Thursday 9 March 2017

ಕಡಲ ಬೇಟೆಗಾರ

ಮಳೆ ಹನಿ ಇಣುಕುವ
ತೂತು ಹಂಚುಗಳ ಮನೆಯೊಳಗೆ,
ತೇಪೆ ಹಚ್ಚಿದ ರವಿಕೆತೊಟ್ಟ ತಾಯೊಬ್ಬಳು,
ತನ್ನ ಕರುಳ ಕುಡಿಗೆ
ಎದೆಹಾಲುಣಿಸುವ ಸಮಯಕ್ಕೆಲ್ಲ
ಮಳೆ ನಿಲ್ಲುವುದು,
ನಿಂತ ಮೇಲೆ ಬೀಳುವ ಹನಿಯೂ.

ಗಾಢ ಕತ್ತಲು ಹೆದರುತ್ತದೆ,
ತಾಯಿ ಹಚ್ಚಿದ ಮಗುವಿನ ಕಣ್ಗಳ ಕಾಡಿಗೆಗೆ,
ಕಳ್ಳ ಚಂದಿರ ಇಣುಕುತ್ತಾನೆ ಮೆಲ್ಲ,
ಅವಳು ಹಾಡುವ ಲಾಲಿ ಹಾಡ ಕದ್ದು ಕೇಳುವ ಸಲುವಾಗೆ.

ಹರಿದ ಮಗುವಿನ ಅಂಗಿಗೂ
ಬಣ್ಣ ಬಣ್ಣದ ತೇಪೆಯ ಹಚ್ಚುತಿದ್ದಾಳೆ,
ಭವಿಷ್ಯವೆಲ್ಲ ಬಣ್ಣ ಬಣ್ಣವಾಗಿರಲಿ,
ಕತ್ತಲ ಕಪ್ಪು ಮುಚ್ಚಿರಲೆಂದು.

ಹೊತ್ತು ಮುಳುಗಿದೆ ಈಗ
ಚಂದ್ರ ಸತ್ತಿದ್ದಾನೆ ಅಮವಾಸ್ಯೆ ಬೇರೆ,
ನಕ್ಷತ್ರಗಳೆಲ್ಲ
ಮನೆಯ ಗಳುವಿನಲಿ ತಾವಾಗೇ ಪೋಣಿಸಿದಂತಿವೆ,
ಮಗುವು ತಾಯ ತೆಕ್ಕೆಯಲಿ,
ನಕ್ಷತ್ರಗಳೋ ಭಿಕ್ಕುತ್ತಿವೆ,
ಮಡಿಲಲ್ಲಿ ಜಾಗವಿಲ್ಲ ಎಲ್ಲವೂ ಅನಾಥ.

# ಕಡಲ ಬೇಟೆಗಾರ

6 comments:

  1. ರಸವತ್ತಾಗಿದೆ

    ReplyDelete
  2. ಥ್ಯಾಂಕ್ಸ್

    ReplyDelete
  3. Hello Mr Kapila P Humanabaade
    I am happy to see and read your poem on the photo I had sent to Mayura. This has appeared in June Mayura. Thanks
    Mallesh K S
    ksmallesh@gmail.com
    0821 2500260

    ReplyDelete