ಹೇಮಂತಗಾನ(ಕಾದಂಬರಿ) - ವ್ಯಾಸರಾಯ ಬಲ್ಲಾಳ.
1954ರಲ್ಲಿ ಬಂದ ಬಲ್ಲಾಳರ ಹೇಮಂತಗಾನ ಈ ಹೊತ್ತಿಗೆ ಎಷ್ಟು ಪ್ರಸ್ತುತ ? ಅಪ್ರಸ್ತುತ ? ಈ ದ್ವಂದ್ವವಿಟ್ಟುಕೊಂಡೆ ಬರೆಯುತ್ತೇನೆ . ಬಸವರಾಜ ಕಟ್ಟೀಮನಿಯವರ ಜ್ವಾಲಮುಖಿಯ ಮೇಲೆ, ಮಾಡಿ ಮಾಡಿದವರು ಓದಿದವರಿಗೆ ಹೇಮಂತಗಾನ ಸ್ವಾತಂತ್ರ್ಯ ಹೋರಾಟದ ಇನ್ನೊಂದು ಮುಖದನಾವರಣ ಎನಿಸುತ್ತದೆ ಇಲ್ಲಿ ಸ್ವಾತಂತ್ರ್ಯ ಬಂದನಂತರವು ಮುಂದುವರೆಯು ಕಥಾಹಂದರವಿದೆ.
ಜ್ವಾಲಮುಖಿಯ ಮೇಲೆಯಲ್ಲಿ ಕ್ರಾಂತಿ ಪತ್ರಿಕೆ ಪ್ರಕಟಿಸಲು ಒದ್ದಾಡುವ ಸಂಗಾತಿಗಳು ಇಲ್ಲಿ ಕಹಳೆ !...ಆದರ್ಶವನ್ನೆ ಮೈತುಂಬಿಕೊಂಡಿರುವ ಹುಡುಗ ಅನಂತ ಉಡುಪಿಯಿಂದ ಮುಂಬೈಯಲ್ಲಿ ಬಂದು. ಯಾವುದೋ ಕಂಪನಿಯಲ್ಲಿ ದುಡಿಯುತ್ತಿದ್ದಾನೆ. ಆದರೆ ಆರ್ಥಿಕ ಸಮಾನತೆ, ರಾಜಕೀಯ ಸಮಾನತೆಗಾಗಿ ಹೋರಾಡುತ್ತಲೆಯಿದ್ದಾರೆ ಪತ್ರಿಕೆಯ ಮೂಲಕ ! ಅಲ್ಲೊಂದು ಸಂಘಟನೆ ಕಟ್ಟಿ ಕೆಲಸ ಕಳೆದುಕೊಳ್ಳುತ್ತಾನೆ .ತೀರಾ ಆದರ್ಶಕ್ಕೆ ಜೊತು ಬಿದ್ದು ವೈಯಕ್ತಿಕ ಬದುಕು, ಕುಟುಂಬವನ್ನೆ ಮರೆಯುತ್ತಾನೆ . ರಾಜೀವ, ಸೊಮಾಯಾಜಿ , ಅನಂತ, ಕಹಳೆ ಪತ್ರಿಕೆ, ಭಾರತೀ, ಇಂದಿರೆ, ಪದ್ದು, ಶ್ರೀಪತಿರಾಯರು, ತಲಪಾಡಿಯವರು, ಉಡುಪರು, ಪಾರ್ವತಿ, ನಾಗೇಶ ಒಂದೊಂದು ಪಾತ್ರವೂ ಸಹ ಕಾಡುತ್ತವೆ.
ನಾಳೆ ಎಂಬುದು ನಮ್ಮಗೆ ಪ್ರಶ್ನೆಯೇ.-ಅನಂತನ ಈ ಮಾತು ಇಡೀ ವವ್ಯವಸ್ಥೆಯ ಮೇಲೆ ವಾಕರಿಕೆ ಹುಟ್ಟಿಸುತ್ತದೆ. ಕೇಶವ ಹೇಳಿದ್ದು ನಿಜವಿರಬಹುದು ಗಾಂಧಿ ಹೃದಯಗಳನ್ನು ಕಟ್ಟುತ್ತಿದ್ದಾರೆ ಆದರೆ ಇಗ ಪ್ರಯೋಜನವಿಲ್ಲ. ಕ್ರಾಂತಿಯಾಗಬೇಕು !... ಅನಂತನ ಹೆಂಡತಿ ಭಾರತೀ ಸ್ತ್ರೀಸಹಜ ಯೋಚನೆಗಳು ಹೊಂದಿರುವ ಮತ್ತು ಅದೇ ರೀತಿಯ ಬದುಕು ಬಯಸುತ್ತಿದ್ದಾಳೆ. ಇಂದಿರೆ ?-ಹೋರಾಟದ ಕೆಚ್ಚಿಗೆ ಉತ್ಸವ ಮೂರ್ತಿಯಾಗಿದ್ದಾಳೆ. ಶ್ರೀಪತಿರಾಯರು ಹೋರಾಟದ ಆದರ್ಶ ಬದುಕು ಮತ್ತು ವೈಯಕ್ತಿಕ ಬದುಕು ಎರಡನ್ನೂ ತಣ್ಣಗೆ ಅವಲೋಕಿಸುತ್ತಲೆ ಅನಂತ ಮತ್ತು ಭಾರತೀಗೆ ಜೀವ ತುಂಬುತಿದ್ದಾರೆ.
