ಜೊತೆ ಹೊಂದಾಣಿಕೆ ಮಾಡಿಕೊಂಡು ಕ್ರಮೇಣವಾಗಿ ನಮ್ಮ ದೇಹದಲ್ಲಿರುವ antibody ಜೀವನಿರೋಧಕ ಶಕ್ತಿಯನ್ನು ಕೋಲ್ಲುತ್ತದೆ.ಅದಾದ ಮೇಲೆ ಇಡಿ ದೇಹ HIV ಸೊಂಕಿತ cells ಗಳಿಂದ ಆವೃತವಾಗುತ್ತದೆ ಆದರೆ ಇದರ ಪರಿಣಾಮ ತಕ್ಷಣ ಗೊತ್ತಾಗುವದಿಲ್ಲ ಕೆಲ ಒಮ್ಮೆ ವರ್ಷಗಳೆ ಹೋಗಬಹುದು
HIV ಇಂದ ಆವೃತವಾದ ಮನುಷ್ಯ ಅನೇಕ ಸಾಲು ಸಾಲು ರೋಗಗಳಿಗೆ ತುತ್ತಾಗಿ ಸಾಯುತ್ತಾನೆ ಇದಕ್ಕೆ syndrome(the chain of desease) ಎಂದು ಕರೆಯುತ್ತಾರೆ.
HIV ಗೆ ತುತ್ತಾದ ವೈಕ್ತಿಗೆ ತಕ್ಷಣವೆ ಅದರ ಪರಿಣಾಮ ಗೊತ್ತಾಗುವದಿಲ್ಲ.ಸಾಮಾನ್ಯ ನೆಗಡಿಯಿಂದ ಹಿಡಿದು ದೊಡ್ಡ ದೊಡ್ಡ ರೋಗದವರೆಗೆ ಆ ಮನುಷ್ಯ ಆವೃತನಾಗುತ್ತಾನೆ.
ಈ HIV ಇದೆಯೋ ಇಲ್ವೊ ಎಂದು confirm ತಿಳಿಯೋಕೆ ಒಂದು ಪರೀಕ್ಷಾ ವಿಧಾನ ಇದೆ ಅದು ELISA(enzyme linked immuno sarbent essy)ಈ ವಿಧಾನದ ಮುಖಾಂತರ ತಿಳಿದುಕೊಳ್ಳಬಹುದು. ಅವನ ಜೊತೆಗೆ ಸುಮಾರು ಹೊತ್ತು ಚರ್ಚೆಮಾಡಿದಗ ಇದು ನನಗೆ ಸಂಗ್ರಹವಾದ ವಿಷಯ ಇಲ್ಲಿ ಲೇಖಕರ ಚಾಣಾಕ್ಷತೆ ಬಹಳ ಮೆಚ್ಚುಳೆ ಬಹಳ ಹಾಳವಾಗಿ ಅದ್ಯಯನ ಮಾಡಿದ್ದೀರಾ ಎಂದು ಬಹಳ ಚೆನ್ನಾಗಿ ಗೊತ್ತಾಗುತ್ತದೆ..
ಇನ್ನೂ ಲೇಖಕರ ಮುಖ್ಯವಾಗಿ ನಿರೂಪಣೆಯಲ್ಲಿ ಬಹಳ ಸೋತಿದ್ದಾರೆ ನಿರೂಪಣೆ ಬಗ್ಗೆ ಇನ್ನೂ ಬಹಳ ಎಚ್ಚರವಹಿಸಬೇಕಾಗಿದೆ.ಇಲ್ಲಿ ಎಲ್ಲಿಯೂ ಪಾತ್ರಗಳು ಮಾತಾಡಿಲ್ಲಾ ಬರಿ ಲೇಖಕರ ಮಾತಾಡುತ್ತಾರೆ ಓದುಗನಿಗೆ ಸ್ವಲ್ಪ ಬೇಜಾರ ಅನಿಸುತ್ತದೆ.
ಇಲ್ಲಿ ಪ್ರೀತಿ ಅಂತಾ ಬಂದಾಗ ಸಿನಿಮಾ ಸಂಭಾಷಣೆಗಳು ಬಹಳ ಬಳಕೆ ಆಗುತ್ತೆ ಇದರ ಬಗ್ಗೆ ಸ್ವಲ್ಪ ಎಚ್ಚರ ವಹಿಸಿಬೇಕಾಗಿದೆ.
ಏನಪ್ಪಾ ಇವನ ಎಲ್ಲರಿಗೂ ಇದೆ ಮಾತು ಹೇಳ್ತಾನೆ ಅಂತ ಓದುಗರ ಅನ್ನಬಹುದು ಈಗಿನ ಕೆಲವು ಲೇಖಕರು ಪ್ರೀತಿ ವಿಷಯ ಬಂದಾಗ ನೇರವಾಗಿ ಸಿನಿಮಾ ಸಂಭಾಷಣೆಯ ಹಾದಿ ಹಿಡಿಯುವುದು ಇದು ಬೇಸರ ತರುವುತ್ತಿದೆ ತಮ್ಮ ಸಾಮರ್ಥ್ಯವನ್ನು ಬಳಿಸಿಕೊಂಡು ಇನ್ನೂ ಹೆಚ್ಚಿಗೆ ರೋಚಕ ಕಥೆ ಕಟ್ಟಬೇಕು. ಎಂದು ಎಲ್ಲರಲ್ಲಿಯೂ ಕೇಳುತ್ತೇನೆ.
ಇನ್ನೂ ಕಾದಂಬರಿಯಲ್ಲಿ ವಿಷಯ ವಸ್ತು ಎಲ್ಲಿಯೂ ವಿಸ್ತರಣೆ ಆಗಿಲ್ಲ ಕಾದಂಬರಿ ಎಷ್ಟು ಬೇಕು ಅಷ್ಟೆ ವಿಷಯವನ್ನು ಹೇಳಿತ್ತಾರೆ ಹೆಚ್ಚಿನ ವಿಷಯ ಬಳಕೆ ಆಗಿಲ್ಲ. ಇದು ಬಹಳ ಮೆಚ್ಚುಗೆ ಆಯ್ತು ಇದು ಪುಟ್ಟ ಕಾದಂಬರಿ ಆದರೂ ಚೊಕ್ಕವಾಗಿ ಮೂಡಿಬಂದಿದೆ ಅಂತ ಹೇಳಬಹುದು..
ಪಿ ಕೆ...?
No comments:
Post a Comment