Monday, 6 March 2017

ತೆರೆದ-ಮನ ಪುಸ್ತಕ ವಿಮರ್ಶೆ

ತೆರೆದ ಮನ - (ಪುಸ್ತಕ ವಿಮರ್ಶೆ )

ಕೊಡಿಮರ- ಎಚ್ ನಾಗವೇಣಿ (ನೀಳ್ಗತೆ)

ಕನ್ನಡ ಸಾಹಿತ್ಯದ ಮಹಿಳಾ ಬರಹಗಾರ್ತಿಯರಲ್ಲಿಯೇ ವಿಭಿನ್ನವಾಗಿ ಗುರುತಿಸಿಕೊಂಡಿರುವ ನಾಗವೇಣಿಯವರ "ಕೊಡಿಮರ "ಈ ತಿಂಗಳ ಮಯೂರ ಮಾಸ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ..ಈ ಕಥೆಯನ್ನು ನಾನು 3 ಸಾರಿ ಓದಿ ತಿರುವಿ ಹಾಕಿದಂತು ನಿಜ..ತುಳು ನಾಡಿನ ಸಂಸ್ಕೃತಿಯನ್ನು ಅರಿದು ಕುಡಿದವರು, ಇವರ ಕಥೆಗಳೇಲ್ಲ ಮಲೆನಾಡಿನ ಜೀವನಾಡಿಗಳು..

"ಮನುಷ್ಯನೊಬ್ಬ ತನ್ನ ಮನಸ್ಸಿನಾಳದಲ್ಲಿ ಒಂದು ವಸ್ತುವಿಗೆ  ಬೇರು ಬೀಡಲು ಜಾಗ ನೀಡಿದನೆಂದರೆ , ಅವನ ಜೀವನದ ಅರ್ಧಭಾಗವೇ ಆ ವಸ್ತುವಾಗುತ್ತದೆ" ಆ ವಸ್ತುವಿನ ಮುಂದೆ ಜಗತ್ತಿನ ತತ್ವಜ್ಞಾನಗಳು, ದೇವರು ದಿಂಡರು ಎಲ್ಲವೂ ಮೂಲೆ ಸೇರುತ್ತದೆ..

ಈ ಕಥೆಯಲ್ಲಿಯು ಆದೆ ಆದರೂ ಸಹಿತ ತಿಂಮ  ಪೂಜಾರಿಯ ಮನಸ್ಸು ಓದುಗನಿಗೂ ಮೀರಿದ ಕಲ್ಪನಾ ಲೋಕದಲ್ಲಿ ಚಲಿಸುತ್ತಿರುತದೆ..ಅವರಪ್ಪ ನೆಟ್ಟು ಬೆಳೆಸಿದ ತೇಗದ ಮರಗಳು,  ದೇವರ ಕಾರ್ಯಕ್ಕೆ ಬೇಕೆಂದು ಕೇಳಿದಾಗ ,ಅಡ್ಡ ಗೋಡೆಯ ಮೇಲೆ ಹಣತೆಯಿಟ್ಟಂತೆ ಉತ್ತರ ಹೇಳುತನಾದರೂ...ಅವನೊಳಗಿನ ಹೊಯ್ದಾಟವೇ ಬೇರೆ..ಯಾರದೋ ಜಾಗದಲ್ಲಿ ಬೆಳಸಿದ ಮರಗಳನ್ನು ,ಆ ಮಾಲಕ ಬಂದು ಕೇಳಿದಾಗ ನಿರಾಕರಿಸಲಾಗದ ಅಸಹಾಯಕತೆಯೆ ಕಥೆಯಾದರು..ಕೊನೆಗೆ ತಿಂಮ ಪೂಜಾರಿ, ಆ ಮರ ಧರೆಗುರುಳಿದಂತೆ ಅವನು ಸಹಿತ ನೊಂದು ಮಣ್ಣು ಸೇರುತಾನೆ. .ಈ ಕಥೆಯೊಳಗೆ ಒಂದು ರೀತಿಯ ಮರದೊಂದಿಗೆ ಕರುಳು ಬಳ್ಳಿಯ ಸಂಬಂಧವಿದೆಯೇ ಹೊರತು..ನಾವಿಲ್ಲಿ ತಿಂಮ ಪೂಚಾರಿ ಪರಿಸರ  ಪ್ರೇಮಿ ಎಂದರೆ ತಪ್ಪಾಗುತ್ತದೆ..ಈ ಕಥೆಯಲ್ಲಿ ಮೂಢನಂಬಿಕೆಯನ್ನು ತಣ್ಣಗೆ ಬೀಸಾಡಿದರು...ಅದು ಒಕ್ಕಲಿಗರ ಮತ್ತು ಬ್ರಾಹ್ಮಣರ  ನಡುವಿನ  ಬೀಡಿಸಲಾಗದ ಬಂಧನದಿಂದ ಬೇರೆ ಕಡೆ ಮುಖ ಮಾಡಿದ ಕಥೆಯಿದು...ಇದರೊಳಗೇನು ಹೊಸತಿಲ್ಲ.ಈ ರೀತಿಯ ವಿಷಯ ವಸ್ತುವಿನ ಕಥೆಗಳಿಗೆ ಕನ್ನಡದಲ್ಲಿ ಬರವಿಲ್ಲ ..ಬಲಿ ಹೆಸರಿನ ಅನೇಕ ಲೇಖಕರ , ಕಥೆಗಳು ಇದೇ ರೀತಿಯ ಒಳ ಸಂರಚನೆ ಹೊಂದಿದರು ಸಹಿತ..ನಾಗವೇಣಿಯವರ ಕಥೆಯನ್ನು ನಾವು ಗಂಭೀರವಾಗಿ ಪರಿಗಣಿಸಲೆಬೇಕಾಗಿದೆ ,ಏಕೆಂದರೆ ತುಳು ಸಂಸ್ಕೃತಿಯ ಅಂತರಾಳದ ಜಟಿಲ ಸಮಸ್ಯೆಗಳು,  ಪರಿಸರದ ನಾಶ, ಮಾನವ ಸಂಬಂಧಗಳು, ಎಲ್ಲದಕ್ಕಿಂತಲೂ ಹೆಚ್ಚಾಗಿ "ಕೊಡಿ ಮರ" ಅದ್ಭುತ ಕಲ್ಪನೆ, ನಡಾವಳಿಯ ಮೇಲೆ ಹೆಣೆದಿರುವದರ ಜೊತೆಗೆ ಬಿಳಿಕೇಪಳ ಮರದವನತಿಯ ನಯವಾದ ಕಥೆಯ ಜೊತೆಗೆ  ಕೇಲ ಹಾಸ್ಯ ಭರಿತ ಉಪಕಥೆಗಳು..ಒಟ್ಟಿನಲ್ಲಿ ಈ ನೀಳ್ಗತೆಯೊಳಗೆ ನಾಗವೇಣಿಯವರು ತಮ್ಮದೇ ಮುದ್ರೆಯೊತಿದಾರೆ..

ಕಥೆಯ ರಚನೆ, ತಂತ್ರ, ಶೈಲಿ ಎಲ್ಲವೂ ಲೇಖಕಿಯ ಗಟ್ಟಿತನವನ್ನು ಸೂಚಿಸುತ್ತದೆ...

ಕಪಿಲ

No comments:

Post a Comment