Wednesday 8 March 2017

ಚಾಂದ್ ಪದ್ಯ (ಕಾವ್ಯ ಮನೆ)

            ಕಣ್ಣಿನ ಕೋಣೆ

ಈ ಕಣ್ಣಿನ ಕೋಣೆಯೋಳಗೆ....
ಚಿಲಕವಿಲ್ಲದ ಬಾಗಿಲ ಬಡಿದಿದ್ದಾರೆ....!!
ಮೈ ಮಾರಿಕೊಂಡ ಮೊಂಬತ್ತಿಯ ಅಳುವಿನಲಿ......
ಮೂಳೆಗಳ ಮುಸುಡಿಗಳು ಮೂಲೆಯಲಿ ನೇತಾಡುತ್ತಿವೆ,,,
ಒಂದೆರಡು ಮೊಳೆ ಈಗಷ್ಟೆ, ಅಂಗೈಯ ತೊರೆದು ಬರುವಾಗ.....!
ಕಣ್ಣ ಕೋಣೆಯ ಹರಿದ ಪರೆದಯಲಿ,
ಕ್ರಿಸ್ತನ ನೆತ್ತರ ನರಳಾಡುತಿದೆ....!!

ಗಡ್ಡ ಬಿಟ್ಟವರ ಗಡಿಯಾರ, ಬೆಳಕ ಕೂಗುವಾಗ....
ಮಸಣದ ಹೆಣಕ್ಕೂ ಮದೀನಾ ನೆನಪಾಗುತದೆ
ದನದ ಮೂಳೆಯಲಿ ದಾರಿಯ ಕೊರೆದು,
ಕಣ್ಣ ಕೋಣೆಯೊಳಗೆ ಕಾಲಿಟ್ಟರೇ,,
ಅದೋ ಅಲ್ಲಿ,,,
ಹೆಜ್ಜೆ ಅಳಿಸಿಕೊಂಡ ಪೈಗಂಬರನ
ಹರಿದ ಟೋಪಿ ನೇತಾಡುತ್ತಿದೆ.....!!

ಈ ಕಣ್ಣ ಕೋಣೆಯ ಗುಡ್ಡದೊಳಗೆ,
ಹದಿನಾರು ಸಾವಿರ ಗುಪ್ತಾಂಗಗಳ ಗುಡಿಯೊಂದಿದೆ.....!!
ನಾರುವ ತುಳಸಿ, ಒಣಗಿದ ನವಿಲಗರಿ ಮುಡಿದ.....,,
ಕೆದರಿದ ತಲೆ ಹೊತ್ತ ಕಲ್ಲಿನ ಗೊಂಬೆ..!!
ಅದೋ, ಕುರುಬನ ಕಂಬಳಿಯ ಒಳ ಬಿಡಲಿಲ್ಲವೆಂದು....... ,,,,
ಕಣ್ಣಿಲ್ಲದ "ಗೀತೆ"ಯ ಎದುರು,
ಕೃಷ್ಣನ ಮುರಿದ ಕೊಳಲು, ಅಳುತ್ತಲೇ ಇದೆ..

ಈ ಕೋಣೆಯೊಳಗೆ "ಅವಳೂ" ಇದ್ದಾಳೆ..!!
ಬೇವಿನ ಮರದಡಿ, ಬಿಕ್ಕುವ ನಾಯಿಯ ಎದುರು......
ನಾರುವ ನಾಲಿಗೆಗೆ ರಕ್ತದಿ ಮಡಿ ಮಾಡಿ.,,,
ಅರೆಬರೆ ಸೀರೆಯುಟ್ಟು, ಮೊಲೆ ಮುಡಿದು..
ಮಳೆ ಗಾಳಿ ಬಿಸಿಲಿನ ಅತ್ಯಾಚಾರದ ಸಂತ್ರಸ್ತೆ!!
ಅದೋ, ಕಣ್ಣಿನ ಕೋಣೆಯಲಿ,,
ಮೊಂಡಾದ ಕಾಳಿಯ ತ್ರಿಶೂಲ ಬಿಕ್ಕುತಲೇ ಇದೆ.... 
ಕಂಬನಿಯ ಕಕ್ಕುತಲೇ ಇದೆ....!!
ಕಣ್ಣಿನ ಕೋಣೆಯೊಳಗೆ...........;

                            ..  ಕವಿಚಂದ್ರ  ..

5 comments: