ಯುದ್ಧ ಮತ್ತು ಶಾಂತಿ- ಲಿಯೋ ಟಾಲ್ ಸ್ಟಾಯ್
ಅನು: ಓ ಎಲ್ ನಾಗಭೂಷಣ ಸ್ವಾಮಿ
ಯುದ್ಧ ಮತ್ತು ಶಾಂತಿ ಕಾದಂಬರಿ ಅವಸರದಲ್ಲಿ ಓದುವ ಪುಸ್ತಕವಲ್ಲ. ಅಯ್ಯೋ, ಇಷ್ಟು ದೊಡ್ಡದು ! ಒಂದು ಸಾವಿರದ ಎಂಟುನೂರು ಪುಟಗಳ ಗಾತ್ರವನ್ನು ಕಂಡು ಅಂಜುವವರಿಗೂ ಇದು ತಕ್ಕುದಲ್ಲ. "ಕಾದಂಬರಿ ಅನ್ನುವುದು ಯಾರಿಗೆ ಕೇವಲ ಕಥೆಯ ಕುತೂಹಲವಲ್ಲವೋ ಅವರು, ಸಾಹಿತ್ಯವೂ ಬದುಕನ್ನು ಕಾಣುವ ದಾರಿ ಅನ್ನುವ ತಿಳಿವಳಿಕೆ ಇರುವವರು ಮಗ್ನರಾಗಬೇಕಾದ ಕೃತಿ"
- ಓ ಎಲ್ ನಾಗಭೂಷಣ ಸ್ವಾಮಿ
ಯುದ್ಧ ಮತ್ತು ಶಾಂತಿ ಓದುತ್ತಿರುವೆ. ಪಾತ್ರಗಳು ಮಾತ್ರ ಮತ್ತೆ ಮತ್ತೆ ಮರೆತು ಹೋಗುತ್ತಿವೆ. ಒಟ್ಟು 500 ಪಾತ್ರಗಳು ಹೊಂದಿರುವ ಈ ಕಾದಂಬರಿಯಲ್ಲಿ ಮುಖ್ಯ ಪಾತ್ರಗಳೆಂದರೆ 50 ಅಂತೆ !
ನಿಧಾನ ಓದಿನ ಮಧ್ಯೆ ಸಂಗ್ರಹಿಸಿದ ಕೆಲವು ಸಾಲುಗಳು: -
"ಸೂಜಿಯ ಕಣ್ಣಿನಲ್ಲಿ ಒಂಟೆ ಬೇಕಾದರೂ ತೂರಿ ಹೋದೀತು, ಆದರೆ ಶ್ರೀಮಂತನಾದವನು ಸ್ವರ್ಗದ ಬಾಗಿಲಿನ ಮೂಲಕ ಸಾಗುವುದು ಬಹಳ ಕಷ್ಟ "
(ಪುಟ ನಂ - 139.)
_____________
"ಅನತೋಲ್, ಬದುಕೆಂದರೆ ತನಗಾಗಿ ಯಾರೋ ಏರ್ಪಾಟು ಮಾಡಿರುವ ಕೊನೆಯಿರದ ಪಾರ್ಟಿ ಅಂದುಕೊಂಡಿದ್ದ"
______________
"ಪಿಯರೆಯು ಅತ್ಯಂತ ಅನಿರೀಕ್ಷಿತವಾಗಿ ಶ್ರೀಮಂತನಾಗಿ ಕೌಂಟ್ ಬೆಝಕೋವ್ ಅನ್ನುವ ಪದವಿಗೆ ಏರಿದ ಮೇಲೆ, ಇದುವರೆಗೆ ಅವನನ್ನು ಲೆಕ್ಕಕ್ಕೇ ಇಟ್ಟಿರದ ಈಗ ಭೇಟಿಯಾಗಿದಿದ್ದರೆ ಬೇಜಾರುಮಾಡಿಕೊಳ್ಳುವ ಲೆಕ್ಕವಿರದಷ್ಟು ಜನರನ್ನು ಕಂಡು ಮಾತಾಡಬೇಕಿತ್ತು "
_______________
" ಪಿಯರೆ ಹೆಲನಳ ಉಡುಪು ಮಾತ್ರ ಮರೆಯಾಗಿರುವ ಅವಳ ಮೈಯ ಚೆಲವು, ಆನಂದಗಳನ್ನು ಕಾಣುತ್ತಾ ಅನುಭವಿಸುತ್ತಿದ್ದ. ಒಮ್ಮೆ ಹೀಗೆ ಕಂಡಮೇಲೆ ಬೇರೆ ಥರ ಕಾಣುವುದು ಅಸಾಧ್ಯವಾಗಿತ್ತು - ಒಮ್ಮೆ ಬಯಲಾದ ರಹಸ್ಯವನ್ನು ಮರಳಿ ಕಟ್ಟಿಕೊಳ್ಳುವುದು ಅಸಾಧ್ಯವಾಗಿರುವ ಹಾಗೆಯೇ..."
_______________
" ಪಿಯರೆ ಇಷ್ಟು ಚಿಕ್ಕ ವಯಸ್ಸಿಗೇ ಇಂಥ ಶ್ರೀಮಂತಿಕೆಯ ಭಾರ ಹೊರಬೇಕಾಗಿ ಬಂದಿದೆಯಲ್ಲ...ಯಾವ ಯಾವ ಪ್ರಲೋಭನೆಗಳಿಗೆ ಒಳಗಾಗುತಾನೋ ಅವನು ! ಈ ಜಗತ್ತಿನಲ್ಲಿ ನಿನಗೆ ಬೇಕಾದುದೇನು ಎಂದು ಯಾರಾದರೂ ಕೇಳಿದರೆ ಬಡ ಭಿಕ್ಷುಕನಿಗಿಂತ ಕಡು ಬಡವಳಾಗಿರುವುದೇ ನನ್ನ ಆಸೆ ಅನ್ನುತ್ತೇನೆ"
- ಪ್ರಿನ್ಸೆಸ್ ಮೇರಿ
________
ಸಂಗ್ರಹ: -
ಕಪಿಲ ಪಿ ಹುಮನಾಬಾದೆ.
No comments:
Post a Comment