ಇತಿಹಾಸ (ಕಥಾಸಂಕಲನ) - ಎಸ್.ದಿವಾಕರ್
ಎಸ್.ದಿವಾಕರ್ ಅವರ ಕಥಾ ಸಂಕಲನವಾದ 'ಇತಿಹಾಸ' ವನ್ನು ಓದಿದೆ. ಬಹುಷಹ ಎಲ್ಲರೂ ಒಂದು ಸಲ ಓದಲೇಬೇಕಾದ ಕೃತಿ ಇದು. ಇಲ್ಲಿನ ಭಾಷೆಯ ಬಳಕೆ, ಕಥೆಯ ವಿಷಯವಸ್ತು, ನಿರೂಪಣಾ ವಿಧಾನ, ಮತ್ತು ಕಥೆ ರಚಿಸಲ್ಪಟ್ಟ ಕಾಲಮಾನಕ್ಕಾಗಿ ಈ ಕೃತಿಯನ್ನು ಓದಬೇಕು.
ಈ ಕೃತಿಯಲ್ಲಿ ಒಟ್ಟು ೯ ಕಥೆಗಳಿವೆ. ಭಾಗ-೧ರ ಕತೆಗಳು ವಾಸ್ತವತೆಯನ್ನು ಹಿಡಿದಿಟ್ಟರೆ, ಭಾಗ-೨ರ ಕತೆಗಳು ಕಾಲ್ಪನಿಕ ಕಥಾಜಗತ್ತನ್ನು ಪರಿಚಯಿಸುತ್ತವೆ.
ಮೊದಲಕ ಕತೆಯಾದ 'ಕ್ರೌರ್ಯ' ಕತೆಯು ಬಹಳ ವಿಶಿಷ್ಟವಾದುದು ಕ್ರೌರ್ಯದ ಹುಡುಕಾಟಕ್ಕೆ ನಿಂತರೆ ಪ್ರತಿ ಜೀವಿಯಲ್ಲಿಯೂ ನಾವು ಕ್ರೌರ್ಯವನ್ನು ಕಾಣುತ್ತೇವೆ. ಈ ಮಾತಿನಂತೆ ಇಲ್ಲಿನ ಮಾನವರಲ್ಲಿಯ ಕ್ರೌರ್ಯದ ಚಿತ್ರಣ ಅಮಾಯಕರ ಮೇಲೆ ಬೆಳಕನ್ನು ಚೆಲ್ಲುತ್ತದೆ. ಒಂದು ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಹುಟ್ಟಿನಿಂದ ಪೋಲಿಯೊ ರೋಗಕ್ಕೆ ತುತ್ತಾಗುತ್ತಾಳೆ. ಮನೆಯಲ್ಲಿ ತಂದೆ ತಾಯಿಗೆ ಭಾರವಾಗಿ ಕಾಣುವ ಆಕೆಯ ದೇಹದ ಅಂಗಾಂಗದಿಂದ ಕಡಿಮೆ ಇದ್ದರೂ ಆಕೆಯಲ್ಲಿನ ಪ್ರೀತಿಗೇನು ಬರವಿಲ್ಲ. ದಾರಿಯಲ್ಲಿ ಹೋಗುವ ಹುಡುಗ ಅಚಾನಕ್ಕಾಗಿ ಗುದ್ದಿದಾಗ ಈಕೆ ಕೆಂಪಾಗುತ್ತಾಳೆ, ಅವನಲ್ಲಿ ಪ್ರೀತಿಯನ್ನು ಹಂಬಲಿಸುತ್ತಾಳೆ. ಪದೆ-ಪದೆ ಅವನ ಪ್ರೇಮವನ್ನು ಹಂಬಲಿಸಿ ಹೋಗುವಾಗ ಕ್ರೌರ್ಯವೊಂದು ಆಕೆಯ ಮೇಲೆರಗುತ್ತದೆ. ನಂತರದಲ್ಲಿ ಆಕೆಯ ಅಹಾಯಕ್ಕೆ ಬಂದವನಲ್ಲೂ ಪ್ರೇಮಕ್ಕಾಗಿ ಹಂಬಲಿಸುತ್ತಾಳೆ, ನಿವೇದಿಸುತ್ತಾಳೆ. ತನಗೊಂದು ಪ್ರೀತಿಯನ್ನು ಕೊಡುವ ಜೀವಕ್ಕೆ ಹಂಬಲಿಸುವ ಈ ' ಆಲಮೇಲು' ಒದೆಡೆಯಾದರೆ, ಕ್ರೌರ್ಯವೊಂದು ಎರಗಿದಾಗ ಸಹಾಯಕ್ಕೆ ಬಾರದೆ ಈಕೆಯ ಪರ್ಸು ಮತ್ತು ಈಕೆಯನ್ನು ಇರಿದ ಚೂರಿಯನ್ನು ಕೊಂಡೊಯ್ಯುವ ಹೆಂಗಸರು, ಕ್ರೌರ್ಯದ ಪ್ರತಿನಿಧಿಗಳಾಗಿ ನಮ್ಮೆದುರು ನಿಲ್ಲುತ್ತಾರೆ.