ಹರಿದ ಚಪ್ಪಲಿಗೆ ಮೊಳೆ ಹೊಡೆಸಲು ಹಣವಿಲ್ಲ, ಮನೆಗೆ ಹೋಗಲು ಬಸ್ಸಿಗೆ ಹಣವಿಲ್ಲ, ಇರಾಣಿ ಅಂಗಡಿಯಲ್ಲಿ ಒಂದು ಲೋಟ ಕಾಫಿಗೂ ಹಣವಿಲ್ಲ, ಮನೆಯ ಬಾಡಿಗೆ, ಹಾಲಿನವಿನಿಗೆ ಹಣ, ಅಕ್ಕಿ ಬ್ಯಾಳಿ ? -ಅನಂತ ಸಮಾಜದ ವ್ಯವಸ್ಥೆಯನ್ನೆ ಬದಲಾಯಿಸುತ್ತೆನೆಂದು ಹೋರಟಲ್ಲಿ ಸಣ್ಣ ದೀವಟಿಗೆ ಹಚ್ಚುವ ಕೆಲಸ ತೀವ್ರವಾಗಿ ಪ್ರಾಮಾಣಿಕವಾಗಿ ಮಾಡ್ತಿದ್ದಾನೆ.
" ಅಣ್ಣ ಮುಂಬೈಯಲ್ಲಷ್ಟೆ ಅಲ್ಲ ಉಡುಪಿಯಲ್ಲಿಯು ಬಡವರಿದ್ದಾರೆಂದು" ತಂಗಿ ಪಾರ್ವತಿ ಪತ್ರ ಬರೆದ್ದಾಗ. ತೀರಾ ಕುಸಿಯುತ್ತಾನೆ. ಉತ್ತಮ ಬದುಕಿಗಾಗಿ ಇಂದು ನಡೆಯುತ್ತಿರುವ ಸಾರ್ವತ್ರಿಕ ಹೋರಾಟವನ್ನೇ ಇನ್ನೊಂದು ರೀತಿಯಲ್ಲಿ ಮಾಡುತ್ತಿದ್ದ ತನ್ನ ಸಂಸಾರದ ಚಿತ್ರ ಕಣ್ಣಮುಂದೆ ಬಂತು.
"ಸಮಗ್ರ ಜಗತ್ತೇ ಅದೇ ರೀತಿ. ಒಂದು ವ್ಯವಸ್ಥಿತ ಜೀವನಕ್ರಮಕ್ಕೆ ಬದಲಾವಣೆಯಂಬುದೇ ಇಲ್ಲ" - ಅನಂತನ ಈ ಮಾತುಗಳು ಅವನಿಗೆ ವೈಯಕ್ತಿಕ ಬದುಕು ಕುಟುಂಬಕ್ಕಿಂತಲೂ ಹೋರ ಜಗತ್ತು ಎಷ್ಟು ಮುಖ್ಯವೆಂದು ತೋರಿಸುತ್ತದೆ ಆದರೆ ಅದೇ ಶ್ರೀಪತಿರಾಯರು " ಅನಂತ ಒಂದು ಜನಾಂಗದ ವ್ಯವಸ್ಥೆಯೆ ಬದಲಾಯಿಸಲು ಹೋರಟವನಿಗೆ, ನನ್ನ ಮಗುವಿಗೆ ನೋವು ಕಾಡಬಾರದು ನೋಡು".
ಕೊನೆಗೂ ಅನಂತ ಇಂದಿರೆಯ ಕೊನೆ ಭೇಟಿಗೆ ಹೋರಾಟಗ ರೈಲಿನ ದುರಂತದಲ್ಲಿ ಸಾಯುತ್ತಾನೆ....
ವೈಯಕ್ತಿಕ ಬದುಕು, ಆದರ್ಶಗಳು ಅದಕ್ಕೆ ಸುತ್ತಲಿನ ಮನುಷ್ಯರು ಸ್ಪಂದಿಸುವ ರೀತಿ , ಬಡವರು, ಆಸ್ಪತ್ರೆ, ಹೇಳಹೆಸರಿಲ್ಲದ ರೋಗಗಳು......
ತನ್ನೊಳಗೆಳೆಂದು ಕೊಂಡು ಓದಿಸಿಕೊಳ್ಳುವ ದುರಂತ ಗಾನವೇ ಹೇಮಂತಗಾನ !!.....
# ಕಪಿಲ ಪಿ ಹುಮನಾಬಾದೆ
13/03/2017.
No comments:
Post a Comment