Tuesday, 4 April 2017

ರಾಜ್ಯ ಮಟ್ಟದ ಕಥೆ ಕವನ ಸ್ಪರ್ಧೆ...

“ಮಡಿಲು ಸ್ನೇಹ ಬಳಗ ಬೆಂಗಳೂರು”

ಇದರ ಯಶಸ್ವಿ ವಾರ್ಷಿಕೋತ್ಸವದ ನಿಮಿತ್ತ ರಾಜ್ಯಮಟ್ಟದ “ಕಥೆ ಹಾಗು ಕವನ” ಸ್ಪರ್ಧೆ

‘ಕಥೆ ಕಟ್ಟೋಣ ಬನ್ನಿ ಹಾಗು ಕವಿತೆ ಹೆಣೆಯೋಣ ಬನ್ನಿ’

ಕಥೆ ಕಟ್ಟೋಣ ಬನ್ನಿ ಹಾಗು ಕವಿತೆ ಹೆಣೆಯೋಣ ಬನ್ನಿ ಹೆಸರಿನಲ್ಲಿ ಉತ್ಸಾಹಿ ಮನಸ್ಸುಗಳಿಗಾಗಿ ನಡೆಯುವ ಈ ಸ್ಪರ್ಧೆ ರಾಜ್ಯ ಮಟ್ಟದ್ದಾಗಿದ್ದು ಅನುಭವಿ ನಿರ್ಣಾಯಕರು ಆರಿಸಿದ ಮೂರು ಅತ್ಯುತ್ತಮ ಕಥೆ ಹಾಗು ಮೂರು ಅತ್ಯುತ್ತಮ ಕವಿತೆಗಳಿಗೆ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು.

ಸ್ಪರ್ಧೆಯ ನಿಯಮಗಳು:-
★ ವಿಷಯದ ಆಯ್ಕೆ ನಿಮ್ಮದೇ,
★ ಒಬ್ಬರು ಒಂದು ಕಥೆ / ಕವಿತೆ ಮಾತ್ರವೇ ಕಳುಹಿಸಬಹುದು
★ ಕಥೆಗೆ 1000-1300 ಪದಗಳ ಮಿತಿ ಇರಲಿ / ಕವಿತೆಗೆ ಪದಗಳ ಮಿತಿ ಇಲ್ಲ.
★ ಈ ಮೊದಲು ಫೇಸ್ಬುಕ್ – ವಾಟ್ಸಪ್- ಪತ್ರಿಕೆಗಳು ಹೀಗೆ ಎಲ್ಲೂ ಪ್ರಕಟಣೆಗೊಂಡಿರಬಾರದು
★ ಅನುವಾದಿತ ಕಥೆ / ಕವಿತೆ ಬೇಡ
★ ಸ್ಪರ್ಧೆಗೆ ಕಳುಹಿಸಿದ ಕಥೆ / ಕವಿತೆ ಹಿಂದಿರುಗಿಸಲಾಗುವುದಿಲ್ಲ, ಸ್ಪರ್ಧೆಗೆ ಕಳುಹಿಸಿದ ಎಲ್ಲಾ ಕಥೆ/ಕವನಗಳ ಹಕ್ಕು *ಮಡಿಲು* ಸಂಸ್ಥೆಯದ್ದಾಗಿರುತ್ತದೆ.
★ ”ನುಡಿ” ಫಾರ್ಮ್ಯಾಟ್ ನಲ್ಲಿ ಟೈಪಿಸಿದ ಕಥೆ/ಕವಿತೆಗಳನ್ನೂ madilusahithyasnehabalaga@gmail.com ಇಲ್ಲಿಗೆ ದಿನಾಂಕ: 30/04/2017 ರ ಒಳಗಾಗಿ ಕಳುಹಿಸಿ., ನಂತರ ಬಂದವು ಸ್ಪರ್ಧೆಗೆ ಅರ್ಹವಲ್ಲ.
★ ಕಥೆ / ಕವಿತೆ ಗಳ ಕೊನೆಯಲ್ಲಿ ತಮ್ಮ ಹೆಸರು ಬರೆಯಬಾರದು, ಪ್ರತ್ಯೇಕ ಪುಟದಲ್ಲಿ ತಮ್ಮ ಹೆಸರು ವಿಳಾಸ ವೃತ್ತಿ ಸಂಪರ್ಕ ಸಂಖ್ಯೆ ಸೇರಿದಂತೆ ಸಂಪೂರ್ಣ ಮಾಹಿತಿ ಒದಗಿಸತಕ್ಕದ್ದು.
★ ನಿಯಮಗಳ ಬದಲಾವಣೆ ಹಾಗು ಫಲಿತಾಂಶ ನಿರ್ಣಯ ನಿರ್ಣಾಯಕರದ್ದೇ ಅಂತಿಮವಾಗಿರುತ್ತದೆ.
★ ಫಲಿತಾಂಶವನ್ನು ಕಾರ್ಯಕ್ರಮಕ್ಕೂ ಮೊದಲೇ ಪ್ರಕಟಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ
https://www.facebook.com/madiluBalaga/?fref=ts
ಹಾಗೂ
https://www.facebook.com/groups/1747617075554627/
ಇಲ್ಲಿಗೆ ಭೇಟಿ ಕೊಡಿ.

ಧನ್ಯವಾದಗಳೊಂದಿಗೆ
ಮಡಿಲು ಸ್ನೇಹ ಬಳಗ ಬೆಂಗಳೂರು.

No comments:

Post a Comment