'ಅನಾಥರು' ಎಂಬ ಇನ್ನೊಂದು ಕತೆಯಲ್ಲಿ, ನಗರ ಜೀವನದ ದುರಂತಗಳನ್ನು ಹೇಳುವ ಈ ಕಥೆ, ತಮ್ಮ ಇಡೀ ಜೀವನವನ್ನ ಹಳ್ಳಿಯಲ್ಲಿ ಕಳೆದ ದಂಪತಿಗಳು ತಮ್ಮ ಕನಸೆಂಬಂತೆ ನಗರದಲ್ಲಿ ಒಂದು ಮನೆಯನ್ನು ಖರೀದಿಸಿ ಅಲ್ಲಿಯೇ ವಾಸಿಸುವ ಇವರು ಮಾನವೀಯತೆಯ, ಪ್ರೀತಿಯ, ಸಹಕಾರದ,ಕರುಣೆಯ ಪ್ರತಿನಿಧಿಗಳಾಗಿನಮಗೆ ಕಂಡರೆ, ಮಾನವೀಯತೆಯೇ ಇಲ್ಲದ, ಪ್ರೀತಿಯೇ ಕಾಣದ, ಕರಿಣೆಯೇ ಗೊತ್ತಿಲ್ಲದ ವ್ಯಕ್ತಿತ್ವಗಳು ಎದುರಾದಾಗ, ದಂಪತಿಗಳ ಮನಸ್ಥಿತಿಯ ತಲ್ಲಣಗಳ ಕಥನವೇ ಈ 'ಅನಾಥರು' ಕಥೆಯಾಗಿದೆ.
ಇನ್ನೊಂದು ಕತೆ 'ನೆಲೆ' ಯಲ್ಲಿ ನಾವು ಕಥೆಯನ್ನು ಹುಡುಕಬೇಕಾಗುತ್ತದೆ. ಪ್ರೀತಿಯನ್ನು ಹಂಬಲಿಸಿ ಬರುವ ಹೆಣ್ಣು, ಮದುವೆಯಾದ ಮೇಲೆ ಆಕೆಗಾಗುವ ಒಂಟಿತನ ಮತ್ತು ಮನೆ ಮಮದಿರುವ ಕೊಳಚೆಪ್ರದೇಶದ ಜನರ ಬದುಕಿನೊಂದಿಗೆ ಈಕೆಯ ಸಂಘರ್ಷವೇ 'ನೆಲೆ'ಯಾಗಿಗೆ.
ಮತ್ತೊದು ಕಥೆ 'ಮೃತ್ಯುಂಜಯ' ವು ಪತ್ತೇದಾರಿ ಕಥೆಯಂತೆ ಕಂಡುಬರುತ್ತದೆ. ಮೃತ್ಯುಂಜಯ ಎನ್ನುವ ಸತ್ತ ದೇಹದ ಪತ್ತೆಹಚ್ಚಿ ಹೋದಾಗ ಅದೆಷ್ಟೋ ಅರಿಯದ ವಿಷಯಗಳು ಗೊತ್ತಾಗುತ್ತವೆ. ಸತ್ತ ದೇಹದಲ್ಲಿ ಈಗ ಜೀವೆಂಬುದು ಇದ್ದರೆ!, ನಾನು ಮನೆಗೆ ಕರೆದುಕೊಂಡು ಹೊದಾಗ ಅಪ್ಪ,ಅಮ್ಮ, ತಂಗಿಯರ ಸಿಡುಕಿನ ನೊಟ, ಈ ದೇಹ ತೋರುವ ಪ್ರೀತಿ ಕಲ್ಪನಾಲೋಕದಲ್ಲಿ ಮಿಂದೆದ್ದು ಬರುತ್ತದೆ ಈ ಕಥೆ....
'ಇತಿಹಾಸ' ಕಥೆಯಲ್ಲಿ ಮತ್ತೆ ಕ್ರೌರ್ಯ ನಮ್ಮೆದೆಯ ಬಾಗಿಲನ್ನು ತಟ್ಟುತ್ತದೆ. ಇನ್ನು ಭಾಗ ಎರಡರ ಎಲ್ಲ ಕತೆಗಳು ಹೆಚ್ಚು ಕಲ್ಪನಾಲೋಕದಲ್ಲಿ ಇದ್ದು, ಲೇಖಕರ ಭಯಂಕರ ಕಲ್ಪನಾಶಕ್ತಿಯು ನಮ್ಮನ್ನು ಸೆರೆಹಿಡಿಯುತ್ತವೆ. 'ಪ್ರಾಣದೇವರು' ಕತೆಯಲ್ಲಿ ಹೃದಯಗಳ ಗೋಪುರಕಟ್ಟುವ ಕಥನವಂತೂ ಅದ್ಭುತ.
ಹಲವಾರು ಕತೆಗಳಲ್ಲಿ ತಮಿಳುನಾಡಿನ ಘಮ ಬರುತ್ತದೆ. ಎಮ್.ಜಿ.ಆರ್ ಚಿತ್ರವಿರುವ ಸನ್ನಿವೇಶಗಳು ಮರುಕಳಿಸುತ್ತವೆ. ದಿವಾಕರ್ ಅವರ ಕತೆಗಳನ್ನು ನಾವು ಓದಲೇಬೇಕು. ಬಹಳ ಸರಳವಾದ ಬರವಣಿಗೆ, ಅಲ್ಲಿನ ಪಾತ್ರಪೋಷಣೆಗಳು ಮತ್ತು ಕಥೆಗಳಲ್ಲಿನ ವ್ಯಂಗ್ಯತೆ ಓದುಗನಿಗೆ ಗಮನಸೆಳೆಯುತ್ತವೆ. ಉಳಿದಂತೆ ಲೇಖಕರಿಗೆ ಕ್ರೌರ್ಯ, ಪ್ರೀತಿ, ಆಧುನಿಕತೆಯಡೆಗೆ ಜಗತ್ತಿವ ವಾಲುವಿಕೆ ತುಂಬಾನೇ ಕಾಡಿದೆ.
- ಶಾಂತೇಶ ಕೋಡ್ಲೆ (ಕಲಬುರಗಿ).
No comments:
Post a Comment